Advertisement
ಈವರೆಗಿನ ಐಸಿಸಿ ವಿಶ್ವಕಪ್ ಪಂದ್ಯಗಳ ಚರಿತ್ರೆಯನ್ನು ಅವಲೋಕಿಸುವಾಗ ಅಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಪಾಕಿಸ್ಥಾನ ಸ್ಪಷ್ಟ ಮೇಲುಗೈ ಸಾಧಿಸಿರುವುದು ಅರಿವಿಗೆ ಬರುತ್ತದೆ. ಇನ್ನೊಂದು ಅಂಕಿಅಂಶದಂತೆ, ಬ್ಲ್ಯಾಕ್ ಕ್ಯಾಪ್ಸ್ ಪಡೆ ಕಳೆದ 7 ವರ್ಷಗಳಲ್ಲಿ 3 ವಿಶ್ವಕಪ್ ಫೈನಲ್‌ಗಳಲ್ಲಿ ಸೋತಿದೆ. 2015 ಮತ್ತು 2019ರ ಏಕದಿನ ವಿಶ್ವಕಪ್ ಹಾಗೂ ಕಳೆದ ಸಲದ ಟಿ20 ವಿಶ್ವಕಪ್ ಪ್ರಶಸ್ತಿ ಸಮರದಲ್ಲಿ ಕಿವೀಸ್ ಮುಗ್ಗರಿಸಿದೆ.
Related Articles
ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಸಮತೋಲನ ಹೊಂದಿರುವ ತಂಡ. ಶಿಸ್ತಿನ ಆಟಕ್ಕೆ ಹೆಸರುವಾಸಿ. ಸೆಮಿಫೈನಲ್‌ಗೆ ಲಗ್ಗೆ ಹಾಕಿದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಉದ್ಘಾಟನ ಪಂದ್ಯದಲ್ಲಿ ಚಾಂಪಿಯನ್ ಆಸ್ಟ್ರೇಲಿಯವನ್ನೇ ಮಣಿಸಿ ಶುಭಾರಂಭ ಮಾಡಿತ್ತು.
Advertisement
ನಾಯಕ ಕೇನ್ ವಿಲಿಯಮ್ಸನ್ ಫಾರ್ಮ್ ಗೆ ಮರಳಿರುವುದು ನ್ಯೂಜಿಲ್ಯಾಂಡ್ ಪಾಲಿಗೆ ಬಿಗ್ ಪ್ಲಸ್. ಪ್ರಚಂಡ ಫಾರ್ಮ್ನಲ್ಲಿರುವ ಗ್ಲೆನ್ ಫಿಲಿಪ್ಸ್ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ಸೂಪರ್-12 ಹಂತದ ಕೊನೆಯ 3 ಪಂದ್ಯಗಳಲ್ಲಿ ಒಂದು ಶತಕ, ಒಂದು ಅರ್ಧ ಶತಕ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿದ್ದಾರೆ.
ಆರಂಭಿಕರಾದ ಫಿನ್ ಅಲೆನ್-ಡೇವನ್ ಕಾನ್ವೆ, ಮಧ್ಯಮ ಕ್ರಮಾಂಕದ ಡ್ಯಾರಿಲ್ ಮಿಚೆಲ್, ಆಲ್‌ರೌಂಡರ್‌ಗಳಾದ ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್ ಅವರಿಂದ ಕಿವೀಸ್ ಬ್ಯಾಟಿಂಗ್ ಲೈನ್‌ಅಪ್ ಅತ್ಯಂತ ಬಲಿಷ್ಠವಾಗಿಯೇ ಗೋಚರಿಸುತ್ತಿದೆ. ಬೌಲಿಂಗ್ ವಿಭಾಗ ಹಳೆ ಹುಲಿಗಳಾದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಅವರಿಂದ ಘಾತಕವಾಗಿ ಗೋಚರಿಸುತ್ತಿದೆ. ಲಾಕೀ ಫರ್ಗ್ಯುಸನ್ ಕೂಡ ಅಪಾಯಕಾರಿ. ಸ್ಪಿನ್ನಿಗೆ ಐಶ್ ಸೋಧಿ ಇದ್ದಾರೆ. ಕಿವೀಸ್ ಪಡೆ ಆಸ್ಟ್ರೇಲಿಯ ಮತ್ತು ಶ್ರೀಲಂಕಾವನ್ನು ಬಗ್ಗುಬಡಿದದ್ದು ಇದೇ ಸಿಡ್ನಿ ಅಂಗಳದಲ್ಲಿ ಎಂಬುದನ್ನು ಮರೆಯುವಂತಿಲ್ಲ!
ಪಾಕಿಸ್ಥಾನದ ಲಕ್ಕಿ ಜರ್ನಿಈ ಟೂರ್ನಿಯಲ್ಲಿ ಪಾಕಿಸ್ಥಾನದ್ದು ಸಂಪೂರ್ಣ “ಲಕ್ಕಿ ಜರ್ನಿ’. ಸತತ ಎರಡು ಸೋಲುಗಳ ಆಘಾತಕ್ಕೆ ಸಿಲುಕಿ ದಾಗಲೇ ಅದು ಕೂಟದಿಂದ ನಿರ್ಗಮಿಸಬೇಕಿತ್ತು. ಆದರೆ ದಕ್ಷಿಣ ಆಫ್ರಿಕಾವನ್ನು ಕೊನೆಯ ಹಂತದಲ್ಲಿ ಬಗ್ಗುಬಡಿದು ಶಾಕ್ ಕೊಟ್ಟ ನೆದರ್ಲೆಂಡ್ಸ್ ಪಾಕಿಸ್ಥಾನಕ್ಕೆ ಲೈಫ್ ಕೊಟ್ಟಿತು. ಈ ಅದೃಷ್ಟ ಎನ್ನುವುದು ಪಾಕಿಸ್ಥಾನವನ್ನು ನಾಕೌಟ್‌ನಲ್ಲೂ ಕೈಹಿಡಿದೀತೇ ಎಂಬುದು ಎಲ್ಲರ ಕೌತುಕ. ಅಂದಮಾತ್ರಕ್ಕೆ ಪಾಕ್ ಖಂಡಿತವಾಗಿಯೂ ದುರ್ಬಲವಲ್ಲ. ಟಿ20 ಸ್ಪೆಷಲಿಸ್ಟ್ ಆಟಗಾರರನ್ನೇ ಹೊಂದಿದೆ. ಆದರೆ ಇಲ್ಲಿ ಅನೇಕರ ಫಾರ್ಮ್ ಕೈಕೊಟ್ಟಿದೆ. ವಿಶ್ವ ದರ್ಜೆಯ ಆರಂಭಿಕ ರೆಂಬ ಖ್ಯಾತಿಯ ಮೊಹಮ್ಮದ್ ರಿಜ್ವಾನ್-ಬಾಬರ್ ಆಜಂ ತೀವ್ರ ರನ್ ಬರಗಾಲದಲ್ಲಿದ್ದಾರೆ. ಆದರೆ ಮಿಡ್ಲ್ ಆರ್ಡರ್ ಬಲಿಷ್ಠವಾಗಿದೆ. ಹ್ಯಾರಿಸ್, ಮಸೂದ್, ಇಫ್ತಿಖಾರ್, ನವಾಜ್, ಆಲ್‌ರೌಂಡರ್ ಶಾದಾಬ್ ಖಾನ್ ಅವರೆಲ್ಲ ಅಲ್ಲಲ್ಲಿ ಅಪಾಯಕಾರಿಗಳಾಗಿ ಗೋಚರಿಸಿದ್ದಾರೆ.
ಪಾಕಿಸ್ಥಾನ ತನ್ನ ಘಾತಕ ಬೌಲಿಂಗ್ ಪಡೆಯನ್ನು ಹೆಚ್ಚು ಅವಲಂಬಿಸಿದೆ. ಅಫ್ರಿದಿ, ನಸೀಮ್ ಶಾ, ರವೂಫ್, ವಾಸಿಮ್, ಶಾದಾಬ್ ಖಾನ್ ಅವರ ದಾಳಿ ಯಶಸ್ವಿಯಾದರೆ ಬಾಬರ್ ಪಡೆ ಮತ್ತೊಂದು ಫೈನಲ್ ಕಂಡೀತು. ಪಾಕಿಸ್ಥಾನಕ್ಕೆ ಸೆಮಿಫೈನಲ್ ಲಕ್!
ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಪಾಕಿಸ್ಥಾನ-ನ್ಯೂಜಿಲ್ಯಾಂಡ್ 3 ಸಲ ಮುಖಾಮುಖಿಯಾಗಿವೆ. ಮೂರರಲ್ಲೂ ಪಾಕಿಸ್ಥಾನ ಗೆದ್ದಿದೆ. ಈ ಕಾರಣಕ್ಕೆ ಪಾಕ್ ಸೆಮಿಫೈನಲ್ ಲಕ್ ಹೊಂದಿರುವ ತಂಡ ಎನಿಸಿ ಕೊಂಡಿದೆ. ಏಕದಿನ ವಿಶ್ವಕಪ್‌ನಲ್ಲಿ 2 ಸಲ, ಟಿ20 ವಿಶ್ವಕಪ್ ನಲ್ಲಿ ಒಂದು ಸಲ ಪಾಕಿಸ್ಥಾನ-ನ್ಯೂಜಿಲ್ಯಾಂಡ್ ಪರಸ್ಪರ ಎದು ರಾಗಿವೆ. ನ್ಯೂಜಿಲ್ಯಾಂಡ್ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಇತ್ತಂಡಗಳು ಮೊದಲ ಸಲ ಸೆಮಿಫೈನಲ್ ಸೆಣಸಾಟಕ್ಕೆ ಇಳಿದದ್ದು 1992ರ ಏಕದಿನ ವಿಶ್ವಕಪ್‌ನಲ್ಲಿ. ಅಂದು ಆಕ್ಲಂಡ್‌ನಲ್ಲಿ ನಡೆದ ಸೆಣಸಾಟದಲ್ಲಿ ಆತಿಥೇಯ ಕಿವೀಸ್‌ಗೆ 4 ವಿಕೆಟ್‌ಗಳ ಸೋಲುಣಿಸಿದ ಹಿರಿಮೆ ಪಾಕಿಸ್ಥಾನದ್ದು. ಚೇಸಿಂಗ್ ವೇಳೆ ಇಂಝಮಾಮ್ ಉಲ್ ಹಕ್ 37 ಎಸೆತ ಗಳಿಂದ 60 ರನ್ ಬಾರಿಸಿ ಗೆಲುವಿನ ಹೀರೋ ಎನಿಸಿದ್ದರು. ಮ್ಯಾಂಚೆಸ್ಟರ್‌ನಲ್ಲಿ ನಡೆದ 1999ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪಾಕಿಸ್ಥಾನ 9 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡ್‌ಗೆ ಆಘಾತವಿಕ್ಕಿತ್ತು. ಶೋಯಿಬ್ ಅಖ್ತರ್ 3 ವಿಕೆಟ್ ಉರುಳಿಸಿದರೆ, ಚೇಸಿಂಗ್ ವೇಳೆ ಸಯೀದ್ ಅನ್ವರ್ ಅಜೇಯ 113 ರನ್ ಹಾಗೂ ಅವರ ಜತೆಗಾರ ವಜಹತುಲ್ಲ ವಸ್ತಿ 84 ರನ್ ಬಾರಿಸಿ ಕಿವೀಸ್ ಬೌಲರ್‌ಗಳಿಗೆ ನೀರು ಕುಡಿಸಿದ್ದರು. ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇತ್ತಂಡಗಳು ಎದುರಾದದ್ದು ಒಮ್ಮೆ ಮಾತ್ರ. ಅದು ಚೊಚ್ಚಲ ವಿಶ್ವಕಪ್‌ನ ಕೇಪ್‌ಟೌನ್ ಪಂದ್ಯ. ಪಾಕಿಸ್ಥಾನವಿಲ್ಲಿ 6 ವಿಕೆಟ್‌ಗಳಿಂದ ಗೆದ್ದು ಬಂದಿತ್ತು. ಪಾಕ್ ಓಪನರ್ ಇಮ್ರಾನ್ ನಜೀರ್ ಈ ಪಂದ್ಯದ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾಗಿದ್ದರು (59). ನ್ಯೂಜಿಲ್ಯಾಂಡ್ ಸಾಗಿ ಬಂದ ಹಾದಿ
1. ಆಸ್ಟ್ರೇಲಿಯ ವಿರುದ್ಧ 89 ರನ್ ಜಯ
2. ಅಫ್ಘಾನಿಸ್ಥಾನ ಪಂದ್ಯ ರದ್ದು
3. ಶ್ರೀಲಂಕಾ ವಿರುದ್ಧ 65 ರನ್ ಜಯ
4. ಇಂಗ್ಲೆಂಡ್ ವಿರುದ್ಧ 20 ರನ್ ಸೋಲು
5. ಐರ್ಲೆಂಡ್ ವಿರುದ್ಧ 35 ರನ್ ಜಯ ಪಾಕಿಸ್ಥಾನ ಸಾಗಿ ಬಂದ ಹಾದಿ
1. ಭಾರತ ವಿರುದ್ಧ 4 ವಿಕೆಟ್ ಸೋಲು
2. ಜಿಂಬಾಬ್ವೆ ವಿರುದ್ಧ 1 ರನ್ ಸೋಲು
3. ನೆದರ್ಲೆಂಡ್ಸ್ ವಿರುದ್ಧ 6 ವಿಕೆಟ್ ಜಯ
4. ದಕ್ಷಿಣ ಆಫ್ರಿಕಾ ವಿರುದ್ಧ 33 ರನ್ ಜಯ
5. ಬಾಂಗ್ಲಾದೇಶ ವಿರುದ್ಧ 5 ವಿಕೆಟ್ ಜಯ ನ್ಯೂಜಿಲ್ಯಾಂಡ್- ಪಾಕಿಸ್ಥಾನ: ಟಿ20 ವಿಶ್ವಕಪ್ ಫಲಿತಾಂಶ
ವರ್ಷ ಫಲಿತಾಂಶ
2007 ಪಾಕಿಸ್ಥಾನಕ್ಕೆ 6 ವಿಕೆಟ್ ಜಯ
2009 ಪಾಕಿಸ್ಥಾನಕ್ಕೆ 6 ವಿಕೆಟ್ ಜಯ
2010 ನ್ಯೂಜಿಲ್ಯಾಂಡ್‌ಗೆ 1 ರನ್ ಜಯ
2012 ಪಾಕಿಸ್ಥಾನಕ್ಕೆ 13 ರನ್ ಜಯ
2016 ನ್ಯೂಜಿಲ್ಯಾಂಡ್‌ಗೆ 22 ರನ್ ಜಯ
2021 ಪಾಕಿಸ್ಥಾನಕ್ಕೆ 5 ವಿಕೆಟ್ ಜಯ