Advertisement

ಅಸ್ಪೃಶ್ಯತೆ ಒಂದು ಅನಿಷ್ಟ ಪದ್ಧತಿ: ಸುರೇಶ್‌ ಪರ್ಕಳ  

11:07 AM Mar 28, 2017 | |

ಉಪ್ಪಿನಂಗಡಿ: ರಾಷ್ಟ್ರಕ್ಕಾಗಿ ಬದುಕುವ ಕರ್ತವ್ಯವನ್ನು ನೆನಪಿಸುವ ಸಲುವಾಗಿ ಭಾರತ ಮಾತಾ ಪೂಜನ ಹಾಗೂ ಮಾತೃಭೋಜನ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆಸಿಕೊಂಡು ಬರುತ್ತಿದೆ ಎಂದು ಆರ್‌.ಎಸ್‌.ಎಸ್‌. ಸಾಮರಸ್ಯ ವಿಭಾಗದ ವಿಭಾಗ ಕಾರ್ಯಕಾರಿಣಿ ಸದಸ್ಯ  ಸುರೇಶ್‌ ಪರ್ಕಳ ತಿಳಿಸಿದರು.

Advertisement

ಅಸ್ಪೃಶ್ಯತೆ ಅನಿಷ್ಠ ಪದ್ಧತಿ ಅವರು ಹಿರೆಬಂಡಾಡಿ ಗ್ರಾಮದ ನಂದಿನಿ ನಗರದಲ್ಲಿ  ನಡೆದ ಭಾರತ ಮಾತಾ ಪೂಜನ ಹಾಗೂ ಮಾತೃ ಭೋಜನ  ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು. ಮೇಲುಕೀಳು ಎಂಬ ಕೆಟ್ಟ  ವ್ಯವಸ್ಥೆ ಯಾವುದೋ ಸಮಯದಲ್ಲಿ  ನಮ್ಮ ಸಮಾಜದೊಳಗೆ ನುಸುಳಿಕೊಂಡಿದೆ. ಸಮಾಜ ಆಚರಿಸಿಕೊಂಡು ಬಂದ ಅಸ್ಪೃಶ್ಯತೆ ಎಂಬ ಅನಿಷ್ಟ ಪದ್ಧತಿ ಹಿಂದೂ ಸಮಾಜಕ್ಕೆ ಶೋಭೆಯಲ್ಲ.    ಹೊಟೇಲಿನಲ್ಲಿ  ನಾವು ಒಟ್ಟಾಗಿ ಕುಳಿತು ಉಣ್ಣುತ್ತೇವೆ. ದೇವಾಲಯದಲ್ಲೇಕೆ ಅದು ಸಾಧ್ಯವಾಗುತ್ತಿಲ್ಲ. ದೇವಾಲಯದಲ್ಲಿ ದೇವರ ಪ್ರಸಾದವನ್ನು ಒಟ್ಟಾಗಿ ಕುಳಿತು ಉಣ್ಣುವ  ಮನಃಸ್ಥಿತಿ ಮೂಡುವವರೆಗೆ ನಮ್ಮ ದೌರ್ಬಲ್ಯವನ್ನು ನಿವಾರಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಜಿ.ಪಂ. ಅಧ್ಯಕ್ಷ, ಕಾಂಗ್ರೆಸ್‌ ಮುಂದಾಳು ಸೋಮನಾಥ  ಮಾತನಾಡಿ, ಸಂಘ ನಿವಾರಿಸಲು ಸದ್ದು  ಗದ್ದಲವಿಲ್ಲದೆ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ನಂಬಲಾಗುತ್ತಿಲ್ಲ. ಅನುಪಮ ಕಾರ್ಯದ ಬಗ್ಗೆ ನಮ್ಮವರಿಗಿನ್ನೂ  ತಿಳಿಯದಿರುವುದು ದುಃಖ ತರುತ್ತಿದೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ಜನತೆ  ಅಸ್ಪೃಶ್ಯತೆಯ ಮನೋಸ್ಥಿತಿಯಿಂದ ಯಾಕಾಗಿ ಹೊರಬಂದಿದ್ದಾರೆ ಎಂಬ ಪ್ರಶ್ನೆಗೆ  ನನಗಿಲ್ಲಿ  ಉತ್ತರ ಲಭಿಸಿದೆ ಎಂದು ಹೇಳಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವನ್ನು  ಶ್ಲಾ ಸಿದರು.

47 ಮನೆಗಳಿಂದ ಸಿದ್ದಪಡಿಸಿ ತಂದಿರಿಸಿದ ವಿಭಿನ್ನ ಬಗೆಯ ಭಕ್ಷ್ಯಗಳನ್ನು  ಸಾಮೂಹಿಕವಾಗಿ ಉಂಡು ಸಾಮರಸ್ಯದ ಭಾವವನ್ನು ತೋರಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಚಾರಕ್‌ ಬಾಲಕೃಷ್ಣ ಕಿಣಿ, ತಾಲೂಕು ಕಾರ್ಯವಾಹ ಸುಬ್ರಾಯ ಪುಣಚ, ತಾಲೂಕು ವಿಸ್ತಾರಕ್‌ ರೋಹಿತ್‌, ಸ್ಥಳೀಯ ಮುಂದಾಳುಗಳಾದ ಕೃಷ್ಣಪ್ಪ ಪೂಜಾರಿ, ಅಶೋಕ್‌ ಕುಮಾರ್‌ ರೈ ನೆಕ್ಕರೆ,  ಅಕ್ಷಯ್‌ ಗಾಣಿಗ, ಗಣೇಶ್‌, ಹರಿರಾಮಚಂದ್ರ, ಎನ್‌. ರಾಘವೇಂದ್ರ ನಾಯಕ್‌, ಶ್ಯಾಮಲಾ ಶೆಣೈ, ಮಹೇಶ್‌ ಬಜತ್ತೂರು, ಎನ್‌. ಉಮೇಶ್‌ ಶೆಣೈ, ದೇವರಾಜ್‌, ಅನೂಪ್‌ ಸಿಂಗ್‌, ಶಿವಾನಂದ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next