Advertisement

Suttur Math; ಮೋದಿ ನೇತೃತ್ವದಲ್ಲಿ ದೇಶದಲ್ಲಿ ಸಾಂಸ್ಕೃತಿಕ ಪುನರ್ ಪ್ರತಿಷ್ಠಾಪನೆ: ಅಮಿತ್ ಶಾ

02:27 PM Feb 11, 2024 | Team Udayavani |

ಮೈಸೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಸಾಂಸ್ಕೃತಿಕ ಪುನರ್ ಪ್ರತಿಷ್ಠಾಪನೆಯಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

Advertisement

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶಾದ್ಯಂತ ನಮ್ಮ ಸಂಸ್ಕೃತಿ ಪುನರ್ ಸ್ಥಾಪನೆ ಆಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಕಾಶಿ, ಉಜ್ಜಯಿನಿ, ಬದರಿನಾಥ್ ಕಾರಿಡಾರ್ ಅಭಿವೃದ್ಧಿಯಾಗಿವೆ. ದೇಶದ ಆಯುರ್ವೇದ, ಯೋಗ, ಭಾಷೆ, ಸಂಸ್ಕೃತಿ ಪುನರ್ ಸ್ಥಾಪನೆಯಾಗುತ್ತಿದೆ. ಸುತ್ತೂರು ಮಠವೂ ಅಯೋಧ್ಯೆಯಲ್ಲಿ ಅತಿಥಿ ಗೃಹ ನಿರ್ಮಿಸುತ್ತಿದೆ ಎಂದರು.

ಸುತ್ತೂರು ಮಠ 24 ಪೀಠಾಧಿಪತಿಗಳನ್ನು ಕಂಡಿದೆ. ಅವರೆಲ್ಲರಿಗೂ ನನ್ನ ಪ್ರಣಾಮಗಳು. ಕರ್ನಾಟಕದಂತಹ ಪವಿತ್ರ ಭೂಮಿಯಲ್ಲಿ ನಿಂತು ಎಲ್ಲರಿಗೂ ನಮಸ್ಕರಿಸುತ್ತೇನೆ. ಕರ್ನಾಟಕ ಪುಣ್ಯಭೂಮಿಯಲ್ಲಿ ಬಸವಣ್ಣರನ್ನು ನೆನಪಿಸುತ್ತೇನೆ. ಬಸವಣ್ಣನವರ ಕೊಡುಗೆ ಸೇವೆ ಸ್ಮರಿಸುವಂತದ್ದು. ಸುತ್ತೂರು ಕ್ಷೇತ್ರದಲ್ಲಿ ಇವತ್ತಿನ ಮಠಾಧೀಶರವರೆಗೂ ಅದ್ಭುತವಾದ ಸೇವೆ ಮಾಡಿದ್ದಾರೆ. ಅವರ ಸೇವೆಯನ್ನು ಬಿಜೆಪಿ ಗೌರವಿಸುತ್ತದೆ ಎಂದರು.

ನಾನು ನಿನ್ನೆಯೇ ಬರಬೇಕಿತ್ತು. ಒಂದು ದಿನ ಕಲಾಪ ವಿಸ್ತರಣೆಯಾಯಿತು. ಅದರಿಂದ ಬರಲಾಗಿಲಿಲ್ಲ. ಜತೆಗೆ ಅಹಮದ್ ಕಾರ್ಯಕ್ರಮ ರದ್ದು ಮಾಡಿ ಸುತ್ತೂರು ಮಠಕ್ಕೆ ಬಂದೆ. ಆಗ ಪತ್ರಕರ್ತರು ಅಹಮದ್ ಕಾರ್ಯಕ್ರಮ ಬಿಟ್ಟು ಮೈಸೂರಿಗೆ ಹೋಗುತ್ತಿದ್ದೀರಿ ಎಂದು ಕೇಳಿದರು. ಅದಕ್ಕೆ ನಾನು ಕಟ್ಟಡ ಉದ್ಘಾಟನೆಗೆ ಹೋಗುತ್ತಿದ್ದೇನೆ ಎನ್ನಲಿಲ್ಲ, ನಾನು ಸುತ್ತೂರು ಸ್ವಾಮಿಜೀಯವರ ದರ್ಶನಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಬಂದೆ ಎಂದು ಶಾ ಹೇಳಿದರು.

ಇಷ್ಟು ದಿನಗಳ ಸುತ್ತೂರು ಜಾತ್ರ ಮಹೋತ್ಸವದಲ್ಲಿ ಹಲವು ಕಾರ್ಯಕ್ರಮಗಳು ನಡೆದಿವೆ. ಜನರನ್ನು ಜಾಗೃತಗೊಳಿಸುವ ಕಾರ್ಯವಾಗಿದೆ. ಈ ಮೂಲಕ ಸುತ್ತೂರು ಮಠ ಸಮಾಜ ಸೇವೆ ಸಲ್ಲಿಸಲಾಗುತ್ತಿದೆ. 350 ಕ್ಕೂ ಹೆಚ್ಚು ಸಂಸ್ಥೆಗಳು, 20 ಸಾವಿರ ಕೆಲಸಗಾರರು, ಸಾವಿರ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇದಲ್ಲವನ್ನೂ ಮೀರಿ ವಿಶೇಷ ಚೇತನರಿಗೆ, ಅಂಗವಿಕಲರಿಗೆ ಸಲ್ಲಿಸುತ್ತಿರುವ ಕೆಲಸ ಆದರ್ಶವಾಗಿದೆ. ಅಂತಹ ಪುಣ್ಯದ ಕೆಲಸವನ್ನ ಸ್ವಾಮಿಜಿ ಮಾಡುತ್ತಿದ್ದಾರೆ. ಅವರಿಗೆ ನನ್ನ ವಿಶೇಷ ಪ್ರಣಾಮಗಳು ಎಂದು ಶಾ ಹೇಳಿದರು.

Advertisement

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಸನ್ಮಾನವಾಗಿದೆ. ಇದು ಸಂತಸದ ವಿಚಾರ. ಸುತ್ತೂರು ಶ್ರೀಗಳು ಅಯೋಧ್ಯೆಯಲ್ಲಿ ಸುತ್ತೂ‌ರು ಶಾಖಾ ಮಠ ಮಾಡುವ ಮನಸ್ಸು ಮಾಡಿದ್ದಾರೆ.  ಅವರಿಗೆ ನಾನು ಪ್ರಣಾಮ ಸಲ್ಲಿಸುತ್ತೇನೆ ಎಂದು ಅಮಿತ್ ಶಾ ಹೇಳಿದರು.

ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿಯಲ್ಲಿ ಕಾಶಿ ಕಾರಿಡಾರ್, ಉಜ್ಜಯಿನಿಯಲ್ಲಿ ಕಾರಿಡಾರ್ ಸೇರಿ ಹಲವು ಕೊಡುಗೆ ಕೊಟ್ಟಿದ್ದಾರೆ. ನರೇಂದ್ರ ಮೋದಿಯವರು ದೇಶದ ಸಂಸ್ಕೃತಿ ಬೆಳೆಸುವಲ್ಲಿ, ದೇಶ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ನಮ್ಮ ಕಾರ್ಯ ಎಂದಿನಂತೆ ಮುಂದುವರೆಯಲಿದೆ. ನಮ್ಮ ಅಭಿವೃದ್ಧಿ, ಸಂಸ್ಕೃತಿ ಪರಂಪರೆ ಉಳಿವಿಗಾಗಿ ಅದರಂತೆ ಚುನಾವಣೆಗೆ ಹೋಗುತ್ತೇವೆ ಎಂದು ಅಮಿತ್ ಶಾ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next