Advertisement
ರಾಜ್‌ಕೋಟ್ ಟಿ20 ಪಂದ್ಯ ಮುಗಿದ ಬಳಿಕ ರಾಹುಲ್ ದ್ರಾವಿಡ್ ಮತ್ತು ಸೂರ್ಯಕುಮಾರ್ ಯಾದವ್ ಲೈವ್ ಚಾಟ್ ಒಂದರಲ್ಲಿ ಪಾಲ್ಗೊಂಡಿದ್ದರು.
Related Articles
Advertisement
ನೋ ಲುಕ್ ಶಾಟ್ಸೂರ್ಯಕುಮಾರ್ ಯಾದವ್ ಅವರದು ಪಕ್ಕಾ ಅಸಾಂಪ್ರದಾಯಿಕ ಹೊಡೆತಗಳು. ಕ್ರಿಕೆಟ್ ಪುಸ್ತಕದಲ್ಲಿ ಇವು ಕಾಣಸಿಗುವುದು ವಿರಳ. ಇವರು ಎದ್ದು, ಬಿದ್ದು ಚೆಂಡನ್ನು ಬಡಿದಟ್ಟುವ ರೀತಿ ವೀಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ರಾಜ್‌ಕೋಟ್‌ನಲ್ಲಿ ಮತ್ತೂಮ್ಮೆ ಇದರ ವಿರಾಟ್ ದರ್ಶನವಾಯಿತು. ಆಫ್ಸ್ಟಂಪ್‌ನಿಂದಾಚೆ ಹೋಗುತ್ತಿದ್ದ ಹೈ ಫುಲ್‌ಟಾಸ್ ಒಂದನ್ನು ಸಿಕ್ಸರ್‌ಗೆ ಬಡಿದಟ್ಟಿದ ರೀತಿಯನ್ನು ಮರೆಯಲುಂಟೇ! ಸೂರ್ಯ ಅವರ ಮುಂದಿನ ಹೊಡೆತ “ನೋ ಲುಕ್ ಶಾಟ್’. ಇದನ್ನು “ಮರಿ ಎಬಿಡಿ’ ಎಂದೇ ಖ್ಯಾತರಾಗಿರುವ 19 ವರ್ಷದ ಡಿವಾಲ್ಡ್ ಬ್ರೇವಿಸ್ ಬಾರಿಸುತ್ತಾರೆ. ಹೇಳಿ ಕೇಳಿ ಇಬ್ಬರೂ ಮುಂಬೈ ಇಂಡಿಯನ್ಸ್ ಆಟಗಾ ರರು. ಇದೀಗ ಬ್ರೇವಿಸ್ ಬಳಿ ಈ ಶಾಟ್ ಬಾರಿಸುವುದನ್ನು ಕಲಿತುಕೊಳ್ಳ ಬೇಕೆಂದು ಸೂರ್ಯ ಹೇಳಿಕೊಂಡಿದ್ದಾರೆ. ಇವರಿಬ್ಬರ ವೀಡಿಯೋ ಸಂಭಾಷಣೆ ಯನ್ನು ಮುಂಬೈ ಇಂಡಿಯನ್ಸ್ ಹಂಚಿಕೊಂಡಿದೆ.
“ಇದು ನನಗೆ ಸಂದ ಗೌರವ. ಆದರೆ ನಾನು ನಿಮ್ಮಿಂದ ಬಹಳಷ್ಟು ಹೊಡೆತ ಗಳನ್ನು ಬಾರಿಸಲು ಕಲಿಯ ಬೇಕಿದೆ’ ಎಂದು ಬ್ರೇವಿಸ್ ಹೇಳಿಕೊಂಡಿದ್ದಾರೆ.