Advertisement

ಪಿವಿಆರ್‌ನಲ್ಲಿ ಟಿ20 ವಿಶ್ವಕಪ್‌

12:22 AM Oct 16, 2021 | Team Udayavani |

ಮುಂಬಯಿ: ಪಿವಿಆರ್‌ ಸಿನೆಮಾಸ್‌ನ ಬಿಗ್‌ ಸ್ಕ್ರೀನ್‌ನಲ್ಲಿ ಭಾರತದ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳು ಮೂಡಿಬರಲಿವೆ. ಶುಕ್ರವಾರದ ಪತ್ರಿಕಾ ಪ್ರಕಟನೆಯಲ್ಲಿ ಪಿವಿಆರ್‌ ಈ ವಿಷಯ ತಿಳಿಸಿದೆ.

Advertisement

“ಇದಕ್ಕೆ ಸಂಬಂಧಿಸಿದಂತೆ ಐಸಿಸಿಯೊಂದಿಗೆ ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದರಂತೆ ಭಾರತ ಪಾಲ್ಗೊಳ್ಳಲಿರುವ ಟಿ20 ವಿಶ್ವಕಪ್‌ ಕೂಟದ ಎಲ್ಲ ಪಂದ್ಯಗಳನ್ನು, ಜತೆಗೆ ಸೆಮಿಫೈನಲ್‌ ಮತ್ತು ಫೈನಲ್‌ ಮುಖಾಮುಖಿಯನ್ನು ಮಲ್ಟಿಪ್ಲೆಕ್ಸ್‌ನ ಪಿವಿಆರ್‌ ಸಿನೆಮಾಸ್‌ನ ದೊಡ್ಡ ಪರದೆಯನ್ನು ಪ್ರದರ್ಶಿಸಲಾಗುವುದು’ ಎಂದು ಪಿವಿಆರ್‌ ಲಿಮಿಟೆಡ್‌ನ‌ ಸಿಇಒ ಗೌತಮ್‌ ದತ್ತ ಹೇಳಿದರು.

ಇದನ್ನೂ ಓದಿ:ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

ಹೊಸದಿಲ್ಲಿ, ಮುಂಬಯಿ, ಪುಣೆ, ಅಹ್ಮದಾಬಾದ್‌ ಸೇರಿದಂತೆ ದೇಶದ 35ಕ್ಕೂ ಹೆಚ್ಚು ನಗರಗಳ, 75ಕ್ಕೂ ಹೆಚ್ಚು ಪಿವಿಆರ್‌ ಸಿನೆಮಾಸ್‌ ಪರದೆಗಳಲ್ಲಿ ಭಾರತದ ಟಿ20 ವಿಶ್ವಕಪ್‌ ಪಂದ್ಯಗಳ ರೋಮಾಂಚನವನ್ನು ಸವಿಯಬಹುದಾಗಿದೆ. ಭಾರತ ಅ. 24ರಂದು ಪಾಕಿಸ್ಥಾನ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next