Advertisement
ಈಗ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು ಎಬ್ಬಿಸಿರುವ ಹಿಂದೂ ಪದದ ವಿವಾದ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಈ ಪದಕ್ಕಾಗಿ ಹುಡುಕಾಟ ಆರಂಭವಾಗಿದೆ. ಅಲ್ಲದೆ, 2017ರಲ್ಲಿ ಪುರಿಯ ಶಂಕರಾಚಾರ್ಯ ಸ್ವಾಮೀಜಿಗಳು ನೀಡಿದ್ದ ಭಾಷಣವೊಂದರ ತುಣುಕು ಈಗ ಮುನ್ನೆಲೆಗೆ ಬಂದಿದೆ. ಇತ್ತೀಚೆಗಷ್ಟೇ ಸತೀಶ್ ಜಾರಕಿಹೊಳಿ ಅವರು ಹಿಂದೂ ಪದ ಭಾರತದ್ದೇ ಅಲ್ಲ. ಇದು ಪರ್ಷಿಯನ್ ಮೂಲದ ಪದ. ಇದರ ಅರ್ಥವೂ ಪರ್ಷಿಯನ್ ಭಾಷೆಯಲ್ಲಿ ಅಶ್ಲೀಲವಾಗಿದೆ ಎಂದಿದ್ದರು.
Related Articles
Advertisement
ರಾಮ್‌ಕೋಶದಲ್ಲಿ ಬಳಕೆ :
ರಾಮ್‌ಕೋಶ ಮತ್ತು ಪಾರಿಜಾತರಣ್ ಎಂಬ ನಾಟಕದಲ್ಲಿ ಹಿಂದೂ ಪದ ಬಳಕೆ ಮಾಡಲಾಗಿದೆ. ಮಾಧವ ದಿಗ್ವಿಜಯದಲ್ಲಿ ಹಿಂದೂಗಳ ಸಂಬಂಧ ಬಹಳಷ್ಟು ಅರ್ಥಗಳಿವೆ. ಅಲ್ಲದೆ ಯಾವೊಬ್ಬ ವ್ಯಕ್ತಿ ವೇದದ ಬೀಜಾಕ್ಷರ ಮಂತ್ರಗಳಾದ ಓಂ ಅನ್ನು ಬಳಕೆ ಮಾಡುತ್ತಾನೆಯೋ, ಯಾರಿಗೆ ಪುನರ್ಜನ್ಮದ ಮೇಲೆ ನಂಬಿಕೆ ಇರುತ್ತದೆಯೋ, ಗೋವನ್ನು ಪೂಜಿಸುವಾತ, ಗಂಗೆಯನ್ನು ಪೂಜೆ ಮಾಡುವಾತ, ಭಾರತೀಯ ಸಂಪ್ರದಾಯದ ಪ್ರಕಾರ ವೇದಿಕ್ ಋಷಿಗಳನ್ನು ತನ್ನ ಗುರುವೆಂದು ನಂಬುವ, ಹಿಂಸಾತ್ಮಕ ಪ್ರಾಣಿಗಳನ್ನು ಕೊಲ್ಲುವ ಸಾಮರ್ಥವಿರುವಂಥ, ಕ್ಷತ್ರಿಯ ಧರ್ಮದ ಉದ್ಭಾಷಕ್ ಆಗಿರುವವನೇ ನಿಜವಾದ ಹಿಂದು ಎಂದು ಶಂಕರಾಚಾರ್ಯ ಸ್ವಾಮೀಜಿಗಳು ಹೇಳಿದ್ದಾರೆ.
ಆದರೂ, ಕೆಲವು ಇತಿಹಾಸಕಾರರ ಪ್ರಕಾರ ಹಿಂದೂ ಎಂಬ ಪದವನ್ನು ಬಳಸಲು ಆರಂಭಿಸಿದ್ದು ಪರ್ಷಿಯನ್ನರು. ಸಿಂಧು ಎಂಬ ಪದ ಹಿಂದೂವಾಗಿ ಬದಲಾಯಿತು ಎಂದು ಹೇಳುತ್ತಾರೆ. ತಮಿಳುನಾಡಿನ ರಾಜ್ಯ ಶಿಕ್ಷಣದಲ್ಲೂ ಹಿಂದೂ ಪದ ಪರ್ಷಿಯಾದಿಂದ ಬಂದಿದ್ದು ಎಂದು ಉಲ್ಲೇಖೀಸಲಾಗಿದೆ.