Advertisement
ಕೊರೊನಾ ಕಾಟ ನಿಯಂತ್ರಣಕ್ಕೆ ಬಂದ ಬಳಿಕ ನಡೆಯಲಿರುವ ವಿಶ್ವ ದರ್ಜೆಯ ಮೆಗಾ ಕ್ರಿಕೆಟ್ ಟೂರ್ನಿ ಇದಾಗಿದ್ದು, ಆಸ್ಟ್ರೇಲಿಯದ ಸ್ಟೇಡಿ ಯಂಗಳೆಲ್ಲ ವೀಕ್ಷಕರಿಗೆ ಸಂಪೂ ರ್ಣವಾಗಿ ತೆರೆಯಲ್ಪಡಲಿವೆ. ಈಗಾ ಗಲೇ 6 ಲಕ್ಷದಷ್ಟು ಟಿಕೆಟ್ ಮಾರಾಟ ಗೊಂಡಿದ್ದಾಗಿ ವಿಶ್ವಕಪ್ ಸಿಇಒ ಮಿಚೆಲ್ ಎನ್‌ರೈಟ್ ಹೇಳಿದ್ದಾರೆ.
ರವಿವಾರದಿಂದ ಮೊದಲ ಸುತ್ತಿನ ಪಂದ್ಯಗಳು ನಡೆಯಲಿವೆ. ಸೂಪರ್-12ರಲ್ಲಿ ಖಾಲಿ ಉಳಿದಿರುವ 4 ಸ್ಥಾನಗಳನ್ನು ತುಂಬಲು 8 ತಂಡಗಳು ಇಲ್ಲಿ ಸ್ಪರ್ಧೆಗೆ ಇಳಿಯಲಿವೆ. ಸೂಪರ್-12 ಹಂತದ ಮೊದಲ ಪಂದ್ಯ ಆತಿಥೇಯ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ನಡುವೆ ಅ. 22ರಂದು ಸಿಡ್ನಿಯಲ್ಲಿ ನಡೆಯಲಿದೆ. ಅಂದೇ ಪರ್ತ್‌ನಲ್ಲಿ ಇಂಗ್ಲೆಂಡ್-ಅಫ್ಘಾನಿಸ್ಥಾನ ಮುಖಾಮುಖೀ ಆಗಲಿವೆ.