ದುಬೈ: ಭಾರತದ ಆತಿಥ್ಯದ ಟಿ20 ವಿಶ್ವಕಪ್ ಪಂದ್ಯಾವಳಿ ಯುಎಇಯಲ್ಲಿ ಯಶಸ್ವಿಯಾಗಿ ಮುಗಿದಿದೆ.
ಆಸ್ಟ್ರೇಲಿಯ ಮೊದಲ ಸಲ ಕಪ್ ಎತ್ತಿ ಹಿಡಿದಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಈ ಬಾರಿಯ ಸಾಧಕ ಆಟಗಾರರನ್ನೊಳಗೊಂಡ 12 ಸದಸ್ಯರ ತಂಡವನ್ನು ಪ್ರಕಟಿಸಿದೆ (ಐಸಿಸಿ ಟೀಮ್ ಆಫ್ ಟೂರ್ನಮೆಂಟ್). ಇದರಲ್ಲಿ ಭಾರತದ ಯಾವುದೇ ಕ್ರಿಕೆಟಿಗರಿಲ್ಲ.
ಕೊಹ್ಲಿ ಪಡೆ ನಾಕೌಟ್ ಹಂತಕ್ಕೂ ಮೊದಲೇ ಕೂಟದಿಂದ ನಿರ್ಗಮಿಸಿದ್ದರಿಂದ ಹಾಗೂ ಸೂಪರ್-12 ಹಂತದಲ್ಲಿ ಭಾರತದ ಯಾರಿಂದಲೂ ಗಮನಾರ್ಹ ಸಾಧನೆ ಕಂಡುಬರದಿದ್ದುದೇ ಇದಕ್ಕೆ ಕಾರಣ ಎಂಬುದು ರಹಸ್ಯವಲ್ಲ.
ಬಾಬರ್ ಅಜಂ ನಾಯಕ: ಐಸಿಸಿ ತಂಡಕ್ಕೆ ಪಾಕಿಸ್ತಾನದ ಬಾಬರ್ ಅಜಂ ನಾಯಕರಾಗಿದ್ದಾರೆ. ಕೂಟದಲ್ಲೇ ಸರ್ವಾಧಿಕ 303 ರನ್ ಬಾರಿಸಿದ ಸಾಧನೆ ಇವರದ್ದಾಗಿದೆ. ಸರಣಿಶ್ರೇಷ್ಠ ಡೇವಿಡ್ ವಾರ್ನರ್ ಮತ್ತು ಇಂಗ್ಲೆಂಡಿನ ಜೋಸ್ ಬಟ್ಲರ್ ಆರಂಭಿಕರಾಗಿದ್ದಾರೆ. ಲಂಕೆಯ ಬಿಗ್ ಹಿಟ್ಟರ್ ಚರಿತ ಅಸಲಂಕ, ದಕ್ಷಿಣ ಆಫ್ರಿಕಾ ಐಡನ್ ಮಾಕ್ರìಮ್, ಇಂಗ್ಲೆಂಡಿನ ಆಲ್‌ರೌಂಡರ್ ಮೊಯಿನ್ ಅಲಿ ಮಧ್ಯಮ ಕ್ರಮಾಂಕವನ್ನು ಭರ್ತಿಗೊಳಿಸಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ ಮತ್ತು ಆಸೀಸ್‌ನ ಆ್ಯಡಂ ಝಂಪ ತಜ್ಞ ಸ್ಪಿನ್ನರ್‌ಗಳಾಗಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿರುವವರು ಹೇಝಲ್‌ವುಡ್, ಬೌಲ್ಟ್ ಮತ್ತು ನೋರ್ಜೆ. ಪಾಕಿಸ್ತಾನದ ಶಾಹೀನ್ ಶಾ ಅಫ್ರಿದಿ 12ನೇ ಆಟಗಾರನಾಗಿದ್ದಾರೆ.
ಇದನ್ನೂ ಓದಿ:ವಾಕಿಂಗ್ ಹೋಗುತ್ತಿದ್ದಾಗ ನಟಿಗೆ ಹಲ್ಲೆ; ಮೊಬೈಲ್ ಕಿತ್ತುಕೊಂಡು ಪರಾರಿ
ಐಸಿಸಿ ತಂಡ: ಡೇವಿಡ್ ವಾರ್ನರ್, ಜಾಸ್ ಬಟ್ಲರ್ (ವಿ.ಕೀ.), ಬಾಬರ್ ಅಜಂ (ನಾಯಕ), ಚರಿತ ಅಸಲಂಕ, ಐಡನ್ , ಮೊಯಿನ್ ಅಲಿ, ವನಿಂದು ಹಸರಂಗ, ಆ್ಯಡಂ ಝಂಪ, ಜೋಶ್ ಹೇಝಲ್‌ವುಡ್, ಟ್ರೆಂಟ್ ಬೌಲ್ಟ್, ಅನ್ರಿಚ್ ನೋರ್ಜೆ. 12ನೇ ಆಟಗಾರ: ಶಾಹೀನ್ ಶಾ ಅಫ್ರಿದಿ.