Advertisement

ಕಾಂಗರೂಗೆ ಅಯರ್‌ಲ್ಯಾಂಡ್‌ ಸುಲಭ ತುತ್ತು

06:10 AM Nov 13, 2018 | Team Udayavani |

ಪ್ರೊವಿಡೆನ್ಸ್‌ (ಗಯಾನಾ): ರವಿವಾರ ರಾತ್ರಿಯ 2ನೇ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಅಯರ್‌ಲ್ಯಾಂಡ್‌ ವನಿತೆಯರು ಆಸ್ಟ್ರೇಲಿಯಕ್ಕೆ ಸುಲಭದ ತುತ್ತಾಗಿದ್ದಾರೆ. ಆಸೀಸ್‌ 9 ವಿಕೆಟ್‌ಗಳ ಜಯ ಸಾಧಿಸಿ “ಬಿ’ ವಿಭಾಗದ ಅಗ್ರಸ್ಥಾನಿಯಾಗಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಅಯರ್‌ಲ್ಯಾಂಡ್‌ ತೀರಾ ನಿಧಾನ ಗತಿಯಲ್ಲಿ ಆಡಿ 6 ವಿಕೆಟಿಗೆ ಕೇವಲ 93 ರನ್‌ ಗಳಿಸಿತು. ಜವಾಬಿತ್ತ ಆಸ್ಟ್ರೇಲಿಯ 9.1 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 94 ರನ್‌ ಪೇರಿಸಿತು. ಆರಂಭಿಕ ಆಟಗಾರ್ತಿ ಅಲಿಸ್ಸಾ ಹೀಲಿ 31 ಎಸೆತಗಳಿಂದ ಅಜೇಯ 56 ರನ್‌ ಮಾಡಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು (9 ಬೌಂಡರಿ, 1 ಸಿಕ್ಸರ್‌). ಬೆತ್‌ ಮೂನಿ 14 ರನ್ನಿಗೆ ಔಟಾದರು.
ಆಸೀಸ್‌ ಬೌಲಿಂಗ್‌ ಸರದಿಯಲ್ಲಿ ಎಲಿಸ್ಸಾ ಪೆರ್ರಿ ಅಮೋಘ ನಿಯಂತ್ರಣ ಸಾಧಿಸಿ 12 ರನ್ನಿಗೆ 2 ವಿಕೆಟ್‌ ಕಿತ್ತರು. 24 ರನ್‌ ಮಾಡಿದ ಕೆ.ಜೆ. ಗಾರ್ತ್‌ ಅಯರ್‌ಲ್ಯಾಂಡ್‌ ಸರದಿಯ ಟಾಪ್‌ ಸ್ಕೋರರ್‌ (26 ಎಸೆತ, 2 ಬೌಂಡರಿ).

ಸಂಕ್ಷಿಪ್ತ ಸ್ಕೋರ್‌: ಅಯರ್‌ಲ್ಯಾಂಡ್‌-6 ವಿಕೆಟಿಗೆ 93 (ಗಾರ್ತ್‌ 24, ಶಿಲ್ಲಿಂಗ್ಟನ್‌ 19, ಡೆಲಾನಿ 14, ಪೆರ್ರಿ 12ಕ್ಕೆ 2, ಗಾಡ್ನ್ìರ್‌ 5ಕ್ಕೆ 1). ಆಸ್ಟ್ರೇಲಿಯ-9.1 ಓವರ್‌ಗಳಲ್ಲಿ ಒಂದು ವಿಕೆಟಿಗೆ 94 (ಹೀಲಿ ಔಟಾಗದೆ 56, ಮೂನಿ 14, ಇತರ 15). ಪಂದ್ಯಶ್ರೇಷ್ಠ: ಅಲಿಸ್ಸಾ ಹೀಲಿ.

Advertisement

Udayavani is now on Telegram. Click here to join our channel and stay updated with the latest news.

Next