ಕಲಬುರಗಿ: ಕೋವಿಡ್ ಮತ್ತು ಲಾಕ್ ಡೌನ್‌ನಿಂದ ಸಂಷಕ್ಟಕ್ಕೆ ಸಿಲುಕಿರುವ ಬೀದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯಡಿ ನೀಡುವ ಸಾಲದ ನೆರವನ್ನು ವ್ಯಾಪಾರಿಗಳ ಬಳಿಗೆ ತಲುಪಿಸುವತ್ತ ಮಹಾನಗರ ಪಾಲಿಕೆ ಹೆಜ್ಜೆ ಇಟ್ಟಿದೆ.
ಆರ್ಥಿಕ ಸಂಕಷ್ಟದಿಂದ ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳನ್ನು ಪಾರು ಮಾಡಲು ಪಿಎಂ ಸ್ವನಿಧಿ ಯೋಜನೆಯಡಿ ಕಿರು ಸಾಲು ಯೋಜನೆ ಜಾರಿಗೆ ತರಲಾಗಿದೆ. ಎಲ್ಲ ನಗರಗಳ ವ್ಯಾಪ್ತಿಯಲ್ಲಿ ಈ ಯೋಜನೆಯಡಿ ಪ್ರತಿ ಬೀದಿ ವ್ಯಾಪಾರಿ ಕುಟುಂಬಕ್ಕೆ 10 ಸಾವಿರ ರೂ. ಸಾಲ ನೀಡಲಾಗುತ್ತಿದೆ. ಇದನ್ನು ಮಹಾನಗರದ ಎಲ್ಲ ವ್ಯಾಪಾರಿಗಳಿಗೆ ತಲುಪಿಸುವ ಮೂಲಕ ಪರಿಣಾಮಕಾರಿ ಅನುಷ್ಠಾನ ಮಾಡಲು ಪಾಲಿಕೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಮಹಾನಗರ ವ್ಯಾಪ್ತಿಯಲ್ಲಿ ಪಾಲಿಕೆ ವತಿಯಿಂದ ಈಗಾಗಲೇ 19 ಸೇವಾ ವಿಶೇಷ ಕೇಂದ್ರಗಳನ್ನು ತೆರೆಯಲಾಗಿದೆ. ಪಾಲಿಕೆ ಕಚೇರಿಯೊಳಗೆ ಎಂಟುಕೌಂಟರ್‌ಗಳು ಕಾರ್ಯ ನಿರ್ವಸುತ್ತಿವೆ. ವ್ಯಾಪಾರಿಗಳ ಅಲೆದಾಟ ತಪ್ಪಿಸಲುಅವರಿಗೆ ಅನುಕೂಲವಾಗುವ ಸ್ಥಳದಲ್ಲೇ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸೂಪರ್ ಮಾರುಕಟ್ಟೆ ಪ್ರದೇಶದ ದತ್ತ ಮಂದಿರ, ಚಪ್ಪಲ್ ಬಜಾರ್‌ನ ಕಸ್ತೂರಿಬಾ ಬಾಲಿಕಾ ವಾಸತಿ ನಿಲಯ, ಸೇಡಂ ರಸ್ತೆಯ ಸ್ಮಶಾನ ಹನುಮಾನ ಮಂದಿರ, ಜೇವರ್ಗಿ ರಸ್ತೆಯ ರಾಮ ಮಂದಿರ, ವಿದ್ಯಾ ನಗರದ ಹನುಮಾನ ದೇವಾಲಯ ಹಾಗೂ ಶಹಾಬಜಾರ್‌ನ ಹನುಮಾನ ದೇವಾಲಯದ ಹತ್ತಿರವೂಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಪಾಲಿಕೆ ಶಾಖಾ ಮುಖ್ಯಸ್ಥ ಶರಣಯ್ಯ ಹಿರೇಮಠ ತಿಳಿಸಿದರು.
ಗುರುತಿನ ಚೀಟಿ ವಿತರಣೆ: ಸಾಲ ಸೌಲಭ್ಯದ ಲಾಭ ಪಡೆಯಲು ಪಾಲಿಕೆಯಿಂದ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ. ಬಹುತೇಕ ಬೀದಿ ವ್ಯಾಪಾರಿಗಳು ಗುರುತಿನ ಚೀಟಿ ಹೊಂದಿಲ್ಲ. ಹೀಗಾಗಿ ಪಾಲಿಕೆ ಸ್ಥಾಪಿಸಿರುವ ಕೇಂದ್ರಗಳಲ್ಲೇ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತಿದೆ. ಅಲ್ಲೇ, ಗುರುತಿನ ಚೀಟಿ ಪಡೆದು ಆನ್‌ಲೈನ್ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಗುರುತಿನ ಚೀಟಿ ನೋಂದಣಿಗಾಗಿ ಮತ್ತು ಸಾಲದ ಅರ್ಜಿ ದಾಖಲೆಗಳಿಗಾಗಿಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಹಾಗೂ ವ್ಯಾಪಾರ ಮಾಡುವ ಭಾವಚಿತ್ರ, ಕುಟುಂಬ ಹಾಗೂ ಪಾಸ್‌ಪೋರ್ಟ್ ಗಾತ್ರದ ತಲಾ ಎರಡು ಭಾವಚಿತ್ರಗಳು ಸಲ್ಲಿಸಬೇಕು. ಬ್ಯಾಂಕ್ ಖಾತೆ ಪಾಸ್ ಪುಸ್ತಕ ಹೊಂದಿರಬೇಕು. ಯೋಜನೆಯಲ್ಲಿಪಾರದರ್ಶಕ ಕಾಪಾಡುವ ನಿಟ್ಟಿನಲ್ಲಿ ಮೊಬೈಲ್ “ಒಪಿಟಿ’ ಅಗತ್ಯವಾಗಿದೆ ಎಂದು ಎನ್ನುತ್ತಾರೆ ಅಧಿಕಾರಿಗಳು.
ಪಾಲಿಕೆ ವ್ಯಾಪ್ತಿಯ 12 ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ಗಳಲ್ಲೂ ಅರ್ಜಿಸಲ್ಲಿಸಬಹುದಾಗಿದೆ. ಈ ಕೇಂದ್ರದಲ್ಲಿ ಕನಿಷ್ಠ ಶುಲ್ಕಗಳೊಂದಿಗೆ ವ್ಯಾಪಾರಿಗಳು ಅರ್ಜಿ ಪಡೆಯಬೇಕು.
1200 ಅರ್ಜಿಗಳಿಗೆ ಅನುಮೋದನೆ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 5,430 ಫಲಾನುಭವಿಗಳ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ 2,500 ಅರ್ಜಿಗಳು ಬೀದಿ ವ್ಯಾಪಾರಿಗಳಿಂದ ಸಲ್ಲಿಕೆಯಾಗಿವೆ. ಇದರಲ್ಲಿ ದಾಖಲಾತಿಗಳನ್ನು ಪರಿಶೀಲಿಸಿ 1,200 ಅರ್ಜಿಗಳಿಗೆ ಸಾಲ-ಸೌಲಭ್ಯ ಪಡೆಯಲು ಅನುಮೋದನೆ ನೀಡಲಾಗಿದೆ. ಅನುಮೋದಿತ ಅರ್ಜಿಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜೋಡಣೆಯಲ್ಲಿದ್ದು, ಬ್ಯಾಂಕ್‌ಗಳಿಗೆ 10 ಸಾವಿರ ರೂ. ಸಾಲ ಸಿಗಲಿದೆ. ಈ ಸಾಲದ ಹಣವನ್ನು 12 ಮಾಸಿಕ ಕಂತುಗಳಲ್ಲಿ ಬಡ್ಡಿ ರಹಿತವಾಗಿ ಮರುಪಾವತಿಸಬೇಕಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಂ ಸ್ವನಿಧಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಪಾಲಿಕೆಯಿಂದ ಉಚಿತ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಅರ್ಹ ಬೀದಿ ವ್ಯಾಪಾರಿಗಳ ಕುಟುಂಬದ ಒಬ್ಬರಿಗೆ ಸಾಲ ಸೌಲಭ್ಯ ಸಿಗಲಿದೆ. ಮಹಾನಗರ ಪಾಲಿಕೆಯ ಒಟ್ಟು ಜನಸಂಖ್ಯೆಯ ಶೇ.1ರಷ್ಟು ಅಂದರೆ, 5,430 ಫಲಾನುಭವಿಗಳಗುರಿ ನಿಗದಿಪಡಿಸಲಾಗಿದೆ. ಇದಕ್ಕೂಅಧಿಕ ಅರ್ಜಿಗಳು ಬಂದರೂ ಸ್ವೀಕರಿಸಲಾಗುವುದು.
–ಸ್ನೇಹಲ್ ಸುಧಾಕರ್ ಲೋಖಂಡೆ, ಆಯುಕ್ತ, ಮಹಾನಗರ ಪಾಲಿಕೆ