Advertisement
ನನ್ಯ ಶಾಲೆಯಲ್ಲಿ ಸ್ವಚ್ಛತೆಯುವಕ ಮಂಡಲದ ನೂತನ ಅಧ್ಯಕ್ಷ ಗಂಗಾಧರ ನಾಯ್ಕ ಸ್ವಚ್ಛತಾ ಕಾರ್ಯ ಉದ್ಘಾಟಿಸಿ, ಸ್ವಚ್ಛ ಭಾರತ್ ಇಂಟರ್ನ್ ಶಿಪ್ ಯೋಜನೆಯ ಮೊದಲನೇ ಕಾರ್ಯಕ್ರಮವಾಗಿ ತುಡರ್ ಯುವಕ ಮಂಡಲವು ಮಾಟ್ನೂರು ಗ್ರಾಮದ ನನ್ಯ ಸರಕಾರಿ ಹಿ.ಪ್ರಾ ಶಾಲೆಯ ವಠಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದೆ. ಮೇ 29ರಂದು ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ಬಂದ ಮೊದಲ ದಿನವೇ ಶಾಲೆಯ ವಾತಾವರಣ ಖುಷಿ ಕೊಡುವಂತಿರಬೇಕು, ಶುಚಿಯಾಗಿರಬೇಕು, ಕಲಿಕೆಗೆ ಪೂರಕವಾಗಿರಬೇಕು ಎನ್ನುವ ನಿಟ್ಟಿನಲ್ಲಿ ಮುಂಚಿತವಾಗಿಯೇ ಶಾಲಾ ವಠಾರ, ಕೊಠಡಿಗಳು, ಶೌಚಾಲಯಗಳನ್ನು ಸ್ವತ್ಛಗೊಳಿಸಿ, ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸಿ, ಮಕ್ಕಳ ಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು.
3 ತಿಂಗಳಲ್ಲಿ 100 ಗಂಟೆಯ ಕಾರ್ಯಕ್ರಮ
ಮೇ 1ರಿಂದ ಕಾವು ನನ್ಯ ತುಡರ್ ಯುವಕ ಮಂಡಲ ಕಾರ್ಯಕ್ರಮ ಆರಂಭಿಸಿದ್ದು, ಜುಲೈ 31ರ ವರೆಗೆ ನಡೆಯಲಿದೆ. ಒಟ್ಟು 3 ತಿಂಗಳಲ್ಲಿ 100 ಗಂಟೆಗಳ ಕಾರ್ಯಕ್ರಮ ನಡೆಸಬೇಕಿದೆ. ಆಯಾ ಕಾರ್ಯಕ್ರಮಗಳ ಫೋಟೋ, ವರದಿ, ಪೇಪರ್ ಕಟ್ಟಿಂಗ್, ವೀಡಿಯೋ ಕ್ಲಿಪಿಂಗ್‌ಗಳನ್ನು ಆನ್‌ಲೈನ್ ಮೂಲಕವೇ ಲಾಗ್ ಇನ್ ಆಗಿ ಆಯಾ ದಿನದ ಪೂರ್ಣ ವರದಿಯನ್ನು ಇಲಾಖೆಗೆ ನೀಡಬೇಕಿದೆ.
Related Articles
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಪ್ರೋತ್ಸಾಹಕವಾಗಿ ನೆಹರೂ ಯುವ ಕೇಂದ್ರದ ಮೂಲಕ ಹಲವು ಬಹುಮಾನಗಳನ್ನು ಘೋಷಿಸಿದೆ. ಉತ್ತಮ ಕೆಲಸ ನಿರ್ವಹಿಸಿದ ಯುವ ಸಂಸ್ಥೆಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ.
Advertisement
ಏನಿದು ಯೋಜನೆ?ನೆಹರೂ ಯುವ ಕೇಂದ್ರದಲ್ಲಿ ನೋಂದಣಿಯಾಗಿರುವ ಯುವ ಸಂಸ್ಥೆಗಳ ಸದಸ್ಯರು ಈ ಯೋಜನೆಗೆ ಕೈಜೋಡಿಸಬಹುದು. ಗ್ರಾಮೀಣ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸುವುದು, ಆರೋಗ್ಯ ಜಾಗೃತಿ, ಸ್ವಚ್ಛತೆ ಬಗ್ಗೆ ಬೀದಿನಾಟಕ, ರ್ಯಾಲಿ, ಸಾಂಸ್ಕೃತಿಕ ಕಾರ್ಯಕ್ರಮ, ನೈರ್ಮಲ್ಯ ಪದ್ಧತಿ ಬಗ್ಗೆ ಮನೆ ಮನೆಗೆ ತೆರಳಿ ಜಾಗೃತಿ, ಘನ ತ್ಯಾಜ್ಯ ನಿರ್ವಹಣೆ, ಬಯಲು ಮಲ ವಿಸರ್ಜನೆ ನಿಲ್ಲಿಸಲು ನಿಗಾ ಸಮಿತಿ ರಚನೆ, ಶೌಚಾಲಯ ನಿರ್ಮಾಣ ಇತ್ಯಾದಿ ಕಾರ್ಯಕ್ರಮ ನಡೆಸಬೇಕಿದೆ.