Advertisement

ಸ್ವದೇಶಿ ಎಂದರೆ ಎಲ್ಲ ವಿದೇಶಿ ಉತ್ಪನ್ನಗಳ ಬಹಿಷ್ಕಾರವಲ್ಲ; ಭಾಗವತ್‌ ಸ್ಪಷ್ಟನೆ

12:59 AM Aug 14, 2020 | mahesh |

ಹೊಸದಿಲ್ಲಿ: ಸ್ವದೇಶಿ ಎಂದರೆ ಪ್ರತಿಯೊಂದು ವಿದೇಶಿ ಉತ್ಪನ್ನವನ್ನು ಬಹಿಷ್ಕರಿಸುವುದಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಜೀ ಭಾಗವತ್‌ ಸ್ಪಷ್ಟಪಡಿಸಿದ್ದಾರೆ. ಎಲ್ಲ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದ ರಲ್ಲಿ ಅರ್ಥವಿಲ್ಲ. ದೇಶದಲ್ಲಿ ಸಾಂಪ್ರದಾಯಿಕ ಕೊರತೆ ಇರುವ, ಸ್ಥಳೀಯವಾಗಿ ಲಭ್ಯ ವಿಲ್ಲದ ತಂತ್ರ ಜ್ಞಾನಗಳು ಅಥವಾ ವಸ್ತುಗ‌ಳನ್ನು ಮಾತ್ರ ಆಮದು ಮಾಡಿಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ವರ್ಚುವಲ್‌ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಾಗತೀಕರಣವು ಅಪೇಕ್ಷಿತ ಫ‌ಲಿತಾಂಶ ನೀಡಿಲ್ಲ. ಒಂದೇ ಆರ್ಥಿಕ ನೀತಿ ಜಗತ್ತಿನ ಎಲ್ಲ ದೇಶಗಳಿಗೆ ಅನ್ವಯವಾಗಲು ಸಾಧ್ಯವಿಲ್ಲ. ಇಲ್ಲಿಯ ತನಕ ನಮ್ಮ ಉತ್ಪನ್ನ ಗಳು, ತಂತ್ರಜ್ಞಾನಗಳನ್ನು ಕಡೆಗಣಿಸಲಾಗಿತ್ತು. ದೇಶೀಯ ವಸ್ತುಗಳನ್ನು ಕೀಳಾಗಿ ಕಾಣುವ ಮನಃಸ್ಥಿತಿ ಮೊದಲು ಬದಲಾಗಬೇಕು ಎಂದು ಅವರು ತಿಳಿ ಹೇಳಿದರು.

ಜಗತ್ತೇ ಒಂದು ಕುಟುಂಬ: ಕೊರೊನೋತ್ತರ ಜಗತ್ತಿನಲ್ಲಿ ಪರಸ್ಪರ ಸಹಕಾರದ ಮೂಲಕ ಸ್ವಾವ ಲಂಬಿ ರಾಷ್ಟ್ರಗಳು ಒಂದು ಕುಟುಂಬದಂತೆ ಮುನ್ನಡೆ ಯಬೇಕೇ ಹೊರತು, ಮಾರುಕಟ್ಟೆಯಂತೆ ನೋಡ ಬಾ ರದು. ಹಾಗಾಗಿ ವಿದೇಶಿ ವಸ್ತುಗಳಲ್ಲಿ ಕೆಲವು ಷರತ್ತುಗಳ ಅನ್ವಯ ನಮಗೆ ಹೊಂದಿ ಕೊಳ್ಳುವ, ನಮಗೆ ಒಳಿತಾಗುವ ವಸ್ತುಗಳನ್ನಷ್ಟೇ ಖರೀದಿಸೋಣ ಎಂದು ಕರೆ ನೀಡಿದರು.

ಜನರನ್ನು ಸ್ವಾವಲಂಬಿ ಆಗಿಸುವ ಮೂಲಕ ಭಾರತ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ. ಇತ್ತೀಚೆಗೆ ಘೋಷಿಸಿದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಜನರ ಸಾಮರ್ಥ್ಯವನ್ನು ಮತ್ತು ಸಾಂಪ್ರ ದಾಯಿಕ ಜಾಣ್ಮೆಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next