Advertisement
ರಾವ್ ಅಂಡ್ ರಾವ್ ವೃತ್ತ: ಕ್ಯಾಂಪ್ಕೋ ಸಹಯೋಗದಲ್ಲಿ ರಾವ್ ಆ್ಯಂಡ್ ರಾವ್ ಸರ್ಕಲ್‌ನಿಂದ ಬಂದರ್ ಮುಖ್ಯರಸ್ತೆಯ ವರೆಗೆ ಸ್ವತ್ಛತಾ ಕಾರ್ಯ ನಡೆಯಿತು. ಬೆಳಗ್ಗೆ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಹಾಗೂ ಎಂಡಿ ಸುರೇಶ್ ಭಂಡಾರಿ ಚಾಲನೆ ನೀಡಿದರು. ಸುಮಾರು 100 ಜನ ಕ್ಯಾಂಪ್ಕೋ ಸಿಬಂದಿ ಹಾಗೂ ಸ್ವತ್ಛ ಮಂಗಳೂರು ಅಭಿಯಾನದ ಹಿರಿಯ ಕಾರ್ಯಕರ್ತರು ಸುಮಾರು ಎರಡೂವರೆ ಗಂಟೆಗಳ ಸ್ವತ್ಛತೆ ನಡೆಧಿಸಿಧಿದರು. ಅಭಿಯಾನದ ಮುಖ್ಯ ಸಂಯೋಜಕ ಉಮಾನಾಥ್ ಕೋಟೆಕಾರ್ ಮಾರ್ಗದರ್ಶನ ನೀಡಿದ್ದು, ಟಿ.ಎಸ್.ಭಟ್ ಸಂಯೋಜಿಸಿದ್ದರು.
ಮನೀಶ್ ರಾವ್, ಕರುಣ ಬೆಳ್ಳೆ ಹಾಗೂ ಪ್ರದೀಪ ರಾವ್ ಸಹಿತ ಸುಮಾರು 50 ಜನರು ಸ್ವತ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಭವಂತಿ ರಸ್ತೆ: ಟೀಂ ಇನ್‌ಸ್ಪಿರೇಶನ್ ತಂಡದವರು ಪೊಲೀಸ್ ಉಪನಿರೀಕ್ಷಕ ಮದನ್ ನೇತೃತ್ವದಲ್ಲಿ ಭವಂತಿ ಸ್ಟ್ರೀಟ್‌ನಿಂದ ಕಾರ್‌ಸ್ಟ್ರೀಟ್ ವರೆಗೂ ಸ್ವತ್ಛತೆ ಕೈಗೊಂಡರು.
Related Articles
Advertisement
ಬೋಳಾರ: ನಿವೇದಿತಾ ಬಳಗದ ಸದಸ್ಯರಿಂದ ಬೋಳಾರ ಮುಖ್ಯ ಬೀದಿಯಲ್ಲಿ ಸ್ವತ್ಛತಾ ಜರಗಿತು. ರಘುರಾಮ್ ಉಪಾಧ್ಯಾಯ ಹಾಗೂ ಲಲಿತಾ ಉಪಾಧ್ಯಾಯ ಸ್ವತ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಮುಖ್ಯರಸ್ತೆ ಹಾಗೂ ಬದಿಯ ತೋಡುಗಳಲ್ಲಿದ್ದ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸಲಾಯಿತು. ಅಲ್ಲದೇ ಬ್ಯಾನರ್ ಪೋಸ್ಟರ್‌ಗಳನ್ನು ಕಿತ್ತು ಶುಚಿಗೊಳಿಸಲಾಯಿತು.
ಎ.ಬಿ. ಶೆಟ್ಟಿ ವೃತ್ತ: ಹಿಂದೂ ವಾರಿಯರ್ಸ್ ತಂಡದ ಸದಸ್ಯರಿಂದ ಎ.ಬಿ. ಶೆಟ್ಟಿ ವೃತ್ತದಿಂದ ಪಾಂಡೇಶ್ವರಕ್ಕೆ ಸಾಗುವ ಮಾರ್ಗಗಳನ್ನು ಸ್ವತ್ಛಗೊಳಿಸಲಾಯಿತು.
ಸಿಂಡಿಕೇಟ್ ಸದಸ್ಯ ಹರೀಶ್ ಆಚಾರ್ ಹಾಗೂ ದಿಲ್‌ರಾಜ್ ಆಳ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತೀಯ ವಿದ್ಯಾಭವನದೆದುರಿನ ರಸ್ತೆ ಹಾಗೂ ಮಾರ್ಗವಿಭಾಜಕಗಳನ್ನು ಸ್ವತ್ಛಗೊಳಿಸಲಾಯಿತು. ಶಿವು ಪುತ್ತೂರು ಹಾಗೂಯೋಗಿಶ್ ಕಾಯರ್ತಡ್ಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವಿ. ಟಿ. ರಸ್ತೆ: ಶ್ರೀಗೋಕರ್ಣ ಮಠದ ಭಕ್ತರು ಹಾಗೂ ಸ್ಥಳೀಯ ನಾಗರಿಕರು ವಿಠೊಭಾ ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲಿ ಸ್ವತ್ಛತಾ ಅಭಿಯಾನ ಹಮ್ಮಿಕೊಂಡಿದ್ದರು. ದಾಮೋದರ ಭಟ್ ಹಾಗೂ ಜಗದೀಶ್ ಶೆಣೈ ಚಾಲನೆ ನೀಡಿದ್ದು, ಕಮಲಾಕ್ಷ ಪೈ ಉಸ್ತುವಾರಿ ವಹಿಸಿದ್ದರು.
ಜಪ್ಪು: ಶ್ರೀ ಅಂಬಾಮಹೇಶ್ವರಿ ಭಜನ ಮಂಡಳಿ ಸದಸ್ಯರಿಂದ ಜಪ್ಪು ಮಾರ್ಕೆಟ್ ಬಳಿ ಸ್ವತ್ಛತಾ ಕಾರ್ಯ ನೆರವೇರಿತು. ಕಳೆದ ವಾರ ಪೋಸ್ಟರ್ ತೆಗೆದು ಸ್ವತ್ಛಗೊಳಿಸಿದ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ಅಂದಗೊಳಿಸಲಾಯಿತು. ಕಸ ಬೀಳುವ ಸ್ಥಳಗಳನ್ನು ಪುಟ್ಟ ಗಾರ್ಡನ್ ಆಗಿ ಪರಿವರ್ತಿಸಲಾಗಿದೆ. ಪುನೀತ್ ಹಾಗೂ ರೂಪೇಶ್ ಅಭಿಯಾನ ಸಂಯೋಜಿಸಿ, ಯಶಸ್ವಿಗೊಳಿಸಿದರು.
ಪಡೀಲ್: ಯೂತ್ ಸೆಂಟರ್ ಸದಸ್ಯರಿಂದ ಪಡೀಲ್ ಜಂಕ್ಷನ್‌ನಲ್ಲಿ ಸ್ವತ್ಛತಾ ಅಭಿಯಾನ ಜರಗಿತು. ರಘುವೀರ್ ಗಟ್ಟಿ ಹಾಗೂ ಮೋಹನ್ ಪಡೀಲ್ ಚಾಲನೆ ನೀಡಿದರು. ಉದಯ ಕೆ.ಪಿ. ನೇತೃತ್ವದಲ್ಲಿ ಪಡೀಲ್ ಜಂಕ್ಷನ್‌ನಿಂದ ಬಟ್ಲಗುಡ್ಡೆ ಶಾಂತಿನಗರ ವರೆಗಿನ ಪ್ರದೇಶ ಸ್ವತ್ಛ ಮಾಡ ಲಾಯಿತು. ಸ್ಥಳೀಯರು ಸಹಕಾರ ನೀಡಿದರು.
ಶಿವಬಾಗ್: ಸ್ವತ್ಛ ಶಿವಬಾಗ್ ಟೀಂ ಸದಸ್ಯರಿಂದ ಇಲ್ಲಿನ 3ನೇ ಅಡ್ಡರಸ್ತೆಯಲ್ಲಿ ಸ್ವತ್ಛತೆ ನಡೆಯಿತು. ಮೋಹನ್ ಮೆಂಡನ್ ಹಾಗೂ ರವೀಂದ್ರ ಶೆಟ್ಟಿ ಉದ್ಘಾಟಿಸಿದರು. ಶೀಲಾ ಜಯಪ್ರಕಾಶ ಹಾಗೂ ಚಂದ್ರಕಲಾ ದೀಪಕ್ ನೇತೃತ್ವದಲ್ಲಿ 3 ಮತ್ತು 4ನೇ ಕ್ರಾಸ್ ರಸ್ತೆಗಳನ್ನು ಸ್ವತ್ಛ ಮಾಡಲಾಯಿತು. ಸ್ಥಳೀಯ ವ್ಯಾಪಾರಿಗಳು ಶ್ರಮದಾನ ಮಾಡಿದರು.
ಅತ್ತಾವರ: ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಅತ್ತಾವರ ರೋಟರಿ ಕ್ಲಬ್‌ನಿಂದ ಉಮಾಮಹೇಶ್ವರಿ ದೇವಸ್ಥಾನದ ವರೆಗೆ ಸ್ವತ್ಛತಾ ಕಾರ್ಯ ನಡೆಸಲಾಯಿತು.
ಬಾಲಕೃಷ್ಣ ಶೆಟ್ಟಿ ಹಾಗೂ ರಾಜೇಶ್ ಅತ್ತಾವರ ಆರಂಭಗೊಳಿಸಿದರು. ಎರಡು ಗಂಟೆಗಳ ಕಾಲ ಸ್ವತ್ಛತೆ ಜರಧಿಗಿತು. ಅಕ್ಷಿತ್ ಅತ್ತಾವರ ಕಾರ್ಯಕ್ರಮ ಸಂಯೋಜಿಸಿದರು.
ಎಮ್ಮೆಕೆರೆ: ಶಾರದಾ ಮಹಿಳಾ ವೃಂದದ ಸದಸ್ಯರಿಂದ ಎಮ್ಮೆಕೆರೆ ಸುತ್ತಮುತ್ತ ಸ್ವತ್ಛತಾ ಕಾರ್ಯ ನಡೆಯಿತು. ನಿವೃತ್ತ ಪ್ರಾಚಾರ್ಯ ಸತೀಶ್ ಭಟ್ ಚಾಲನೆ ನೀಡಿದರು.
ಎಮ್ಮೆಕೆರೆ ಮುಖ್ಯರಸ್ತೆಯಲ್ಲಿ ಸ್ವತ್ಛತೆ ಪ್ರಾರಂಭಿಸಿ ಶ್ರೀನಿವಾಸ್ ಕಾಲೇಜಿನ ಮುಂಭಾಗದ ವರೆಗೂ ರಸ್ತೆಯ ಎರಡೂ ಬದಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಪೇಪರ್ ಹೆಕ್ಕಿ ಸ್ವತ್ಛಗೊಳಿಸಲಾಯಿತು. ಚಿತ್ರಾ ಪ್ರಭು ಅಭಿಯಾನ ಸಂಯೋಜಿಸಿದರು.