Advertisement

ಟ್ವೆಂಟಿ-20: ಅಫ್ಘಾನಿಸ್ಥಾನಕ್ಕೆ 17 ರನ್‌ ಜಯ

09:41 AM Mar 11, 2017 | |

ಗ್ರೇಟರ್‌ ನೋಯ್ಡಾ: ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ಥಾನ ತಂಡವು ಅಯರ್‌ಲ್ಯಾಂಡ್‌ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ  ದ್ವಿತೀಯ ಪಂದ್ಯದಲ್ಲಿ ಅಯರ್‌ಲ್ಯಾಂಡ್‌ ತಂಡವನ್ನು ಡಕ್‌ವರ್ತ್‌ ಲೂಯಿಸ್‌ ನಿಯಮದಡಿ 17 ರನ್ನುಗಳಿಂದ ಸೋಲಿಸಿದೆ.

Advertisement

ಗ್ರೇಟರ್‌ ನೋಯ್ಡಾದಲ್ಲಿ ಸಾಗಿದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ ತಂಡವು 8 ವಿಕೆಟಿಗೆ 184 ರನ್‌ ಗಳಿಸಿತ್ತು. ಆಬಳಿಕ ಮಳೆಯಿಂದಾಗಿ ಸ್ವಲ್ಪ ಹೊತ್ತು ಆಟ ಸ್ಥಗಿತಗೊಂಡಿತು. ಇದರಿಂದಾಗಿ ಓವರ್‌ಗಳ ಸಂಖ್ಯೆಯನ್ನು ಕಡಿತ ಮಾಡಲಾಯಿತು. 11 ಓವರ್‌ಗಳಲ್ಲಿ ಗೆಲ್ಲಲು 111 ರನ್‌ ಗಳಿಸುವ ಗುರಿ ಪಡೆದ ಅಯರ್‌ಲ್ಯಾಂಡ್‌ ತಂಡವು 9 ವಿಕೆಟಿಗೆ 93 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಒಪ್ಪಿಕೊಂಡಿತು. ಪಾಲ್‌ ಸ್ಟರ್ಲಿಂಗ್‌ ಮತ್ತು ವಿಲಿಯಮ್‌ ಪೋರ್ಟರ್‌ಫೀಲ್ಡ್‌ ಮಾತ್ರ ಎರಡಂಕೆಯ ಮೊತ್ತ ಗಳಿಸಿದ್ದರು.

ಈ ಗೆಲುವಿನಿಂದ ಅಫ್ಘಾನಿಸ್ಥಾನ ತಂಡವು ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಸರಣಿಯ ಮೂರನೇ ಪಂದ್ಯ ಮಾ. 12ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next