Advertisement
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನಗಳ ನಿಯಮಕ್ಕೆ ತಿದ್ದುಪಡಿ ತಂದಿದ್ದು, ಅದರಂತೆ ವಾಹನಗಳ ಸ್ವಯಂಚಾಲಿತ ಪರೀಕ್ಷೆಗೆ ಸೂಚಿಸ ಲಾಗಿದೆ. ಹೀಗಾಗಿ ರಾಜ್ಯದ 32 ಕಡೆ ಇಂಥ ಕೇಂದ್ರ ಆರಂಭಕ್ಕೆ ರಾಜ್ಯ ಸರಕಾರ ನಿರ್ಧರಿಸಿದೆ.
ಹೊಸ ಕೇಂದ್ರದಲ್ಲಿ ತಪಾಸಣೆ ಕಾರ್ಯ “ಸ್ವಯಂ ಚಾಲಿತ’ವಾಗಿ ನಡೆಯಲಿದೆ. ಸ್ವಯಂಚಾಲಿತ ಯಂತ್ರಗಳ ಮೂಲಕ ವಾಹನಗಳ ತಪಾಸಣೆ ನಡೆಸಲಾಗುತ್ತದೆ. ಹೊಸ ಕೇಂದ್ರ ನಿರ್ಮಾಣವಾದ ಬಳಿಕ ಕಂಪ್ಯೂಟರ್ ಪರಿಶೀಲನೆಯಲ್ಲಿಯೇ ಸರ್ಟಿಫಿಕೇಟ್ ನೀಡಲಾಗುತ್ತದೆ. ಟೆಂಡರ್ನಲ್ಲಿ ಆಯ್ಕೆಯಾಗುವ ಸಂಸ್ಥೆಯೇ ಕೇಂದ್ರದ ಸ್ಥಾಪನೆ ಹಾಗೂ ನಿರ್ವಹಣೆ ಮಾಡ ಬೇಕಾಗು ತ್ತದೆ. ಉಸ್ತುವಾರಿ, ಮೇಲ್ವಿಚಾರಣೆಯನ್ನು ಆಯಾ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಮೋಟಾರು ವಾಹನ ನಿರೀಕ್ಷಕರು ನಡೆಸಲಿದ್ದಾರೆ.
Related Articles
ಸಾರಿಗೆ ಇಲಾಖೆ ಜಮೀನು ಹೊಂದಿರುವ 13 ಕಡೆ (ದೇವನ ಹಳ್ಳಿ, ತುಮಕೂರು, ಕೋಲಾರ, ಶಿವಮೊಗ್ಗ, ಬೆಳಗಾವಿ, ಗದಗ, ರಾಣಿಬೆನ್ನೂರು, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಬಳ್ಳಾರಿ, ಬೀದರ್) ಡಿಬಿಎಫ್ಒಟಿ (ಡಿಸೈನ್ ಬಿಲ್ಡ್ ಫೈನಾನ್ಸ್ ಆಪರೇಟ್ ಆ್ಯಂಡ್ ಟ್ರಾನ್ಸ್ಫರ್) ಮಾದರಿ; ಜಮೀನು ಇಲ್ಲದ 19 ಕಡೆ (ಚಾಮರಾಜನಗರ, ಹಾಸನ, ಮಂಡ್ಯ, ಚಿಕ್ಕಮಗಳೂರು, ಉಡುಪಿ, ಮಡಿಕೇರಿ, ಮಂಗಳೂರು, ಚಿತ್ರದುರ್ಗ, ಕಾರವಾರ, ಕಲಬುರಗಿ, ರಾಯಚೂರು, ಹೊಸಪೇಟೆ, ಕೊಪ್ಪಳ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು (ದಕ್ಷಿಣ), ಬೆಂಗಳೂರು (ಪೂ.), ಬೆಂಗಳೂರು (ಪ.) ಮತ್ತು ಬೆಂಗಳೂರು (ಕೇಂದ್ರ) ಸ್ಥಳಗಳಲ್ಲಿ ಬಿಒಒ (ಬಿಲ್ಡ್ ಓನ್ ಆಪರೇಟ್) ಮಾದರಿಯಲ್ಲಿ ಪಿಪಿಪಿ (ಖಾಸಗಿ ಸಹಭಾಗಿತ್ವ) ಸ್ವರೂಪದಲ್ಲಿ ಸ್ಥಾಪಿಸಲಾಗುತ್ತದೆ.
Advertisement
ವಾಹನಗಳ ತಪಾಸಣೆಗೆ ಅಟೋಮೇಟೆಡ್ ಟೆಸ್ಟಿಂಗ್ ಸೆಂಟರ್ ಆರಂಭಿಸಲು ಕೇಂದ್ರ ಸರಕಾರದಿಂದ ಸೂಚನೆ ಬಂದಿದೆ. ಇದರಂತೆ ರಾಜ್ಯದ ಒಟ್ಟು 32 ಕಡೆ ಈ ಕೇಂದ್ರ ಆರಂಭಿಸಲು ನಿರ್ಧರಿಸಿದ್ದೇವೆ. ಸಾರಿಗೆ ಇಲಾಖೆಯ ನಿಗಾದೊಂದಿಗೆ ಪ್ರಕ್ರಿಯೆ ನಡೆಯಲಿದೆ. ಮಾನವ ಹಸ್ತಕ್ಷೇಪ ಇಲ್ಲದೆ ವಾಹನಗಳ ಅರ್ಹತೆಯನ್ನು ಯಂತ್ರದ ಮೂಲಕ ಪರೀಕ್ಷೆ ಮಾಡಿ ಅರ್ಹತಾ ಪತ್ರ ನವೀಕರಣ ನಡೆಸಲಾಗುತ್ತದೆ.– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ