Advertisement

ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

08:06 PM Jan 13, 2021 | Team Udayavani |

ಬಳ್ಳಾರಿ: ತಾಲೂಕಿನ ಸಂಜೀವರಾಯನಕೋಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಆಚರಿಸಲಾಯಿತು.

Advertisement

ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಅವರು, 1893ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಭಾರತದ ಉತ್ಕೃಷ್ಟ ಹಿಂದೂ ಸಂಸ್ಕೃತಿಯನ್ನು ತಮ್ಮ ಭಾಷಣದ ಮೂಲಕ ವಿಶ್ವಕ್ಕೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು ಎಂದು ಬಣ್ಣಿಸಿದರು.

ಇದನ್ನೂ ಓದಿ: ಎಲ್ಲರೂ ಶಿಷ್ಟಮಾರ್ಗದಲ್ಲಿ ಸಾಗೋಣ

ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವ ಸಮೂಹವನ್ನು ಬಡಿದೆಬ್ಬಿಸಿದವರು ಎಂದರು. ಶಾಲೆಯ ಬಡ್ತಿ ಮುಖ್ಯಗುರು ಕೃಷ್ಣವೇಣಿ ಅಧ್ಯಕ್ಷತೆ ವಹಿಸಿದ್ದರು. ಹಲಕುಂದಿ ಗ್ರಾಪಂ ಪಿಡಿಓ ಸುಮಲತ, ಮಿಂಚೇರಿ ಶಾಲೆಯ ಮುಖ್ಯಗುರು ಓಬಳೇಶಪ್ಪ, ಬಸವಪ್ರಕಾಶ, ಶಿಕ್ಷಕರ ಸಂಘದ ಖಜಾಂಚಿ ಮೃತ್ಯುಂಜಯ, ಸಿಆರ್‌ಪಿ  , ತಿಮ್ಮಾರೆಡ್ಡಿ, ಕುಬೇರ  ಹಾಗೂ ಶಾಲಾ ಶಿಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next