Advertisement

ಭೂತಾನ್‌ ವಿದೇಶ ಸಚಿವರ ಜತೆ ಸುಶ್ಮಾ ಮಾತುಕತೆ,ಡೋಕ್‌ಲಾಂ ಚರ್ಚೆ?

03:25 PM Aug 11, 2017 | Team Udayavani |

ಕಾಠ್ಮಂಡು : ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ಅವರಿಂದು ಭೂತಾನದ ವಿದೇಶ ಸಚಿವ ದಾಮ್‌ಶೋ ದೋರ್‌ಜೀ ಅವರನ್ನು ಭೇಟಿಯಾಗಿ ಡೋಕ್‌ಲಾಂ ಬಿಕ್ಕಟ್ಟು ಸೇರಿದಂತೆ ಹಲವಾರು ದ್ವಿಪಕ್ಷೀಯ ವಿಷಯಗಳನ್ನು ಚರ್ಚಿಸಿದರು. 

Advertisement

ಇದೇ ಸಂದರ್ಭದಲ್ಲಿ  ಉಭಯ ನಾಯಕರು ಇಲ್ಲಿ ನಡೆಯಲಿರುವ ವಿದೇಶ ಸಚಿವರ ಬಿಮ್‌ಸ್ಟೆಕ್‌ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಬಿಮ್‌ಸ್ಟೆಕ್‌ ಕೂಟದಲ್ಲಿ ಬಾಂಗ್ಲಾದೇಶ, ಭಾರತ, ಮ್ಯಾನ್‌ಮಾರ್‌, ಶ್ರೀಲಂಕಾ,ಥಾಯ್ಲಂಡ್‌, ಭೂತಾನ್‌ ಮತ್ತು ನೇಪಾಲ ದೇಶಗಳು ಇವೆ. 

ಭೂತಾನ್‌ ವಿದೇಶ ಸಚಿವರ ಜತೆಗಿನ ಮಾತುಕತೆಯಲ್ಲಿ ಸುಶ್ಮಾ ಸ್ವರಾಜ್‌ ಏನೆಲ್ಲ ವಿಷಯಗಳನ್ನು ಚರ್ಚಿಸಿದರು ಎಂಬದು ಗೊತ್ತಾಗಿಲ್ಲ. ಡೋಕ್‌ಲಾಂ ಗಡಿ ಬಿಕ್ಕಟ್ಟು ಕಳೆದ ಜೂನ್‌ 16ರಿಂದ ಆರಂಭಗೊಂಡಿದ್ದು ಉಭಯ ದೇಶಗಳ ಸೇನೆಗಳ ಮುಖಾಮುಖೀ ಅಲ್ಲಿ ಮುಂದುವರಿದಿದೆ. 

Advertisement

Udayavani is now on Telegram. Click here to join our channel and stay updated with the latest news.

Next