Advertisement

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು

08:38 AM Jun 30, 2024 | Team Udayavani |

ಬಾರ್ಬಡೋಸ್: ಹಲವು ಕಾಯುವಿಕೆಯ ಬಳಿಕ ಅಂದರೆ ಸುಮಾರು 17 ವರ್ಷಗಳ ಬಳಿಕ ಭಾರತವು ಟಿ20 ವಿಶ್ವಕಪ್ ಜಯಿಸಿದೆ. ಬ್ರಿಜ್ ಟೌನ್ ನ ಕೆನ್ನಿಂಗ್ಸ್ಟನ್ ಓವಲ್ ನಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ರೋಹಿತ್ ಬಳಗವು ದಕ್ಷಿಣ ಆಫ್ರಿಕಾ ತಂಡವನ್ನು ಏಳು ರನ್ ಗಳ ಅಂತರದಿಂದ ಸೋಲಿಸಿತು. ಈ ಮೂಲಕ ಕೋಟಿ ಕೋಟಿ ಭಾರತೀಯರು ಕಾಯುತ್ತಿದ್ದ ಘಳಿಗೆಗೆ ಕೆರಿಬಿಯನ್ ದ್ವೀಪ ಸಾಕ್ಷಿಯಾಯಿತು.

Advertisement

ಕಳೆದ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್, ಏಕದಿನ ಫೈನಲ್ ಗೆ, ಇದೀಗ ಟಿ20 ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಭಾರತೀಯ ತಂಡದ ಪಯಣ ಕೂಡಾ ಈ ಗೆಲುವಿನೊಂದಿಗೆ ಅಂತ್ಯವಾಗಿದೆ. ಟಿ20 ವಿಶ್ವಕಪ್ ಅವರ ಕೊನೆಯ ಕೂಟವಾಗಿತ್ತು.

ಟಿ20 ವಿಶ್ವಕಪ್ 2024 ಗೆದ್ದ ಬಳಿಕ ಮಾತನಾಡಿದ ದ್ರಾವಿಡ್, “ಒಬ್ಬ ಆಟಗಾರನಾಗಿ, ನಾನು ಟ್ರೋಫಿ ಗೆಲ್ಲುವ ಅದೃಷ್ಟವನ್ನು ಹೊಂದಿರಲಿಲ್ಲ ಆದರೆ ನಾನು ನನ್ನ ಅತ್ಯುತ್ತಮವಾದುದನ್ನು ನೀಡಿದ್ದೆ. ಕೋಚ್ ಆಗಿ, ತಂಡ ಈ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗುವಂತೆ ಮಾಡಿದ್ದು ನನ್ನ ಅದೃಷ್ಟ ಇದು ಉತ್ತಮ ಪ್ರಯಾಣವಾಗಿದೆ … ” ಎಂದಿದ್ದಾರೆ.

“ಇದು 2 ವರ್ಷಗಳ ಪ್ರಯಾಣ, ಕೇವಲ ಈ ಟಿ20 ವಿಶ್ವಕಪ್ ನದ್ದು ಅಲ್ಲ. ಈ ತಂಡದ ನಿರ್ಮಾಣ, ಬಯಸಿದ್ದ ಕೌಶಲ್ಯಗಳು, ನಾವು ಬಯಸಿದ ಆಟಗಾರರು… ಇವೆಲ್ಲಾ ನಾನು 2021 ರಲ್ಲಿ ಹುದ್ದೆಗೆ ಬಂದಾಗ ಪ್ರಾರಂಭವಾದ ಚರ್ಚೆಗಳು. ಕೇವಲ ಈ ವಿಶ್ವಕಪ್‌ ನ ಸಿದ್ದತೆಯಲ್ಲ. ಇದು 2 ವರ್ಷಗಳ ಪ್ರಯಾಣದಂತೆ ಭಾಸವಾಗುತ್ತಿದೆ. ಎರಡು ವರ್ಷದಿಂದ ಏನೆಲ್ಲಾ ಮಾಡಿದ್ದೆವು ಅದೆಲ್ಲಾ ಈಗ ಬಾರ್ಬಡೋಸ್ ನಲ್ಲಿ ಬಂದು ಸಮ್ಮಿಳಿತವಾಗಿದೆ ಅಷ್ಟೇ” ಎಂದು ರಾಹುಲ್ ಹೇಳಿದರು.

Advertisement

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ರೋಹಿತ್ ಶರ್ಮಾ ನಿವೃತ್ತಿಯ ಕುರಿತು ಮಾತನಾಡಿದ ಅವರು, “ಒಬ್ಬ ವ್ಯಕ್ತಿಯಾಗಿ ನಾನು ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ… ಅವರು ಯಾವ ರೀತಿಯ ವ್ಯಕ್ತಿ ಎನ್ನುವುದು, ಅವರು ನನಗೆ ತೋರಿದ ಗೌರವ, ತಂಡಕ್ಕಾಗಿ ಅವರು ಹೊಂದಿದ್ದ ಕಾಳಜಿ ಮತ್ತು ಬದ್ಧತೆ ನನ್ನನು ಪ್ರಭಾವಿಸಿದೆ. ಅವರು ಎಂದಿಗೂ ಹಿಮ್ಮೆಟ್ಟಲಿಲ್ಲ, ಒಬ್ಬ ವ್ಯಕ್ತಿಯಾಗಿ ನಾನು ರೋಹಿತ್ ರನ್ನು ಮಿಸ್ ಮಾಡಿಕೊಳ್ಳುತ್ತೇನೆ” ಎಂದರು.

ಭಾರತೀಯ ಕ್ರಿಕೆಟ್ ತಂಡದಲ್ಲಿರುವ ಇಂದಿನ ಹುಡುಗರು ಅದ್ಭುತ ಪ್ರತಿಭೆಗಳಿದ್ದಾರೆ. ಈ ಸಮಯದಲ್ಲಿ ಅವರ ಶಕ್ತಿ ಮತ್ತು ಆತ್ಮವಿಶ್ವಾಸ ಮತ್ತೊಂದು ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ಭಾರತವು ಮುಂದಿನ 5-6 ವರ್ಷಗಳಲ್ಲಿ ಹಲವಾರು ಟ್ರೋಫಿಗಳನ್ನು ಗೆಲ್ಲುತ್ತದೆ. ಇಷ್ಟೆಲ್ಲಾ ಸಾಮರ್ಥ್ಯವಿದೆ, ಇಷ್ಟೆಲ್ಲಾ ಒಳ್ಳೆಯ ಕ್ರಿಕೆಟ್ ಆಡುತ್ತಿದ್ದೇವೆ, ಆದರೆ ದೊಡ್ಡ ಟ್ರೋಫಿ ಎಂಬ ಗೆರೆ ದಾಟಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವೊಂದಿತ್ತು. ಆದರೆ ಮುಂದಿನ ದಿನಗಳಲ್ಲಿ ಹುಡುಗರು ಇದೇ ವಿಶ್ವಾಸದಲ್ಲಿ ತುಂಬಾ ಟ್ರೋಫಿ ಗೆಲ್ಲಲಿದ್ದಾರೆ ಎಂಬ ದೈರ್ಯವಿದೆ” ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next