Advertisement

T20: ಭಾರತದೆದುರಿನ ಸರಣಿಗೆ ಆಸ್ಟ್ರೇಲಿಯಕ್ಕೆ ಮ್ಯಾಥ್ಯೂ ವೇಡ್‌ ನಾಯಕ

11:37 PM Oct 28, 2023 | Team Udayavani |

ಮೆಲ್ಬರ್ನ್: ತನ್ನ ಕ್ರಿಕೆಟ್‌ ಬದುಕು ಮುಗಿದೇ ಹೋಯಿತು ಎಂದೇ ಭಾವಿಸಿದ್ದ ಮ್ಯಾಥ್ಯೂ ವೇಡ್‌ ಅವರಿಗೆ ಅಚ್ಚರಿಯ ಆಹ್ವಾನವೊಂದು ಲಭಿಸಿದೆ. ಅವರನ್ನು ಭಾರತದೆದುರಿನ ಟಿ20 ಸರಣಿಗೆ ಆಸ್ಟ್ರೇಲಿಯ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ವಿಶ್ವಕಪ್‌ ಬಳಿಕ ಈ 5 ಪಂದ್ಯಗಳ ಸರಣಿ ನಡೆಯಲಿದೆ.

Advertisement

35 ವರ್ಷದ ಮ್ಯಾಥ್ಯೂ ವೇಡ್‌ ಕಳೆದ ವರ್ಷದ ಟಿ20 ವಿಶ್ವಕಪ್‌ ಪಂದ್ಯಾವಳಿ ಬಳಿಕ ನೇಪಥ್ಯಕ್ಕೆ ಸರಿದಿದ್ದರು. ಆಸ್ಟ್ರೇಲಿಯ ಪರ ಇದೇ ತನ್ನ ಕೊನೆಯ ಸರಣಿ ಆಗಿರಬಹುದೆಂದು ಭಾವಿಸಿದ್ದರು. ಆದರೀಗ ದಿಢೀರ್‌ ಕರೆ ಪಡೆದಿದ್ದಾರೆ. ಅದೂ ನಾಯಕರಾಗಿ! ಮತ್ತೂಂದು ಅಚ್ಚರಿಯೆಂದರೆ, ಡೇವಿಡ್‌ ವಾರ್ನರ್‌ ಮತ್ತು ಸ್ಟೀವನ್‌ ಸ್ಮಿತ್‌ ಅವರಿಗೆ ಮರಳಿ ಟಿ20 ತಂಡದಲ್ಲಿ ಅವಕಾಶ ಕಲ್ಪಿಸಿದ್ದು.

ಆರನ್‌ ಫಿಂಚ್‌ ವಿದಾಯದ ಬಳಿಕ ಆಸ್ಟ್ರೇಲಿಯದ ಟಿ20 ಕ್ರಿಕೆಟ್‌ ಖಾಯಂ ನಾಯಕನನ್ನು ಹೊಂದಿರಲಿಲ್ಲ. ಮಿಚೆಲ್‌ ಮಾರ್ಷ್‌ ಮತ್ತು ಮ್ಯಾಥ್ಯೂ ವೇಡ್‌ ಈ ಜವಾಬ್ದಾರಿಯನ್ನು ವಹಿಸುತ್ತ ಬಂದಿದ್ದರು.
ಭಾರತಕ್ಕೆ ಆಗಮಿಸಲಿರುವ ಆಸ್ಟ್ರೇಲಿಯ ತಂಡದಿಂದ ಪ್ರಮುಖ ಆಟಗಾರರೆಲ್ಲ ಹೊರಗುಳಿದಿದ್ದಾರೆ. ಟೆಸ್ಟ್‌ ಹಾಗೂ ಏಕದಿನ ನಾಯಕ ಪ್ಯಾಟ್‌ ಕಮಿನ್ಸ್‌, ಜೋಶ್‌ ಹೇಝಲ್‌ವುಡ್‌, ಮಿಚೆಲ್‌ ಮಾರ್ಷ್‌, ಕ್ಯಾಮರಾನ್‌ ಗ್ರೀನ್‌… ಯಾರೂ ಈ ತಂಡದಲ್ಲಿಲ್ಲ. ಹಾಗೆಯೇ ಹೊಸ ಮುಖಗಳೂ ಇಲ್ಲ.

ವಿಶ್ವಕಪ್‌ ಮುಗಿದ ನಾಲ್ಕೇ ದಿನಗಳಲ್ಲಿ (ನ. 23) ವಿಶಾಖಪಟ್ಟಣದಲ್ಲಿ ಟಿ20 ಸರಣಿ ಆರಂಭವಾಗಲಿದೆ.

ಆಸ್ಟ್ರೇಲಿಯ ತಂಡ: ಮ್ಯಾಥ್ಯೂ ವೇಡ್‌ (ನಾಯಕ), ಜೇಸನ್‌ ಬೆಹ್ರೆನ್ ಡಾರ್ಫ್, ಸೀನ್‌ ಅಬೋಟ್‌, ಟಿಮ್‌ ಡೇವಿಡ್‌, ನಥನ್‌ ಎಲ್ಲಿಸ್‌, ಟ್ರ್ಯಾವಿಸ್‌ ಹೆಡ್‌, ಜೋಶ್‌ ಇಂಗ್ಲಿಸ್‌, ಸ್ಪೆನ್ಸರ್‌ ಜಾನ್ಸನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ತನ್ವೀರ್‌ ಸಂಗಾ, ಮ್ಯಾಟ್‌ ಶಾರ್ಟ್‌, ಸ್ಟೀವನ್‌ ಸ್ಮಿತ್‌, ಮಾರ್ಕಸ್‌ ಸ್ಟೋಯಿನಿಸ್‌, ಡೇವಿಡ್‌ ವಾರ್ನರ್‌, ಆ್ಯಡಂ ಝಂಪ.

Advertisement
Advertisement

Udayavani is now on Telegram. Click here to join our channel and stay updated with the latest news.

Next