Advertisement
ಐರ್ಲೆಂಡ್ ವಿರುದ್ಧ ಮೊದಲ ಪಂದ್ಯ ಗೆದ್ದಿರುವ ಟೀಮ್ ಇಂಡಿಯಾ ತುಂಬು ಆತ್ಮವಿಶ್ವಾಸದಲ್ಲಿದೆ. ಆದರೆ ಪಾಕ್ ಸ್ಥಿತಿ ಇದಕ್ಕೆ ತದ್ವಿರುದ್ಧ. ಆತಿಥೇಯ ಅಮೆರಿಕ ವಿರುದ್ಧ ಸೂಪರ್ ಓವರ್‌ನಲ್ಲಿ ಮುಗ್ಗರಿಸಿ ಮೈ ತುಂಬ ಗಾಯ ಮಾಡಿಕೊಂಡಿದೆ. ಈ ಅವಮಾನಕರ ಸೋಲಿಗೆ ತವರಿನ ಮಾಜಿಗಳೇ ಬಾಬರ್ ಪಡೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದು ಕೊಂಡಿದ್ದಾರೆ. ಇದು ಪಾಕ್ ತಂಡಕ್ಕೆ ಬಿದ್ದಿರುವ ದೊಡ್ಡ ಹೊಡೆತ.
Related Articles
Advertisement
ಗಳಲ್ಲಿ ತಂಡಗಳು 100 ರನ್ ಗಡಿ ದಾಟಿದ್ದು 2 ಸಲ ಮಾತ್ರ. ಕಳೆದ ಎಪ್ರಿಲ್‌ನಲ್ಲಿ “ಅಡಿಲೇಡ್ ಓವಲ್’ನ ಗ್ರೌಂಡ್ಸ್‌ಮ್ಯಾನ್ ಡೇಮಿಯನ್ ಹ್ಯೂಗ್ ಅವರ ಉಸ್ತುವಾರಿಯಲ್ಲಿ ಇಲ್ಲಿನ ಟ್ರ್ಯಾಕ್ ನಿರ್ಮಾಣಗೊಂಡರೂ ಇದು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಅನಿರೀಕ್ಷಿತ ಬೌನ್ಸ್ ಬ್ಯಾಟರ್‌ಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಭಾರತ ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಇದೇ ಅಂಗಳದಲ್ಲಿ ಆಡಿತ್ತು. ಐರಿಷ್ ಪಡೆ 16 ಓವರ್‌ಗಳಲ್ಲಿ 96ಕ್ಕೆ ಕುಸಿದ ಬಳಿಕ, 12.2 ಓವರ್‌ಗಳಲ್ಲಿ ರೋಹಿತ್ ಪಡೆ ಗುರಿ ತಲುಪಿತ್ತು. ಬಾಂಗ್ಲಾ ಎದುರಿನ ಅಭ್ಯಾಸ ಪಂದ್ಯವನ್ನೂ ಭಾರತ ಇಲ್ಲೇ ಆಡಿತ್ತು. ಆದರೆ ಪಾಕಿಸ್ಥಾನಕ್ಕೆ ಇದು ನ್ಯೂಯಾರ್ಕ್‌ನಲ್ಲಿ ಮೊದಲ ಪಂದ್ಯ. ಗುರುವಾರ ರಾತ್ರಿಯಷ್ಟೇ ಬಾಬರ್ ಪಡೆ ಇಲ್ಲಿಗೆ ಆಗಮಿಸಿತ್ತು.
ಕುಲದೀಪ್ ಸೇರ್ಪಡೆ?:
ಭಾರತ ಈ ಪಂದ್ಯಕ್ಕಾಗಿ ಒಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವ ಯೋಜನೆಯಲ್ಲಿದೆ. ಆಗ ಅಕ್ಷರ್ ಪಟೇಲ್ ಅಥವಾ ರವೀಂದ್ರ ಜಡೇಜ ಹೊರಗುಳಿಯಬೇಕಾದೀತು.
ಉಳಿದಂತೆ ಬ್ಯಾಟಿಂಗ್ ಸರದಿ ಯಲ್ಲಿ ಯಾವುದೇ ಬದಲಾವಣೆ ಸಂಭವವಿಲ್ಲ. ರೋಹಿತ್-ಕೊಹ್ಲಿ ಇನ್ನಿಂಗ್ಸ್ ಆರಂಭಿ ಸುವು ದರಿಂದ ಜೈಸ್ವಾಲ್‌ಗೆ ಅವಕಾಶ ಸಿಗದು. ಇದರಿಂದ ಲಾಭವಾದದ್ದು ಶಿವಂ ದುಬೆ ಅವರಿಗೆ.
ಪಾಕ್ ಸಾಲು ಸಾಲು ವೈಫಲ್ಯ :
ಎಲ್ಲ ವಿಭಾಗಗಳಲ್ಲೂ ಸುಧಾರಣೆ ಕಂಡರಷ್ಟೇ ಪಾಕಿಸ್ಥಾನಕ್ಕಿಲ್ಲಿ ಉಳಿಗಾಲ. ಅಮೆರಿಕ ವಿರುದ್ಧ ಪಾಕಿಸ್ಥಾನದ ಬೌಲಿಂಗ್ ಹಾಗೂ ಫೀಲ್ಡಿಂಗ್ ತೀರಾ ಕಳಪೆಯಾಗಿತ್ತು. ಆಮಿರ್ ಎಸೆದ ಸೂಪರ್ ಓವರ್‌ನಲ್ಲಿ 7 ವೈಡ್‌ಗಳಿದ್ದವು! ಕ್ಷೇತ್ರರಕ್ಷಣೆಯಲ್ಲಿ ಪಾಕ್ ಆಟಗಾರರು ತೀರಾ ಸೋಮಾರಿಗಳಂತೆ ಕಂಡಿದ್ದರು.
ಬಿಗಿ ಭದ್ರತೆಯಲ್ಲಿ ಪಂದ್ಯ:
ಐಸಿಸಿ ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಈ ಪಂದ್ಯ ಅತ್ಯಂತ ಬಿಗಿ ಭದ್ರತೆಯಲ್ಲಿ ನಡೆಯಲಿದೆ. ನಾಸಾವು ಕೌಂಟಿ ಪೊಲೀಸ್ ಮಹಾನಿರ್ದೇಶಕ ಪ್ಯಾಟ್ರಿಕ್ ರೈಡರ್ ಈ ಕುರಿತು ಹೇಳಿಕೆ ನೀಡಿದ್ದು, “ನಮಗೆ ಕ್ರಿಕೆಟ್ ಹೊಸತೇ ಆಗಿರಬಹುದು. ಆದರೆ ಭದ್ರತೆಯ ಯೋಜನೆ ಹೊಸತಲ್ಲ. ಅಂದು ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಒದಗಿಸಿದ ಭದ್ರತೆಗಿಂತಲೂ ಹೆಚ್ಚಿನ ಭದ್ರತೆ ಈ ಪಂದ್ಯಕ್ಕೆ ಇರಲಿದೆ’ ಎಂದಿದ್ದಾರೆ.
ಸಚಿನ್ ಆಗಮನ:
ಈ ಹೈ ವೋಲ್ಟೆàಜ್ ಪಂದ್ಯ ವೀಕ್ಷಿಸಲು ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡುಲ್ಕರ್ ಈಗಾಗಲೇ ನ್ಯೂಯಾರ್ಕ್‌ಗೆ
ಆಗಮಿಸಿದ್ದಾರೆ. ಈ ಪಂದ್ಯವನ್ನು ಕಣ್ತುಂಬಿಸಿ ಕೊಳ್ಳುವುದರ ಜತೆಗೆ ಭಾರತ ತಂಡವನ್ನು ಹುರಿದುಂಬಿಸಲಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ:
ವರ್ಷ ಸ್ಥಳ ಫಲಿತಾಂಶ
2007 ಡರ್ಬನ್ ಭಾರತಕ್ಕೆ “ಬಾಲೌಟ್’ ಜಯ
2007 ಜೊಹಾನ್ಸ್‌ಬರ್ಗ್ ಭಾರತಕ್ಕೆ 5 ರನ್ ಜಯ
2012 ಕೊಲಂಬೊ ಭಾರತಕ್ಕೆ 8 ವಿಕೆಟ್ ಜಯ
2014 ಮಿರ್ಪುರ್ ಭಾರತಕ್ಕೆ 7 ವಿಕೆಟ್ ಜಯ
2016 ಕೋಲ್ಕತಾ ಭಾರತಕ್ಕೆ 6 ವಿಕೆಟ್ ಜಯ
2021 ದುಬಾೖ ಪಾಕಿಸ್ಥಾನಕ್ಕೆ 10 ವಿಕೆಟ್ ಜಯ
2022 ಮೆಲ್ಬರ್ನ್ ಭಾರತಕ್ಕೆ 4 ವಿಕೆಟ್ ಜಯ
ನ್ಯೂಯಾರ್ಕ್ ಪಿಚ್ ವಿರುದ್ಧ ದೂರು
ನ್ಯೂಯಾರ್ಕ್ ಪಿಚ್ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಗೆ ಅನಧಿಕೃತ ದೂರು ನೀಡಿದೆ ಎಂದು ವರದಿಯಾಗಿದೆ. ಅಪಾಯಕಾರಿ ಪಿಚ್‌ನಲ್ಲಿ ತಂಡದ ನಾಯಕ ರೋಹಿತ್ ಶರ್ಮ ಗಾಯಕ್ಕೀಡಾದ ಬಳಿಕ, ಈ ಬೆಳವಣಿಗೆ ಸಂಭವಿಸಿದೆ. ಪಾಕಿಸ್ಥಾನ ವಿರುದ್ಧದ ಪಂದ್ಯಕ್ಕಾಗಿ ಅಭ್ಯಾಸ ನಡೆಸುವಾಗ ರೋಹಿತ್ ಅವರ ಹೆಬ್ಬೆರಳಿಗೆ ಚೆಂಡು ಬಡಿದಿದೆ. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲೂ ರೋಹಿತ್ ಭುಜಕ್ಕೆ ಚೆಂಡು ಬಡಿದಿತ್ತು. ಇಲ್ಲಿನ ಡ್ರಾಪ್ ಇನ್ ಪಿಚ್‌ನಲ್ಲಿ ಬಿರುಕುಗಳಿವೆ. ಇಲ್ಲಿ ಬೌನ್ಸ್ ಕೂಡ ಜಾಸ್ತಿ. ಇದೇ ಕಾರಣಕ್ಕೆ ಈ ಪಿಚ್ ಅನ್ನು ಹಲವಾರು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಇದನ್ನು ಪರಿಶೀಲಿಸುವುದಾಗಿ ಐಸಿಸಿ ಭರವಸೆ ನೀಡಿದೆ.