Advertisement
ಫಿನಾಲೆಗೆ ದಿನಗಳು ಸಮೀಪವಾಗುತ್ತಿದ್ದಂತೆ ದೊಡ್ಮನೆ ಆಟ ರೋಚಕವಾಗಿ ಸಾಗುತ್ತಿದೆ. ಗುಂಪುಗಾರಿಕೆಯಲ್ಲಿದ್ದ ಸ್ನೇಹಿತರು ಆಟದ ವಿಚಾರದಲ್ಲಿ ಬೇರ್ಪಟ್ಟು ವೈಯಕ್ತಿಕವಾಗಿ ಆಡಲು ಮುಂದಾಗಿದ್ದಾರೆ.
Related Articles
Advertisement
ಐಶ್ವರ್ಯಾ ಅವರು ಚೈತ್ರಾ ಅವರ ಹೆಸರು ಹೇಳಿದ್ದಾರೆ. ನಿಮ್ಮ ಆಟಗಳಿಗೆ ನಾನು ಬಲಿಪಶು ಆದೆ ಈ ವಾರ ಎಂದಿದ್ದು, ಇದಕ್ಕೆ ಚೈತ್ರಾ ಅವರು, ಟಾರ್ಗೆಟ್ ನಾಮಿನೇಷನ್ ಎನ್ನುವ ಮಾತು ಇದೇ ಐಶ್ವರ್ಯಾ ಅವರ ಬಾಯಿಯಿಂದಲೇ ಬಂದಿದ್ದು ಎಂದಿದ್ದಾರೆ. ಐಶ್ವರ್ಯಾ ಅವರು, ಹೇ ತುಂಬಾ ಚೆನ್ನಾಗಿ ಸುಳ್ಳು ಹೇಳ್ತಾನೇ ಇದ್ದೀರಾ. ಬಾಯಿ ಮುಚ್ಚೆ ಸಾಕು ಎಂದು ಗರಂ ಆಗಿ ಹೇಳಿದ್ದಾರೆ. ಇತ್ತ ಚೈತ್ರಾ ಅವರು ನೀನ್ಯಾರು ನನಗೆ ಹೇ ಎನ್ನೋಕೆ. ಬಾಯಿ ಮುಚ್ಚು ಎಲ್ಲ ಹೇಳಿದ್ರೆ ಸುಮ್ಮನೇ ಇರಲ್ಲ. ಮುಚ್ಚುಕೊಂಡು ಇರು ನೀನು ಎಂದು ಚೈತ್ರಾ ಮೇಜಿಗೆ ಕೈ ಬಡಿದಿದ್ದಾರೆ. ಪರಿಣಾಮ ಅವರ ಬಳೆ ಒಡೆದು ಹೋಗಿದೆ. ಚೈತ್ರಾ ಅವರ ಕೋಪ ನೋಡಿ ಮನೆಮಂದಿ ಶಾಕ್ ಆಗಿದ್ದಾರೆ.