ಚಿಕ್ಕಬಳ್ಳಾಪುರ: ಪರಿಸರ ಸಂರಕ್ಷಣೆ ಪ್ರಮುಖ ಗುರಿಯೊಂದಿಗೆ ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ನನ್ನ ಜೀವನ, ನನ್ನ ಸ್ವಚ್ಛ ನಗರ ಎಂಬ ಅಭಿಯಾನವನ್ನು ಮೇ 25 ರಿಂದ ಜೂ.5 ವರೆಗೂ ಜಿಲ್ಲಾದ್ಯಂತ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಮುಂದಾಗಿದೆ.
ಸಾರ್ವಜನಿಕರಲ್ಲಿ ಒಣ ತ್ಯಾಜ್ಯವನ್ನು ಕಡಿಮೆಗೊಳಿಸುವುದು, ಮರು ಬಳಕೆ ಹಾಗೂ ಪುನರ್ ಬಳಕೆ ಮಾಡುವುದನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಜಿಲ್ಲೆಯ ಪ್ರತಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಿಮೆಗೊಳಿಸುವುದು, ಮರು ಬಳಕೆ, ಪುನರ್ ಕೇಂದ್ರಗಳನ್ನು ತೆರೆದು ಸಾರ್ವಜನಿಕರಲ್ಲಿ ತ್ಯಾಜ್ಯದ ಬಗ್ಗೆ ಅರಿವು ಮೂಡಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶಾ ಮುಂದಾಗಿದೆ.
ಎಷ್ಟು ಕೇಂದ್ರಗಳುತೆರೆಯಬೇಕು: ನವೀಕರಿಸಿ ಮರು ಬಳಸ ಬಹುದಾ ದತಂಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಹಾಗೂ ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿ ಕೊಳ್ಳುವ ಮೂಲಕ ಪರಿಸರ ಸಂರಕ್ಷಿವುದು ಲೈಪ್ ಮಿಷನ್ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಪ್ರತಿ ನಗರಸಭೆ ವ್ಯಾಪ್ತಿಯಲ್ಲಿ 5 ರಿಂದ 7 ಕೇಂದ್ರಗಳು ಹಾಗೂ ಪುರಸಭೆ ವ್ಯಾಪ್ತಿಯಲ್ಲಿ 2 ರಿಂದ 3 ಕೇಂದ್ರಗಳು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ 1 ಕೇಂದ್ರವನ್ನು ತೆರೆಯಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೇಂದ್ರಗಳ ಮೂಲಕ ಸಂಗ್ರಹವಾಗುವ ತಾಜ್ಯ ವಸ್ತುಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ವಿಶೇಷವಾಗಿ ಹಳೆ ಪುಸ್ತಕ, ದಿನಪತ್ರಗಳನ್ನು ಗ್ರಂಥಾಲಯಕ್ಕೆ ಇ ತ್ಯಾಜ್ಯವನ್ನು ಎಲೆಕ್ಟ್ರಾನಿಕ್ ಏಜೆನ್ಸಿಗೆ, ಮಕ್ಕಳ ಆಟಿಕೆಗಳನ್ನು ಶಿಶು ಪಾಲನಾ ಮಂದಿರಗಳಿಗೆ ನೀಡುವಂತೆ ಸೂಚಿಸಲಾಗಿದೆ.
ಜಿಲ್ಲಾ ಕೇಂದ್ರದಲ್ಲಿ ಎಲ್ಲೆಲ್ಲೆ ಕೇಂದ್ರ ಸ್ಥಾಪನೆ?: ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ನಗರಸಭಾ ಕಾರ್ಯಾಲಯ ಆವರಣ, ಗಂಗಮ್ಮ ಗುಡಿ ಬೀದಿ (ವಿಶ್ವಕರ್ಮ ಜ್ಯುವೆಲರ್ ಮುಂಭಾಗ) ವಾಪಸಂದ್ರ ರೇಷ್ಮೆ ಮಾರುಕಟ್ಟೆ ರಸ್ತೆ, ದರ್ಗಾ ಮೊಹ ಲ್ಲಾ ಹತ್ತಿರ, ಹಳೇ ಗೋಕುಲ್ ಸ್ಕೂಲ್ ಹತ್ತಿರ, 12ನೇ ವಾರ್ಡ್ ಕಂದಕ, ಸಂತೆ ಮಾರುಕಟ್ಟೆ ಮುಂಭಾಗದಲ್ಲಿ ಕೇಂದ್ರಗಳನ್ನು ಮೇ 25ರಿಂದ ಜೂನ್ 05 ರವರೆಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ತೆರೆಯಲಾಗಿರುತ್ತದೆ. ಮಾಹಿತಿಗೆ ನಗರಸಭೆ ನೋಡಲ್ ಅಧಿಕಾರಿ ವರ ಮೊಬೈಲ್ ಸಂಖ್ಯೆ:9972355666 ಗೆ ಸಂಪರ್ಕಿಸಬಹುದೆಂದು ನಗರಸಭೆ ಪೌರಾಯುಕ್ತರಾ ಪಂಪಶ್ರೀ ತಿಳಿಸಿದ್ದಾರೆ.
ಕೇಂದ್ರಗಳಿಗೆ ನೀಡಬೇಕಾದ ತ್ಯಾಜ್ಯ ವಿವರ: ಮಕ್ಕಳ ಆಟಿಕೆ ವಸ್ತುಗಳು, ಪ್ರತಿಕೆ, ಮಾಸ ಪತ್ರಿಕೆಗಳು, ಹಳೆಯ ಪುಸ್ತಕ ಗಳು-ಸ್ಟೇಷನರಿ ವಸ್ತುಗಳು (ಉದಾ: ಪರಿಸರ ಸ್ನೇಹಿ ಪೆನ್ಸಿಲ್, ಮರು ಬಳಕೆಯ ಪುಸ್ತಕ), ಬಟ್ಟೆ-ಹಳೆಯ ಜೀನ್ಸ್, ಸಮವಸ್ತ್ರ ಮತ್ತು ಸೀರೆಗಳು) ಮರುಬಳಕೆ ಮಾಡಬಹುದಾದ ಬಟ್ಟೆಗಳು- ಕಪ್ಪು ಚಿನ್ನ (ಸಾವಯವ ಗೊಬ್ಬರ), ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು- ಪ್ರತಿ 250 ಗ್ರಾಂ ಪ್ಲಾಸ್ಟಿಕ್ ಚೀಲಗಳಿಗೆ 1 ಕೆ.ಜಿ. ಸಾಮರ್ಥ್ಯದ ಬಟ್ಟೆಯ ಚೀಲ, ಎಲೆಕ್ಟ್ರಾನಿಕ್ ವಸ್ತುಗಳು-ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು.