Advertisement
ಕುಡಿಯಲು ನೀರಿಲ್ಲದೆ ಪರದಾಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಕೃಷಿಗೆ ನೀರು ಹೊಂದಿಸುವುದು ದೊಡ್ಡ ಸವಾಲು. ಬೆಳೆ ಉಳಿಸಿಕೊಳ್ಳಲು ಕಳೆದ ಎರಡು ತಿಂಗಳಿನಿಂದ ಬೇರೆಯವರ ತೋಟಗಳಿಂದ 6 ಬೋರ್‌ವೆಲ್ ಹಾಗೂ ಎರಡು ಬಾವಿಗಳಿಂದ ಸುಮಾರು ಒಂದರಿಂದ ಮೂರು ಕಿ.ಮೀ. ದೂರದಿಂದ ಹೆಚ್‌ಪಿ ಮೋಟಾರ್ ಮೂಲಕ ಕನಿಷ್ಟ ಒಂದೊಂದು ಬೋರ್‌ವೆಲ್‌ನಿಂದ ನಿತ್ಯ ಅರ್ಧ ಗಂಟೆ ನೀರು ಹರಿಸಿ ಮಠಕ್ಕೆ ಸಂಬಂಧಿಸಿದ ನಾಲ್ಕು ಎಕರೆ ಜಮೀನಿನಲ್ಲಿ ನಿತ್ಯ 30ರಿಂದ 40 ಗಿಡಗಳಿಗೆ ನೀರು ಹರಿಸಿ ನಿಂಬೆ ಫಸಲನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಕಳೆದ ವರ್ಷದ ಹಿಂದೆ ತಮ್ಮ ಮಠದ ಹಿಂದೆ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ಸಾವಿರಾರು ಜನರಿಗೆ ಸಾವಿರಾರು ಸಸಿಗಳನ್ನು ಕೊಡಿಸಿ ಅವರಿಂದ “ಹಸಿರು ಪ್ರೀತಿಸುವ ಸ್ವಾಮಿಗಳು’ ಎಂದು ಕರೆಸಿಕೊಂಡಿದ್ದಾರೆ.
Related Articles
Advertisement
ಅಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಜಿಗಿ ಹಾಗೂ ಕ್ಯಾರ ರೋಗ ಬಂದಲ್ಲಿ ಮಾತ್ರ ಇದಕ್ಕೆ ಕ್ಲೋರೋಪೆರಿಪಾಸ್ 20 ಲೀ. ನೀರಿನಲ್ಲಿ 30 ಗ್ರಾಂ ಸಿಂಪಡಿಸುತ್ತೇವೆ. ನಂತರ 20 ಲೀ ನೀರಿನಲ್ಲಿ 50 ಎಂ.ಎಲ್ ಬೇವಿನ ಎಣ್ಣೆಯನ್ನು ಸಿಂಪಡಿಸಲಾಗುವುದು. ವಾರದಲ್ಲಿ ಎರಡು ಬಾರಿ 10 ಬ್ಯಾಗ ನಿಂಬೆಯನ್ನು ಹರಿಸಲಾಗುವುದು. ಒಂದು ಬ್ಯಾಗ್ ಅಂದರೆ ಸುಮಾರು 1100 ನಿಂಬೆಗಳಿರುತ್ತವೆ. ಹೀಗಾಗಿ ವಾರಕ್ಕೊಮ್ಮೆ 20 ಬ್ಯಾಗಗಳನ್ನು ಹುಬ್ಬಳ್ಳಿ ಮಾರುಕಟ್ಟೆಗೆ ಕಳುಹಿಸಲಾಗುವುದು. ಈಗಾಗಲೇ ಕಳೆದ 9 ವರ್ಷಗಳಿಂದ ಪ್ರತಿ ವರ್ಷ 8 ರಿಂದ 10 ಲಕ್ಷರೂಗಳ ಆದಾಯ ಎಲ್ಲ ಖರ್ಚು ತೆಗೆದು ಬಂದಿದೆ. ಕಳೆದ ವರ್ಷ 14 ಲಕ್ಷ ರೂಗಳ ಆದಾಯ ನಿಂಬೆ ಫಸಲಿನಿಂದ ಸಿಕ್ಕಿದೆ. ಆದರೆ ಈ ಬಾರಿ ನೀರಿನ ಹಾಗೂ ಮಾರುಕಟ್ಟೆ ಸಮಸ್ಯೆಯಿಂದ 3 ಲಕ್ಷ ರೂಗಳ ಆದಾಯ ಮಾತ್ರ ಸಿಕ್ಕಿದೆ ಎನ್ನುತ್ತಾರೆ ಸ್ವಾಮೀಜಿ.
ಇಂದಿನ ಯುವಕರು ಕೇವಲ ಇಂಜಿನಿಯರಿಂಗ್, ವೈದ್ಯಕೀಯ ರಂಗಕ್ಕೆ ತೆರಳದೆ ನಿಷ್ಟೆಯಿಂದ ಕೃಷಿ ಕ್ಷೇತ್ರಕ್ಕೆ ಧಾವಿಸಿದಲ್ಲಿ ಕೃಷಿ ರಂಗವೂ ಕೂಡ ಇವರನ್ನು ಕೈ ಬಿಡದು ಎಂದು ಹೇಳುವ ಇವರು 4 ಎಕರೆ ಭೂಮಿಯಲ್ಲಿ ಖರ್ಚು ತೆಗೆದು ವರುಷಕ್ಕೆ ಹತ್ತರಿಂದ ಹದಿನೈದು ಲಕ್ಷ ರೂ.ಗಳ ಆದಾಯವನ್ನು ನಿಂಬೆ ಬೇಸಾಯದಿಂದ ಪಡೆಯಬಹುದು.
ಸ್ವಾಮೀಜಿಗಳು ಮಠದಲ್ಲಿದ್ದರೆ ತೋಟಕ್ಕೆ ಬಂದು ಗಿಡಗಳನ್ನು ವೀಕ್ಷಣೆ ಮಾಡುತ್ತಾ, ನಿಂಬೆ ಗಿಡಗಳ ಬೇರು ಒಪನ್ ಆದರೆ ಸಿಡಿ ಬರುವ ಹಿನ್ನಲೆಯಲ್ಲಿ ಎರೆ ಮಣ್ಣು ಹಾಕಿ ಮುಚ್ಚಬೇಕು ಎಂದು ಹೇಳುವ ಇವರಿಗೆ ಆ ಕೆಲಸದಲ್ಲಿ ಈರಯ್ಯ, ಮಲ್ಲಯ್ಯ ಹಾಗೂ ಶಿವಶಂಕರ ಸಾಥ್ ನೀಡುತ್ತಾರೆ ಎನ್ನುತ್ತಾರೆ ಸ್ವಾಮೀಜಿಗಳು. ಹೆಚ್ಚಿನ ಮಾಹಿತಿಗೆ;9591949105.
– ಗುರುರಾಜ.ಬ.ಕನ್ನೂರ