Advertisement

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

10:36 PM May 07, 2024 | Team Udayavani |

ಹೊಸದಿಲ್ಲಿ: ಟಿ20 ವಿಶ್ವಕಪ್‌ಗಾಗಿ ಭಾರತ ತಂಡಕ್ಕೆ ಹೊಸದಾಗಿ ತಯಾರು ಮಾಡಿರುವ ಜೆರ್ಸಿಯ ಮಾದರಿಗಳನ್ನು ಅಡಿಡಾಸ್‌ ಸಂಸ್ಥೆ ಮಾರಾಟಕ್ಕಿಟ್ಟಿದ್ದು, ಇದಕ್ಕೆ 5,999 ರೂ. ಬೆಲೆ ನಿಗದಿ ಮಾಡಿದೆ.

Advertisement

ಭಾರತ ಕ್ರಿಕೆಟ್‌ ತಂಡಕ್ಕೆ ಕಿಟ್‌ ಪ್ರಾಯೋಜಕತ್ವ ವಹಿಸಿಕೊಂಡಿರುವ ಅಡಿಡಾಸ್‌ ಸಂಸ್ಥೆ ಈ ಕುರಿತಾಗಿ ಟ್ವೀಟ್‌ ಮಾಡಿದೆ. ಅಡಿಡಾಸ್‌ನ ಎಲ್ಲ ಮಳಿಗೆಗಳು ಹಾಗೂ ಆನ್‌ಲೈನ್‌ನಲ್ಲಿ ಈ ಜೆರ್ಸಿ ಮಾರಾಟವಾಗಲಿದ್ದು, ಅ. 7ರಿಂದ ಲಭ್ಯವಿರುತ್ತದೆ ಎಂದು ಅದು ಹೇಳಿದೆ.

ಈ ಬಾರಿ ನೀಲಿ ಬಣ್ಣದ ಜೆರ್ಸಿಯ ತೋಳುಗಳನ್ನು ಕೇಸರಿ ಬಣ್ಣದಲ್ಲಿ ತಯಾರಿಸಲಾಗಿದೆ. ಆಟಗಾರರ ಜೆರ್ಸಿಗಳಿಗೆ ಇಷ್ಟು ಹಣ ನಿಗದಿಪಡಿಸಲಾಗಿದ್ದು, ಅಭಿಮಾನಿಗಳ ಜರ್ಸಿಗೆ 999 ರೂ. ನಿಗದಿ ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next