Advertisement

ಸಿಂಡಿಕೇಟ್‌ ಬ್ಯಾಂಕ್‌ :ಎಂಡಿ, ಸಿಇಒ ಆಗಿ ಮೆಲ್ವಿನ್‌ ರೇಗೊ ಅಧಿಕಾರ

03:45 AM Jul 02, 2017 | Harsha Rao |

ಮಂಗಳೂರು: ಸಿಂಡಿಕೇಟ್‌ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮೆಲ್ವಿನ್‌ ರೇಗೊ ಅವರು ಜು. 1ರಂದು ಅಧಿಕಾರ ಸ್ವೀಕರಿಸಿದರು. ಅವರು ಈ ಮೊದಲು ಬ್ಯಾಂಕ್‌ ಅಫ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿದ್ದರು.

Advertisement

1984ರಲ್ಲಿ ಐಡಿಬಿಐಯಲ್ಲಿ ಕಾರ್ಯನಿರ್ವಹಣೆ ಪ್ರಾರಂಭಿಸಿದ ಅವರು 2003ರಲ್ಲಿ ಐಡಿಬಿಐ ಹೋಮ್‌ ಫೈನಾನ್ಸ್‌ ಲಿ.ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿ ನಿಯುಕ್ತಿಗೊಂಡಿದ್ದರು. 2008ರಲ್ಲಿ ಮತ್ತೆ ಐಡಿಬಿಐಗೆ ಮರಳಿದ ಅವರು ಅಂತಾರಾಷ್ಟ್ರೀಯ ಬ್ಯಾಂಕಿಂಗ್‌ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಬ್ಯಾಂಕಿನ ಉಪ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಪುಣೆಯ ಸಿಂಬಿಯೋಸಿಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನ ಎಂಬಿಎ ಪದವೀಧರಾಗಿರುವ ರೇಗೊ ಅವರು ಕಾರ್ಪೊರೇಟ್‌ ಬ್ಯಾಂಕಿಂಗ್‌, ರಿಹೆಬ್ಲಿಟೇಶನ್‌ ಫೈನಾನ್ಸ್‌ , ಟ್ರಸರಿ, ಇಂಟರ್‌ನ್ಯಾಶನಲ್‌ ಆ್ಯಂಡ್‌ ಡೊಮೆಸ್ಟಿಕ್‌ ರಿಸೋರ್ಸ್‌ಸ್‌, ಇನ್‌ಫ್ರಾಸ್ಟ್ರಕ್ಚರ್‌ ಕಾರ್ಪೊರೇಟ್‌ ಗ್ರೂಪ್‌ ಯೋಜನಾ ಮೌಲ್ಯಮಾಪನ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕ್ರೀಡಾಪಟುವಾಗಿದ್ದ ರೇಗೊ ಅವರು ಸಂಗೀತ ಹಾಗೂ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next