ಮೆಲ್ಬರ್ನ್: ಬಿಗ್ ಹಿಟ್ಟಿಂಗ್ ಓಪನರ್ ಜೇಕ್ ಫ್ರೇಸರ್ ಮೆಕ್‌ಗರ್ಕ್ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಆಸ್ಟ್ರೇಲಿಯದ ಎರಡನೇ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಬ್ಯಾಟಿಂಗ್ ಆಲ್‌ರೌಂಡರ್ ಮ್ಯಾಥ್ಯೂ ಶಾರ್ಟ್ ಈಗಾಗಲೇ ಈ ಯಾದಿಯಲ್ಲಿದ್ದಾರೆ.
22 ವರ್ಷದ ಆರಂಭಕಾರ ಮೆಕ್‌ಗರ್ಕ್ ಐಪಿಎಲ್‌ನಲ್ಲಿ ಡೆಲ್ಲಿ ಪರ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 330 ರನ್ ಬಾರಿಸಿದ್ದರು. ಅವರು ಈವರೆಗೆ ಟಿ20 ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಅಗ್ರ ಕ್ರಮಾಂಕದಲ್ಲಿ ವಾರ್ನರ್, ಹೆಡ್ ಮತ್ತು ನಾಯಕ ಮಿಚೆಲ್ ಮಾರ್ಷ್ ಇರುವುದರಿಂದ ಮೆಕ್‌ಗರ್ಕ್ ಅವರನ್ನು ಹದಿನೈದರ ಬಳಗಕ್ಕೆ ಸೇರಿಸಿಕೊಂಡಿರಲಿಲ್ಲ ಎಂಬುದಾಗಿ ಆಸ್ಟ್ರೇಲಿಯ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ಹೇಳಿದ್ದರು.
ತಂಡವನ್ನು ಆರಿಸುವಾಗ ಒಬ್ಬರೇ ಮೀಸಲು ಆಟಗಾರ ಸಾಕು ಎಂಬುದು ಆಸ್ಟ್ರೇಲಿಯ ಆಯ್ಕೆ ಮಂಡಳಿಯ ನಿರ್ಧಾರವಾಗಿತ್ತು. ಆದರೆ ಐಪಿಎಲ್ ಯಶಸ್ಸು ಮೆಕ್‌ಗರ್ಕ್ ಅವರಿಗೆ ಅದೃಷ್ಟವನ್ನು ತೆರೆದಿರಿಸಿತು.
ಆಸ್ಟ್ರೇಲಿಯ ತಂಡ: ಮಿಚೆಲ್ ಮಾರ್ಷ್ (ನಾಯಕ), ಟ್ರ್ಯಾವಿಸ್ ಹೆಡ್, ಡೇವಿಡ್ ವಾರ್ನರ್, ಟಿಮ್ ಡೇವಿಡ್, ಕ್ಯಾಮರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಅÂಶrನ್ ಏಗರ್, ನಥನ್ ಎಲ್ಲಿಸ್, ಜೋಶ್ ಹೇಝಲ್‌ವುಡ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪ.
ಮೀಸಲು ಆಟಗಾರರು: ಮ್ಯಾಥ್ಯೂ ಶಾರ್ಟ್, ಜೇಕ್ ಫ್ರೇಸರ್ ಮೆಕ್‌ಗರ್ಕ್.