ಈಸ್ಟ್ ಲಂಡನ್: ಚುಟುಕು ಕ್ರಿಕೆಟ್‌ನಲ್ಲಿ ಮತ್ತೆ ಪ್ರಾಬಲ್ಯ ಮೆರೆದ ಭಾರತದ ವನಿತೆಯರು 2ನೇ ಟಿ20 ಮುಖಾಮುಖೀಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಕೆಡವಿದ್ದಾರೆ. 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಏಕಪಕ್ಷೀಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 7 ವಿಕೆಟಿಗೆ 142 ರನ್ ಗಳಿಸಿದರೆ, ಅಮೋಘ ರೀತಿಯಲ್ಲಿ ಜವಾಬು ನೀಡಿದ ಭಾರತ 19.1 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 144 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಚೇಸಿಂಗ್ ವೇಳೆ ಆರಂಭಿಕರಾದ ಮಿಥಾಲಿ ರಾಜ್ ಮತ್ತು ಸ್ಮತಿ ಮಂಧನಾ 14.2 ಓವರ್‌ಗಳಲ್ಲಿ 106 ರನ್ ಜತೆಯಾಟ ನಿಭಾಯಿಸಿ ಭಾರತದ ಗೆಲುವನ್ನು ಸುಲಭಗೊಳಿಸಿದರು.
ಮಿಥಾಲಿ 61 ಎಸೆತಗಳಿಂದ ಅಜೇಯ 76 ರನ್ ಬಾರಿಸಿದರೆ (8 ಬೌಂಡರಿ), ಆಕ್ರಮಣಕಾರಿ ಆಟಕ್ಕಿಳಿದ ಮಂಧನಾ 42 ಎಸೆತಗಳಿಂದ 57 ರನ್ ಸಿಡಿಸಿದರು. ಇದು 3 ಸಿಕ್ಸರ್, 4 ಬೌಂಡರಿಗಳನ್ನು ಒಳಗೊಂಡಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್ 7 ರನ್ ಮಾಡಿ ಔಟಾಗದೆ ಉಳಿದರು.
ಹರಿಣಗಳಿಗೆ ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಪೂನಂ ಯಾದವ್ ಮತ್ತು ಅನುಜಾ ಪಾಟೀಲ್ ಸೇರಿಕೊಂಡು ಕಡಿವಾಣ ಹಾಕಿದರು. ವನ್‌ಡೌನ್ ಆಟಗಾರ್ತಿ ಸುನೆ ಲುಸ್ ಅವರಿಂದ ಸರ್ವಾಧಿಕ 33 ರನ್ ದಾಖಲಾಯಿತು.
ಸರಣಿಯ 3ನೇ ಪಂದ್ಯ ಫೆ. 18ರಂದು ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-7 ವಿಕೆಟಿಗೆ 142 (ಲುಸ್ 33, ಡಿ ಕ್ಲರ್ಕ್ 26, ಶಬಿ°ಂ 16, ಪೂನಂ 18ಕ್ಕೆ 2, ಅನುಜಾ 37ಕ್ಕೆ 2, ಶಿಖಾ 26ಕ್ಕೆ 1, ವಸ್ತ್ರಾಕರ್ 30ಕ್ಕೆ 1). ಭಾರತ-19.1 ಓವರ್‌ಗಳಲ್ಲಿ ಒಂದು ವಿಕೆಟಿಗೆ 144 (ಮಿಥಾಲಿ ಔಟಾಗದೆ 76, ಮಂಧನಾ 57, ಡೇನಿಯಲ್ಸ್ 21ಕ್ಕೆ 1).