Advertisement

ವಿಂಡೀಸ್‌ ಮತ್ತೆ ಪಲ್ಟಿ; ಖಾತೆ ತೆರೆದ ದ. ಆಫ್ರಿಕಾ

11:29 PM Oct 26, 2021 | Team Udayavani |

ದುಬಾೖ: ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಸತತ ಎರಡನೇ ಸೋಲಿನಿಂದ ತತ್ತರಿಸಿದೆ. ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 55 ರನ್ನಿಗೆ ಕುಸಿದು ತೀವ್ರ ಮುಖಭಂಗ ಅನುಭವಿಸಿದ್ದ ಕೆರಿಬಿಯನ್‌ ಪಡೆ, ಮಂಗಳವಾರದ ದ್ವಿತೀಯ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾಕ್ಕೆ 8 ವಿಕೆಟ್‌ಗಳಿಂದ ಶರಣಾಯಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 8 ವಿಕೆಟಿಗೆ 143 ರನ್‌ ಗಳಿಸಿದರೆ, ದಕ್ಷಿಣ ಆಫ್ರಿಕಾ 18.2 ಓವರ್‌ಗಳಲ್ಲಿ 2 ವಿಕೆಟಿಗೆ 144 ರನ್‌ ಬಾರಿಸಿ ಖಾತೆ ತೆರೆಯಿತು. ಕೂಟದ ಆರಂಭಿಕ ಪಂದ್ಯದಲ್ಲಿ ಆಫ್ರಿಕಾ ಆಸ್ಟ್ರೇಲಿಯಕ್ಕೆ ಶರಣಾಗಿತ್ತು.

ಚೇಸಿಂಗ್‌ ವೇಳೆ ನಾಯಕ ಟೆಂಬ ಬವುಮ (2) ವಿಕೆಟ್‌ ಬೇಗನೇ ಉರುಳಿದರೂ ದಕ್ಷಿಣ ಆಫ್ರಿಕಾ ಯಾವುದೇ ಒತ್ತಡಕ್ಕೆ ಸಿಲುಕಲಿಲ್ಲ. ರೀಝ ಹೆಂಡ್ರಿಕ್ಸ್‌, ಡುಸೆನ್‌ ಮತ್ತು ಐಡನ್‌ ಮಾರ್ಕ್‌ರಮ್‌ ಸೇರಿಕೊಂಡು ವಿಂಡೀಸ್‌ ಮೇಲೆರಗಿ ಹೋದರು.

ಹೆಂಡ್ರಿಕ್ಸ್‌-ಡುಸೆನ್‌ ದ್ವಿತೀಯ ವಿಕೆಟಿಗೆ 57 ರನ್‌ ಒಟ್ಟುಗೂಡಿಸಿ ವಿಂಡೀಸ್‌ ಮೇಲುಗೈಗೆ ಅವಕಾಶ ನಿರಾಕರಿಸಿದರು. ಬಳಿಕ ಡುಸೆನ್‌-ಮಾರ್ಕ್‌ರಮ್‌ ಸೇರಿಕೊಂಡು ಮುರಿಯದ 3ನೇ ವಿಕೆಟಿಗೆ 83 ರನ್‌ ರಾಶಿ ಹಾಕಿ ಗೆಲುವು ಸಾರಿದರು. ಅಜೇಯ 51 ರನ್‌ ಬಾರಿಸಿದ ಮಾರ್ಕ್‌ರಮ್‌ ದಕ್ಷಿಣ ಆಫ್ರಿಕಾದ ಟಾಪ್‌ ಸ್ಕೋರರ್‌ (26 ಎಸೆತ, 4 ಸಿಕ್ಸರ್‌, 2 ಬೌಂಡರಿ). ಇದು ಈ ಕೂಟದ ಅತೀ ವೇಗದ ಅರ್ಧ ಶತಕವಾಗಿದೆ.

ಲೆವಿಸ್‌ ಏಕಾಂಗಿ ಹೋರಾಟ
ಆರಂಭಕಾರ ಎವಿನ್‌ ಲೆವಿಸ್‌ ಅವರ ಅಬ್ಬರದ ಬ್ಯಾಟಿಂಗ್‌ ಕಂಡಾಗ ವೆಸ್ಟ್‌ ಇಂಡೀಸ್‌ ದೊಡ್ಡ ಮೊತ್ತ ಪೇರಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಈ ಆರ್ಭಟ ಲೆವಿಸ್‌ ಹಾಗೂ ಓಪನಿಂಗ್‌ ಜತೆಯಾಟಕ್ಕಷ್ಟೇ ಮೀಸಲಾಯಿತು. ಅದರಲ್ಲೂ ಇವರ ಜತೆಗಾರ ಲೆಂಡ್ಲ್ ಸಿಮನ್ಸ್‌ ಆಮೆಗತಿಯಲ್ಲಿ ಆಡಿ ನಿರಾಸೆ ಮೂಡಿಸಿದರು. ಮೊದಲ ವಿಕೆಟಿಗೆ 10.3 ಓವರ್‌ಗಳಿಂದ 73 ರನ್‌ ಒಟ್ಟುಗೂಡಿತು. ಇದರಲ್ಲಿ ಲೆವಿಸ್‌ ಪಾಲೇ 56 ರನ್‌. 35 ಎಸೆತ ಎದುರಿಸಿದ ಅವರು 6 ಪ್ರಚಂಡ ಸಿಕ್ಸರ್‌ ಹಾಗೂ 3 ಬೌಂಡರಿ ಸಿಡಿಸಿ ಆರ್ಭಟಿಸಿದರು.

Advertisement

ಸಿಮನ್ಸ್‌ 16 ರನ್ನಿಗೆ 35 ಎಸೆತ ತೆಗೆದುಕೊಂಡರು. ಟಿ20 ವಿಶ್ವಕಪ್‌ನಲ್ಲಿ ಅತ್ಯಧಿಕ ಎಸೆತ ಎದುರಿಸಿ ಒಂದೂ ಬೌಂಡರಿ ಹೊಡೆತ ಬಾರಿಸದ ಜಂಟಿ ದಾಖಲೆಯಲ್ಲಿ ಸಿಮನ್ಸ್‌ ಹೆಸರೂ ಕಾಣಿಸಿಕೊಂಡಿತು.

ಇದನ್ನೂ ಓದಿ:2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

ಲೆವಿಸ್‌ ಅವರಿಂದ ದಂಡಿಸಿಕೊಂಡ ಬಳಿಕ ಪ್ರಿಟೋರಿಯಸ್‌, ಮಾರ್ಕ್‌ರಮ್‌, ನೋರ್ಜೆ, ರಬಾಡ, ಮಹಾರಾಜ್‌ ಸೇರಿಕೊಂಡು ವಿಂಡೀಸಿಗೆ ಭರ್ಜರಿ ಬ್ರೇಕ್‌ ಹಾಕಿದರು. 26 ರನ್‌ ಮಾಡಿದ ನಾಯಕ ಪೊಲಾರ್ಡ್‌ ಅವರದೇ 3ನೇ ಹೆಚ್ಚಿನ ಗಳಿಕೆ (20 ಎಸೆತ, 2 ಬೌಂಡರಿ, 1 ಸಿಕ್ಸರ್‌). ಪೊಲಾರ್ಡ್‌ ಮತ್ತು ಗೇಲ್‌ ತಲಾ 12, ರಸೆಲ್‌ 5, ಹೈಟ್‌ಮೈರ್‌ ಕೇವಲ ಒಂದು ರನ್‌ ಮಾಡಿ ವಿಂಡೀಸ್‌ ಕುಸಿತಕ್ಕೆ ಕಾರಣರಾದರು.

ಸ್ಕೋರ್‌ ಪಟ್ಟಿ
ವೆಸ್ಟ್‌ ಇಂಡೀಸ್‌
ಲಿಂಡೆಲ್‌ ಸಿಮನ್ಸ್‌ ಬಿ ರಬಾಡ 16
ಎವಿನ್‌ ಲೆವಿಸ್‌ ಸಿ ರಬಾಡ ಬಿ ಮಹಾರಾಜ್‌ 56
ಪೂರಣ್‌ ಸಿ ಮಿಲ್ಲರ್‌ ಬಿ ಮಹಾರಾಜ್‌ 12
ಕ್ರಿಸ್‌ ಗೇಲ್‌ ಸಿ ಕ್ಲಾಸೆನ್‌ ಬಿ ಪ್ರಿಟೋರಿಯಸ್‌ 12 ಪೊಲಾರ್ಡ್‌ ಬಿ ಡುಸೆನ್‌ ಬಿ ಪ್ರಿಟೋರಿಯಸ್‌ 26
ಆ್ಯಂಡ್ರೆ ರಸೆಲ್‌ ಬಿ ನೋರ್ಜೆ 5
ಹೆಟ್‌ಮೈರ್‌ ರನೌಟ್‌ 1
ಡ್ವೇನ್‌ ಬ್ರಾವೊ ಔಟಾಗದೆ 8
ಹೇಡೆನ್‌ ವಾಲ್ಶ್ ಸಿ ಹೆಂಡ್ರಿಕ್ಸ್‌ ಬಿ ಪ್ರಿಟೋರಿಯಸ್‌ 0
ಅಖೀಲ್‌ ಹೊಸೈನ್‌ ಔಟಾಗದೆ 0
ಇತರ 7
ಒಟ್ಟು (8 ವಿಕೆಟಿಗೆ) 143
ವಿಕೆಟ್‌ ಪತನ: 1-73, 2-87, 3-89, 4-121, 5-132, 6-133, 7-137, 8-137.
ಬೌಲಿಂಗ್‌; ಐಡೆನ್‌ ಮಾರ್ಕ್‌ರಮ್‌ 3-1-22-0
ಕಾಗಿಸೊ ರಬಾಡ 4-0-27-1
ಅನ್ರಿಚ್‌ ನೋರ್ಜೆ 4-0-14-1
ಕೇಶವ್‌ ಮಹಾರಾಜ್‌ 4-0-24-2
ತಾಬ್ರೇಜ್‌ ಶಂಸಿ 3-0-37-0
ಪ್ರಿಟೋರಿಯಸ್‌ 2-0-17-3
ದಕ್ಷಿಣ ಆಪ್ರಿಕಾ
ಟೆಂಬ ಬವುಮ ರನೌಟ್‌ 2
ಹೆಂಡ್ರಿಕ್ಸ್‌ ಸಿ ಹೆಟ್‌ಮೈರ್‌ ಬಿ ಹೊಸೇನ್‌ 39
ರಸ್ಸಿ ವಾನ್‌ಡರ್‌ ಡುಸೆನ್‌ ಔಟಾಗದೆ 43
ಮಾರ್ಕ್‌ರಮ್‌ ಔಟಾಗದೆ 51
ಇತರ 9
ಒಟ್ಟು (18.2 ಓವರ್‌ಗಳಲ್ಲಿ 2 ವಿಕೆಟಿಗೆ) 144
ವಿಕೆಟ್‌ ಪತನ: 1-4, 2-61.
ಬೌಲಿಂಗ್‌; ಅಖೀಲ್‌ ಹೊಸೇನ್‌ 4-0-27-1
ರವಿ ರಾಮ್‌ಪಾಲ್‌ 3-0-22-0
ಆ್ಯಂಡ್ರೆ ರಸೆಲ್‌ 3.2-0-36-0
ಹೇಡನ್‌ ವಾಲ್ಶ್ 3-0-26-0
ಡ್ವೇನ್‌ ಬ್ರಾವೊ 4-0-23-0
ಕೈರನ್‌ ಪೊಲಾರ್ಡ್‌ 1-0-9-0
ಪಂದ್ಯಶ್ರೇಷ್ಠ: ಅನ್ರಿಚ್‌ ನೋರ್ಜೆ

Advertisement

Udayavani is now on Telegram. Click here to join our channel and stay updated with the latest news.

Next