Advertisement

Nagpur; ಮತ್ತೆ ತಾಯಿಯ ಹುಡುಕಾಟಕ್ಕಿಳಿದ ಸ್ವೀಡಿಷ್ ಮಹಿಳೆ: ಏನಿದು ಸ್ಟೋರಿ ?

10:42 AM Apr 03, 2024 | Team Udayavani |

ನಾಗ್ಪುರ: ಕರುಳ ಬಳ್ಳಿಯ ಸಂಬಂಧ ಎಲ್ಲಕ್ಕಿಂತ ದೊಡ್ಡದು. ಇದಕ್ಕೆ ಸಾಕ್ಷಿ ಎಂಬಂತೆ ಸಿನಿಮಾವೊಂದರ ಕಥೆಗೆ ಪ್ರೇರಣೆಯಾಗಬಲ್ಲ ಘಟನೆಯಲ್ಲಿ ಸ್ವೀಡಿಷ್ ಪ್ರಜೆಯಾಗಿರುವ ಪಟ್ರೀಷಿಯಾ ಎರಿಕ್ಸನ್ ನಾಗ್ಪುರಕ್ಕೆ ಬಂದು ಗಲ್ಲಿಗಲ್ಲಿಗಳಲ್ಲಿ ತನ್ನ ಹೆತ್ತ ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Advertisement

ನಾಲ್ಕು ದಶಕಗಳ ಹಿಂದೆ ಫೆಬ್ರವರಿ 1983 ರಲ್ಲಿ ನಾಗ್ಪುರದ ಡಾಗಾ ಆಸ್ಪತ್ರೆಯಲ್ಲಿ ಪಟ್ರೀಷಿಯಾ ಜನಿಸಿದ್ದರು. ಆಬಳಿಕ ಆಕೆಯನ್ನು ಒಂದು ವರ್ಷದ ವರೆಗೆ ಅನಾಥಾಶ್ರಮದಲ್ಲಿ ಸಲಹಲಾಗಿತ್ತು. ಒಂದು ವರ್ಷದ ನಂತರ ಸ್ವೀಡಿಷ್ ದಂಪತಿಗಳು ದತ್ತು ಪಡೆದಿದ್ದರು.

ಇದು ನಾಗ್ಪುರಕ್ಕೆ ಪಟ್ರೀಷಿಯಾ ಎರಿಕ್ಸನ್ ಅವರ ಎರಡನೇ ಭೇಟಿಯಾಗಿದೆ. ತನ್ನ ಹುಡುಕಾಟದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದರೂ, ಆಕೆ ತನ್ನ ಜನ್ಮ ನೀಡಿದ ತಾಯಿಯನ್ನು ಹುಡುಕಲು ನಿರ್ಧರಿಸಿದ್ದಾರೆ. ಅವಳು ತನ್ನ ದತ್ತು ಪಡೆದ ಪೋಷಕರಿಗೆ ಕೃತಜ್ಞಳಾಗಿದ್ದು, ತನ್ನ ಜೈವಿಕ ತಾಯಿ,ತಂದೆಯೊಂದಿದೆ ಸಂಪರ್ಕ ಸಾಧಿಸಲು ಪಣತೊಟ್ಟಿದ್ದಾರೆ. ವಕೀಲೆ ಅಂಜಲಿ ಪವಾರ್ ಎನ್ನುವವರು ಪಟ್ರೀಷಿಯಾ ಎರಿಕ್ಸನ್ ಅವರಿಗೆ ಭಾವನಾತ್ಮಕ ಸಂಬಂಧದ ಅನ್ವೇಷಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಸೋಮವಾರ, ಪೆಟ್ರೀಷಿಯಾ ಅನಾಥಾಶ್ರಮಕ್ಕೂ ಭೇಟಿ ನೀಡಿ ವಿವರಗಳನ್ನು ಪಡೆಯಲು ಪ್ರಯತ್ನಿಸಿದ್ದಾರೆ.

ಅಂಜಲಿ ಪವಾರ್ ಮಾತನಾಡಿ “ನಾವು ಪೆಟ್ರೀಷಿಯಾ ಅವರ ತಾಯಿಯ ಹುಡುಕಾಟದಲ್ಲಿ ಸಹಾಯ ಮಾಡುತ್ತಿದ್ದೇವೆ. 1983 ರಲ್ಲಿ ಶಾಂತಿನಗರದಲ್ಲಿ ವಾಸಿಸುತ್ತಿದ್ದವರು, ಶಾಂತಾ ಮತ್ತು ರಾಮದಾಸ್ ಅವರ ಬಗ್ಗೆ ತಿಳಿದಿರುವವರು ಮುಂದೆ ಬರಬೇಕು. ನಮಗೆ ಸಹಾಯ ಮಾಡಿ. ಪೆಟ್ರೀಷಿಯಾ ತನ್ನ ತಾಯಿಯನ್ನು ಒಮ್ಮೆ ಭೇಟಿಯಾಗಲು ಬಯಕೆ ಹೊಂದಿದ್ದಾರೆ” ಎಂದು ಮನವಿ ಮಾಡಿದ್ದಾರೆ.

ವಿದೇಶಿ ಮಹಿಳೆಯೊಬ್ಬರು ಭಾರತದಲ್ಲಿ ತನ್ನ ಜೈವಿಕ ಪೋಷಕರನ್ನು ಹುಡುಕುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷದ ಡಿಸೆಂಬರ್‌ನಲ್ಲಿ, ಸ್ವಿಸ್ ಮಹಿಳೆ ವಿದ್ಯಾ ಫಿಲಿಪ್ಪನ್ ಕೂಡ ಮುಂಬೈನಲ್ಲಿ ತನ್ನ ಜೈವಿಕ ತಾಯಿಯನ್ನು ಹುಡುಕುವ ಅನ್ವೇಷಣೆಯಲ್ಲಿದ್ದರು. 2023 ರ ಹೊತ್ತಿಗೆ, ಒಂದು ದಶಕದ ಹುಡುಕಾಟ ನಡೆಸಿದ್ದರು.

Advertisement

ಫಿಲಿಪ್ಪನ್  1996,  ಫೆಬ್ರವರಿ 8ರಂದು ಜನಿಸಿದ್ದರು. ತಾಯಿ ಅವಳನ್ನು ಮಿಷನರೀಸ್ ಆಫ್ ಚಾರಿಟಿಯಲ್ಲಿ ತೊರೆದಿದ್ದರು. ನಂತರ ಆಕೆಯನ್ನು 1997 ರಲ್ಲಿ ಸ್ವಿಸ್ ದಂಪತಿಗಳು ದತ್ತು ಪಡೆದು ಸ್ವಿಟ್ಜರ್ಲೆಂಡ್‌ಗೆ ಕರೆದೊಯ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next