Advertisement

ಐಸಿಸಿಗೆ ನಿಗದಿಯಂತೆ ಟಿ-20 ವಿಶ್ವಕಪ್‌ ಆಯೋಜನೆ ವಿಶ್ವಾಸ

11:12 PM Apr 06, 2020 | Sriram |

ದುಬಾೖ: ಒಂದು ಕಡೆ ಒಲಿಂಪಿಕ್ಸ್‌ ಸೇರಿದಂತೆ ಹಲವು ಕ್ರೀಡಾಕೂಟಗಳು ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ, ಇನ್ನೊಂದು ಕಡೆ ಮುಂಬರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟ ನಿಗದಿಯಂತೆ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಭರವಸೆ ವ್ಯಕ್ತಪಡಿಸಿದೆ.

Advertisement

ಇದು ಸದ್ಯ ಲಾಕ್‌ಡೌನ್‌ನಲ್ಲಿರುವ ಕ್ರಿಕೆಟ್‌ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿರುವ ಸುದ್ದಿಯಾಗಿದೆ.

ಐಸಿಸಿ ಪ್ರಕಟಪಡಿಸಿರುವ ಹೇಳಿಕೆಯನ್ನು ಆಂಗ್ಲ ಮಾಧ್ಯಮವೊಂದು ಪ್ರಕಟಿಸಿದ್ದುಹೀಗೆ, “ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ಕೂಟವನ್ನು ನಡೆಸುವುದರ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ, ಈಗ ಸ್ಥಳೀಯ ಸಂಘಟಕರ ನಿರಂತರ ಸಂಪರ್ಕದಲ್ಲಿದ್ದೇವೆ. ಪರಿಸ್ಥಿತಿ ತಿಳಿ ಗೊಂಡರೆ ಹಾಲಿ ವೇಳಾಪಟ್ಟಿಯಂತೆ ಆಸ್ಟ್ರೇಲಿಯದ 7 ನಗರಗಳಲ್ಲಿ ಅ.18 ರಿಂದ ನ.15ರ ತನಕ ಟಿ20 ವಿಶ್ವಕಪ್‌ ಕೂಟ ಆಯೋಜಿಸಲು ಸಿದ್ಧವಾಗಿದ್ದೇವೆ’ ಎಂದು ಐಸಿಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next