Advertisement

ಹುಬ್ಬಳ್ಳಿ: ಗಮನ ಸೆಳೆದ ನಗರ ಸ್ವಚ್ಛತೆ ಕುರಿತ ಜನಜಾಗೃತಿ ಕಿರುಚಿತ್ರ

01:49 PM Oct 05, 2020 | sudhir |

ಹುಬ್ಬಳ್ಳಿ: ಸ್ವಚ್ಛತಾ ಅಭಿಯಾನದ ಕುರಿತು, ನಗರದಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನವೀನ ಶೆಟ್ಟರ ಅವರ ಪರಿಕಲ್ಪನೆ – ನಿರ್ದೇಶನದಲ್ಲಿ ತಯಾರಾದ ಕಿರುಚಿತ್ರ ಗಮನ ಸೆಳೆದಿದೆ.

Advertisement

ನಗರ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ತರ ವಾಗಿದ್ದು, ಅವರ ಸೇವೆಯನ್ನಿಲ್ಲಿ ಸ್ಮರಿಸಲಾಗಿದೆ. ಜೊತೆಗೆ ಜನರು ಯಾವ ರೀತಿಯಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು? ಕಸದ ವಾಹನ ಬಂದಾಗ ಮನೆಯ ಕಸವನ್ನು ಯಾವ ರೀತಿಯಲ್ಲಿ ವಿಂಗಡಿಸಿ ನೀಡಬೇಕು? ಎಂಬುದರ ಜೊತೆಗೆ ಪ್ಲಾಸ್ಟಿಕ್‌ ಬಳಕೆ ತ್ಯಜಿಸುವುದು, ಚಿಕ್ಕ ವಯಸ್ಸಿನಿಂದಲೇ ನೈರ್ಮಲ ಜಾಗೃತಿ ಮೂಡಿಸುವುದರ ಕುರಿತು ಹೇಳಲಾಗಿದೆ. ನವಋತು ಕ್ರಿಯೇಶನ್ಸ್‌ ನಿಂದ ಸಿದ್ಧವಾಗಿರುವ ಮೂರು ನಿಮಿಷಗಳ ಕಿರುಚಿತ್ರ ಯೂಟ್ಯೂಬ್‌ ಚಾನೆಲ್‌ನಲ್ಲಿ ಗಾಂಧೀಜಿ-ಶಾಸ್ತ್ರೀಜಿ ಜಯಂತಿಯಂದು ಬಿಡುಗಡೆ ಗೊಂಡಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ :ಹತ್ರಾಸ್ ಭೇಟಿ: ಭೀಮ್ ಆರ್ಮಿಯ ಮುಖ್ಯಸ್ಥ ಸೇರಿದಂತೆ 400ಕ್ಕೂ ಹೆಚ್ಚು ಜನರ ಮೇಲೆ FIR ದಾಖಲು

ವಿದ್ಯಾನಗರದ ಅಕ್ಷಯ ಕಾಲೋನಿ 4ನೇ ಫೇಸ್‌ ಜನರ ಸಹಕಾರದೊಂದಿಗೆ ವಿಡಿಯೋ ಮೂಡಿಬಂದಿದೆ. ಪೌರಕಾರ್ಮಿಕರಾದ ಶರಣಬಸಪ್ಪ ಅಮರಾವತಿ, ನವೀನ, ಹನುಮವ್ವ ಪೊಲೀಸ್‌ಪಾಟೀಲ ಅಭಿನಯಿಸಿದ್ದಾರೆ.

ಅಲ್ಲದೇ ಪ್ರಭು ಕಲ್ಲಯ್ಯನವರ, ವಿಜಯಕುಮಾರ ಬಾರಕೇರ, ಪ್ರಥಮ ಕಲ್ಲಯ್ಯನವರ, ಬೇಬಿ ಶ್ರಾವಣಿ, ಅಪೇಕ್ಷಾ ಮೈಸೂರ್‌, ವಾಣಿ ಬಾರಕೇರ ಪಾತ್ರ ನಿರ್ವಹಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನ ವಿಜಯ ಇಬ್ರಾಹಿಂಪುರ ಅವರದ್ದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next