Advertisement

T20: ಹೆಡ್‌ ಆಟಕ್ಕೆ ತಲೆಬಾಗಿದ ಇಂಗ್ಲೆಂಡ್‌

12:40 AM Sep 13, 2024 | Team Udayavani |

ಸೌತಾಂಪ್ಟನ್‌: ಆರಂಭಕಾರ ಟ್ರ್ಯಾವಿಸ್‌ ಹೆಡ್‌ ಅವರ ಪ್ರಚಂಡ ಬ್ಯಾಟಿಂಗ್‌ ಹಾಗೂ ಸಾಂಫಿಕ ಬೌಲಿಂಗ್‌ ದಾಳಿಯ ನೆರವಿನಿಂದ ಇಂಗ್ಲೆಂಡ್‌ ಎದುರಿನ ಮೊದಲ ಟಿ20 ಪಂದ್ಯವನ್ನು ಪ್ರವಾಸಿ ಆಸ್ಟ್ರೇಲಿಯ 28 ರನ್ನುಗಳಿಂದ ಜಯಿಸಿದೆ.

Advertisement

“ರೋಸ್‌ ಬೌಲ್‌’ನಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 19.3 ಓವರ್‌ಗಳಲ್ಲಿ 179 ರನ್‌ ಪೇರಿಸಿದರೆ, ಇಂಗ್ಲೆಂಡ್‌ 19.2 ಓವರ್‌ಗಳಲ್ಲಿ 151ಕ್ಕೆ ಆಲೌಟ್‌ ಆಯಿತು.ಆಸ್ಟ್ರೇಲಿಯ ಪವರ್‌ ಪ್ಲೇಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿತು. 6 ಓವರ್‌ಗಳಲ್ಲಿ 86 ರನ್‌ ಹರಿದು ಬಂತು. ಈ ಅವಧಿಯಲ್ಲಿ ಟ್ರ್ಯಾವಿಸ್‌ ಹೆಡ್‌ ಸಿಡಿದು ನಿಂತಿದ್ದರು.

ಹೆಡ್‌ 23 ಎಸೆತಗಳಿಂದ 59 ರನ್‌ ಬಾರಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, 4 ಸಿಕ್ಸರ್‌ ಒಳಗೊಂಡಿತ್ತು. ಅರ್ಥಾತ್‌, ಈ 59ರಲ್ಲಿ 56 ರನ್‌ ಬರೀ ಬೌಂಡರಿ-ಸಿಕ್ಸರ್‌ ಮೂಲಕವೇ ಬಂದಿತ್ತು. 19 ಎಸೆತಗಳಲ್ಲಿ ಅವರ ಅರ್ಧ ಶತಕ ಪೂರ್ತಿಗೊಂಡಿತು. ಚೇಸಿಂಗ್‌ ವೇಳೆ ಇಂಗ್ಲೆಂಡ್‌ ಪವರ್‌ ಪ್ಲೇಯಲ್ಲೇ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿತು. 46 ರನ್ನಿಗೆ 3 ವಿಕೆಟ್‌ ಬಿತ್ತು. ಅನಂತರವೂ ಆಸೀಸ್‌ ದಾಳಿಯನ್ನು ಸಮರ್ಥವಾಗಿ ನಿಭಾಯಿಸಲು ವಿಫ‌ಲವಾಯಿತು. ಆರೂ ಬೌಲರ್ ಆತಿಥೇಯರ ಮೇಲೆರಗಿದರು.

Advertisement

Udayavani is now on Telegram. Click here to join our channel and stay updated with the latest news.

Next