Advertisement

ಗಾಯದ ಸಮಸ್ಯೆ: ಸ್ವಪ್ನಾ ನಿವೃತ್ತಿ ಯೋಚನೆ

11:53 PM Sep 17, 2021 | Team Udayavani |

ವಾರಂಗಲ್‌ : ಸತತವಾಗಿ ಕಾಡುತ್ತಿರುವ ಬೆನ್ನುನೋವು ಹಾಗೂ ಖನ್ನತೆಯಿಂದಾಗಿ ಏಶ್ಯನ್‌ ಗೇಮ್ಸ್‌ ಬಂಗಾರದ ಪದಕ ವಿಜೇತ ಆ್ಯತ್ಲೀಟ್‌ ಸ್ವಪ್ನಾ ಬರ್ಮನ್‌ ನಿವೃತ್ತಿಗೆ ಮುಂದಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ಹೇಳಿದ್ದಾರೆ.

Advertisement

60ನೇ ನ್ಯಾಶನಲ್‌ ಓಪನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಹೈಜಂಪ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಸ್ವಪ್ನಾ ತಮ್ಮ ಸಂಕಟವನ್ನು ಹೇಳಿಕೊಂಡರು.

“ನನ್ನ ದೇಹ ಕ್ರೀಡೆಗೆ ಸ್ಪಂದಿಸುತ್ತಿಲ್ಲ. ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದೇನೆ. ನಿವೃತ್ತಿಯೇ ನನ್ನ ಮುಂದಿರುವ ಮಾರ್ಗ ಎಂದು ದಿಟ್ಟ ನಿರ್ಧಾರ ಮಾಡಿದ್ದೇನೆ. ಕೋಲ್ಕತಾಕ್ಕೆ ಹೋದ ಬಳಿಕ ನಿರ್ಧಾರವನ್ನು ಪ್ರಕಟಿಸುತ್ತೇನೆ’ ಎಂದು ಸ್ವಪ್ನಾ ಹೇಳಿದರು.

ಇದನ್ನೂ ಓದಿ :ಕೌಟುಂಬಿಕ ವಿಚಾರ : ಮಂಡ್ಯ ಮೂಲದ ಒಂದೇ ಕುಟುಂಬದ ಐವರು ಸಾವು

Advertisement

Udayavani is now on Telegram. Click here to join our channel and stay updated with the latest news.

Next