Advertisement

ಸ್ವೀಡನ್‌: ಟಿಕೆಟ್‌ ಮೊತ್ತ ಮರುಪಾವತಿಸಲು ವಿಳಂಬ

03:20 PM May 08, 2020 | mahesh |

ಸ್ವೀಡನ್‌: ಕೋವಿಡ್‌-19 ಬಿಕ್ಕಟ್ಟಿನಿಂದಾಗಿ ದೇಶಿಯ ವಿಮಾನ ಸೇರಿದಂತೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಸ್ಥಗಿತಗೊಂಡಿದೆ. ಜತೆಗೆ ಸೋಂಕು ಹರಡುವ ಭೀತಿ ಹಿನ್ನೆಲೆ ಸಾಕಷ್ಟು ಪ್ರಯಾಣಿಕರು ಟಿಕೆಟ್‌ ರದ್ದು ಮಾಡಿದ್ದರೆ, ಯಾವುದೇ ಶುಲ್ಕ ವಿಧಿಸದೆ ನೂರಕ್ಕೆ ನೂರರಷ್ಟು ಹಣವನ್ನು ಹಿಂದಿರುಗಿಸುವಂತೆ ಸರಕಾರಗಳೂ ಸೂಚಿಸಿವೆ. ಆದರೆ ಸ್ವೀಡನ್‌ನ ವಿಮಾನ ಕಂಪೆನಿಗಳು ಟಿಕೆಟ್‌ ಮೊತ್ತವನ್ನು ಹಿಂದಿರುಗಿಸಲು ನಿರಾಕಾರಿಸುತ್ತಿದ್ದು, ಪ್ರಯಾಣಿಕರಿಗೆ ತಮ್ಮ ಟಿಕೆಟ್‌ ಮೊತ್ತವನ್ನು ಪಡೆಯಲು ಪರದಾಡುತ್ತಿದ್ದಾರೆ ಎಂದು ಸ್ಥಳೀಯ ಪತ್ರಿಕೆ ಸ್ವೆನ್‌ಸ್ಕಾ ಡಾಗ್‌ಬ್ಲಾಡೆಟ್‌ ವರದಿ ಮಾಡಿದೆ.

Advertisement

ಕಳೆದ ಮಾರ್ಚ್‌ 1 ರಿಂದ ಮೇ 5 ರವರೆಗೆ ವಿಮಾನಯಾನ ಸಂಸ್ಥೆಗಳ ವಿರುದ್ಧ 613 ದೂರು ದಾಖಲಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಕರಣಗಳ ದಾಖಲು ಪ್ರಮಾಣದಲ್ಲಿ ಶೇ.4 ರಷ್ಟು ಹೆಚ್ಚಳವಾಗಿದೆ ಎಂದು ಸ್ವೀಡನ್‌ನ ಯುರೋಪಿಯನ್‌ ಗ್ರಾಹಕ ಕೇಂದ್ರವಾದ ಕನ್ಸುಮೆಂಟ್‌ ಯುರೋಪಾ ಹೇಳಿದೆ.

ವಾಣಿಜ್ಯ ಸಂಬಂಧಗಳ ವಿಷಯಕ್ಕೆ ಸಂಬಂಧಿಸಿದ ಪ್ರಯಾಣವನ್ನು ರದ್ದುಗೊಳಿಸಿದ್ದರೆ 7 ದಿನಗಳೊಗೆ ಟಿಕೆಟ್‌ ಮೊತ್ತವನ್ನು ಹಿಂದಿರುಗಿಸುವಂತೆ ಇಯು ಸರಕಾರ ಆದೇಶ ಹೊರಡಿಸಿದ್ದು, ಟೂರ್‌ ಪ್ಯಾಕೇಜ್‌ ರಜೆಯ (ಉದಾಹರಣೆಗೆ ಫ್ಲೆ„ಟ್‌ + ಹೊಟೇಲ್‌) ಟಿಕೆಟ್‌ ಅನ್ನು ರದ್ದುಗೊಳಿಸಿದ್ದರೆ 14 ದಿನಗಳ ಒಳಗೆ ಮೊತ್ತವನ್ನು ಮರುಪಾವತಿಸುವಂತೆ ಸ್ವೀಡಿಷ್‌ ಸರಕಾರ ಸೂಚಿಸಿತ್ತು. ಆದರೆ ಕಂಪೆನಿಗಳು ಮಾತ್ರ ಹಿಂದೇಟು ಹಾಕುತ್ತಿವೆ ಎನ್ನುತ್ತಿದ್ದಾರೆ ಪ್ರಯಾಣಿಕರು.

Advertisement

Udayavani is now on Telegram. Click here to join our channel and stay updated with the latest news.

Next