ಕಾಪು: ಅಮಾಯಕ ಹಿಂದೂಗಳು ಮತ್ತು ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆ ಯತ್ನಗಳ ಹಿಂದೆ ಹಿಂದೂ ಮತ, ಧರ್ಮವನ್ನು ಭಾರತದಿಂದ ತೊಲಗಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಹಿಂದೂ ಸಮುದಾಯವನ್ನು ಅಪಾಯಕ್ಕೆ ಸಿಲುಕಿಸುತ್ತಿರುವ ಅಪಾಯಕಾರಿ ಶಕ್ತಿಗಳನ್ನು ಮಟ್ಟ ಹಾಕಬೇಕಾದ ರಾಜ್ಯ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿರುವುದು ನಮ್ಮ ನಾಡಿದ ಬಲುದೊಡ್ಡ ದುರಂತವಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿದರು.
ಆ. 22ರಂದು ರಾತ್ರಿ ಕಾಪು ಪೇಟೆಯಲ್ಲಿ ಕಾಪು ಕ್ಷೇತ್ರ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಡೆದ ಪಂಜಿನ ಮೆರವಣಿಗೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಪು ಶೀÅ ಹಳೆ ಮಾರಿಯಮ್ಮ ದೇವಸ್ಥಾನದಿಂದ ಪ್ರಾರಂಭಗೊಂಡ ಪಂಜಿನ ಮೆರವಣಿಗೆ ಕಾಪು ಪೇಟೆಯಲ್ಲಿ ಸಮಾಪನಗೊಂಡಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ಪೂಜಾರಿ, ಜಿ. ಪಂ. ಸದಸ್ಯರಾದ ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ಶಶಿಕಾಂತ್ ಪಡುಬಿದ್ರಿ, ಪುರಸಭಾ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು, ಪಕ್ಷದ ಜಿಲ್ಲಾ ಮುಖಂಡರಾದ ಬೆ„ಕಾಡಿ ಸುಪ್ರಸಾದ್ ಶೆಟ್ಟಿ, ಯಶ್‌ಪಾಲ್ ಎ. ಸುವರ್ಣ, ಪ್ರವೀಣ್ ಶೆಟ್ಟಿ, ರವಿ ಅಮೀನ್, ಶ್ರೀಶ ನಾಯಕ್, ನಯನಾ ಗಣೇಶ್, ದಿನೇಶ್ ಎರ್ಮಾಳು, ನಿತಿನ್ ಸೇರಿಗಾರ್, ಶರತ್ ಶರ್ಮ, ರಮಾಕಾಂತ ದೇವಾಡಿಗ, ಶರಣ್ ಮಟ್ಟು, ಗಿರೀಶ್ ಕುಮಾರ್, ಕೆ. ಮುರಲೀಧರ ಪೈ, ವೀಣಾ ಶೆಟ್ಟಿ, ಪವಿತ್ರಾ ಶೆಟ್ಟಿ, ನವೀನ್ ಎಸ್. ಕೆ., ಸಂದೀಪ್ ರಾವ್, ಅನಿಲ್ ಕುಮಾರ್, ಸುರೇಂದ್ರ ಪೂಜಾರಿ, ಸತೀಶ್ ಪೂಜಾರಿ, ಸಂತೋಷ್ ಮೂಡುಬೆಳ್ಳೆ ಮೊದಲಾದವರು ಪಾಲ್ಗೊಂಡಿದ್ದರು.