Advertisement
ಜೋಗದ ಸಿರಿಯನ್ನು ಮೇಲಿನಿಂದ ನೋಡುವುದೇನು… ಕೆಳಗಿಳಿದು ಕಾಣೋಣ ಎನ್ನುವ ಹುಚ್ಚು ಹುರುಪಿನಲ್ಲಿ ನಾವು ಕೆಳಗಿಳಿಯಲು ಆರಂಭಿಸಿದೆವು. ಕಲ್ಲು, ಮಣ್ಣು, ಎತ್ತರ, ತಗ್ಗಿನ ಆ ಕಾಲುಹಾದಿ ಅಷ್ಟೊಂದು ಸುಗಮವಾಗಿರಲಿಲ್ಲ. ಉಮೇದಿನಿಂದ ಇಳಿಯುವುದೇನೋ ಇಳಿದೆವು. ಅಲ್ಲಿ ಆಳದಿಂದ ಕತ್ತೆತ್ತಿ ನೋಡಿದರೆ ಮೇಲಿದ್ದವರು ಚಿಕ್ಕ ಚಿಕ್ಕ ಆಕೃತಿಗಳಲ್ಲಿ ಲಿಲ್ಲಿಪುಟ್‌ನಂತೆ ಕಾಣುತ್ತಿದ್ದರು. ನದಿಪಾತ್ರದಲ್ಲಿ ನಡೆದ ನಾವು ಜೋಗದ ಗುಂಡಿಯ ಹತ್ತಿರ ತಲುಪಿದೆವು.ಜಲಪಾತದ ರಭಸಕ್ಕೆ ನೀರಧಾರೆಯ ತುಂತುರುಗಳು ಗಾಳಿಗೆ ತೂರಾಡಿ ನಮ್ಮನ್ನೆಲ್ಲ ತೋಯಿಸಿದವು. ಅಷ್ಟು ದೂರ ಹೋದ ನಂತರ ನೀರು ಕಂಡ ನಮಗೆ ಸ್ನಾನ
ಮಾಡದೆ ಬರಲು ಮನಸ್ಸಾಗಲಿಲ್ಲ. ಹೀಗಾಗಿ ಈಜು ಗೊತ್ತಿದ್ದ ನಾನು ಮೊದಲು ನೀರಿಗಿಳಿದೆ. ಉಳಿದವರು ನನ್ನನ್ನು ಹಿಂಬಾಲಿಸಿದರು. ಜೋಗದ ಗುಂಡಿಯ
ಒಂದಷ್ಟು ದೂರ ಈಜಿದ್ದೂ ಆಯಿತು. ಬಳಿಕ ಸುಸ್ತಾಗಿ ಮೇಲೆ ಬಂದ ನಾವು ನದಿಪಾತ್ರದಲ್ಲಿರುವ ಕೋಡುಗಲ್ಲನ್ನೇರಿ ಫೋಟೊ ಕ್ಲಿಕ್ಕಿಸಿಕೊಂಡೆವು.
ನೀವತೊಡಗಿದಂತೆ ಕೊಂಚ ಹಾಯೆನಿಸಿತು. ಒಂದಿಷ್ಟು ನೀರನ್ನು ಹೊಟ್ಟೆಗಿಳಿಸಿ ಮತ್ತೆ ಅವರೊಂದಿಗೆ ನಿಧಾನಕ್ಕೆ ಹೆಜ್ಜೆಹಾಕಿದೆ. ಮೇಲೆ ಬಂದ ನಂತರ ನೆಮ್ಮದಿಯ ನಿಟ್ಟುಸಿರಿಟ್ಟೆ. ಅನಂತರ ಬಹಳಷ್ಟು ಸಲ ನಾನು ಜೋಗಕ್ಕೆ ಹೋಗಿದ್ದೇನೆ. ಹೋದಾಗಲೆಲ್ಲ ಈ ನೆನಪು ಮಾತ್ರ ನನ್ನನ್ನು ಬಿಡದೆ ಕಾಡಿದ್ದಿದೆ. ಮೊದಲ ಸಲ ಸವಿದ ಜೋಗದ ಸೊಬಗನ್ನು ಜೊತೆಯಾದ ಆತಂಕವನ್ನು ಎಂದಿಗಾದರೂ ಮರೆಯು ವುದುಂಟೇ?
Related Articles
Advertisement