ಅಂಪಾಯರ್ ಹಲವು ಬಾರಿ ಮೈದಾನ ಮತ್ತು ಪಿಚ್ ಪರಿಶೀಲಿಸಿದ ಬಳಿಕ ಆಟಗಾರರಿಗೆ ಫೀಲ್ಡಿಂಗ್ ಮಾಡಲು ಮೈದಾನ ಸಮರ್ಥವಿಲ್ಲ ಎಂದು ಪರಿಗಣಿಸಿ ದಿನದಾಟವನ್ನು ರದ್ದುಮಾಡಿದರು.
Advertisement
ಸೋಮವಾರ ಇಲ್ಲಿ ಮಳೆಯಾಗಿರಲಿಲ್ಲ. ಆದರೆ ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಮೈದಾನದಲ್ಲಿ ಬಹಳಷ್ಟು ನೀರು ನಿಂತ ಕಾರಣ ಈ ಸಮಸ್ಯೆ ಎದುರಾಗಿದೆ. ಆಧುನಿಕ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಮೈದಾನದಲ್ಲಿ ನೀರು ಸಂಪೂರ್ಣ ಒಣಗಲು ಸಾಧ್ಯವಾಗಲಿಲ್ಲ.