Advertisement

T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ

10:39 AM May 06, 2024 | Team Udayavani |

ಗಯಾನ: ಇನ್ನು ಕೆಲವೇ ದಿನಗಳಲ್ಲಿ ಐಸಿಸಿ ಟಿ20 ವಿಶ್ವಕಪ್ ಆರಂಭವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಈ ಬಾರಿಯ ಟಿ20 ವಿಶ್ವಕಪ್ ನಡೆಯಲಿದ್ದು, ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಚುಟುಕು ಕ್ರಿಕೆಟ್ ಕೂಟವನ್ನು ಯಶಸ್ವಿಯಾಗಿ ನಡೆಸಲು ಐಸಿಸಿ ಸಿದ್ದತೆ ಮಾಡುತ್ತಿದೆ. ಇದೀಗ ಈ ಮೆಗಾ ಕೂಟಕ್ಕೆ ಉಗ್ರರ ಕರಿನೆರಳು ಬಿದ್ದಿದೆ.

Advertisement

ಜಾಗತಿಕ ಕ್ರಿಕೆಟ್ ಪಂದ್ಯಾವಳಿಯ ಮೇಲೆ ಭದ್ರತಾ ಬೆದರಿಕೆಯು ಉತ್ತರ ಪಾಕಿಸ್ತಾನದದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಇದೀಗ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುಲು ಕ್ರಿಕೆಟ್ ಸಂಸ್ಥೆಯು ಮುಂದಾಗಿದೆ.

“ನಾವು ಆತಿಥೇಯ ದೇಶಗಳು ಮತ್ತು ನಗರಗಳಲ್ಲಿನ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ. ನಮ್ಮ ಈವೆಂಟ್‌ ಗೆ ಗುರುತಿಸಲಾದ ಯಾವುದೇ ಅಪಾಯಗಳನ್ನು ತಗ್ಗಿಸಲು ಸೂಕ್ತವಾದ ಯೋಜನೆಗಳು ಜಾರಿಗೊಳಿಸುತ್ತೇವೆ” ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಸಿಇಒ ಜಾನಿ ಗ್ರೇವ್ಸ್ ಹೇಳಿದ್ದಾರೆ.

ಪ್ರೋ- ಇಸ್ಲಾಮಿಕ್ ಸ್ಟೇಟ್‌ನಿಂದ ಭದ್ರತಾ ಬೆದರಿಕೆ ಬಂದಿದೆ ಎಂದು ವರದಿಯು ಹೇಳುತ್ತದೆ. “ಪ್ರೊ-ಇಸ್ಲಾಮಿಕ್ ಸ್ಟೇಟ್ (ಐಎಸ್) ಮಾಧ್ಯಮ ಮೂಲಗಳು ಕ್ರೀಡಾಕೂಟಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಅಭಿಯಾನಗಳನ್ನು ಪ್ರಾರಂಭಿಸಿವೆ, ಇದರಲ್ಲಿ ಅಫ್ಘಾನಿಸ್ತಾನ-ಪಾಕಿಸ್ತಾನ ಶಾಖೆಯ ವೀಡಿಯೊ ಸಂದೇಶಗಳು ಸೇರಿವೆ. ISKhorasan (IS-K) ಇದು ಹಲವಾರು ದೇಶಗಳಲ್ಲಿ ದಾಳಿಗಳನ್ನು ಎತ್ತಿ ತೋರಿಸಿತು ಮತ್ತು ಬೆಂಬಲಿಗರನ್ನು ಅವರ ದೇಶಗಳಲ್ಲಿ ಯುದ್ಧಭೂಮಿಗೆ ಸೇರುವಂತೆ ಒತ್ತಾಯಿಸಿತು” ಎಂದು ವರದಿಯಾಗಿದೆ.

ಕೂಟದಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೂ ಸೂಕ್ತ ಭದ್ರತೆ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಗ್ರೇವ್ಸ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next