ಬ್ರಿಜ್‌ಟೌನ್: ಟಿ20 ವಿಶ್ವಕಪ್ ಆಡುವ ಸಲುವಾಗಿ ವೆಸ್ಟ್ ಇಂಡೀಸ್‌ಗೆ ಪ್ರಯಾಣಿಸುವಾಗ ಆಸ್ಟ್ರೇಲಿಯದ ಆಟಗಾರರು ಸಾಲು ಸಾಲು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಲಗೇಜ್ ಮಿಸ್, ವಿಮಾನ ವಿಳಂಬದಂತ ಸಮಸ್ಯೆಗಳಿಂದ ಪರದಾಡಿದ್ದಾಗಿ ವರದಿಯಾಗಿವೆ.
ಪ್ಯಾಟ್ ಕಮಿನ್ಸ್ ಅವರ ಲಗೇಜ್ ಕೈತಪ್ಪಿ ಬಳಿಕ ತಡವಾಗಿ ಸಿಕ್ಕಿದೆ. ಬಾರ್ಬಡಾಸ್‌ಗೆ ಪ್ರಯಾಣಿಸುವ ವೇಳೆ ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಹಲವಾರು ಬಾರಿ ವಿಮಾನ ವಿಳಂಬದ ಸಮಸ್ಯೆಯಿಂದಾಗಿ ಸುಸ್ತಾಗಿದ್ದಾಗಿ ವರದಿಯಾಗಿದೆ.
ಈ ಎಲ್ಲ ಪ್ರಯಾಸದ ಪ್ರಯಾಣದಿಂದ ಮಾನಸಿಕವಾಗಿ ಕುಗ್ಗಿದ ಆಟಗಾರರು ಐಷಾರಾಮಿ ಹಡಗಿನಲ್ಲಿ ರಿಲ್ಯಾಕ್ ಆದರು. ಕೆರಿಬಿಯನ್ ಕರಾವಳಿಯ ರಮಣೀಯ ದೃಶ್ಯಗಳು ತಮ್ಮನ್ನು ಉಲ್ಲಾಸಿತರನ್ನಾಗಿಸಿತು ಎಂದು ತಂಡದ ಸ್ಪಿನ್ನರ್ ಆ್ಯಸ್ಟನ್ ಅಗರ್ ಹೇಳಿದ್ದಾರೆ.
2021ರ ಟಿ20 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯ ತಂಡ, ಜೂ. 6ರಂದು ಒಮಾನ್ ವಿರುದ್ಧ ಬ್ರಿಜ್‌ಟೌನ್‌ನಲ್ಲಿ ಮೊದಲ ಪಂದ್ಯವನ್ನಾಡಲಿದೆ.