Advertisement

ಸೂರ್ಯಕಿರಣ್‌ ತಂಡದ ವೈಮಾನಿಕ ಪ್ರದರ್ಶನ ಅನುಮಾನ’

01:32 AM Feb 20, 2019 | |

ಬೆಂಗಳೂರು: 1″ಸೂರ್ಯಕಿರಣ್‌ ತಂಡದ ವೈಮಾನಿಕ ಪ್ರದರ್ಶನ ಅನುಮಾನ’ ಬೆಂಗಳೂರು: 12ನೇ “ಏರೋ ಇಂಡಿಯಾ ಶೋ’ದಲ್ಲಿ ಸೂರ್ಯಕಿರಣ್‌ ತಂಡದ ವೈಮಾನಿಕ ಪ್ರದರ್ಶನ ಅನುಮಾನ ಎಂದು
ಏರ್‌ ಮಾರ್ಷಲ್‌ ರಾಕೇಶ್‌ ಕುಮಾರ್‌ ಸಿಂಗ್‌ ಬಡೋರಿಯಾ ಸ್ಪಷ್ಟಪಡಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ವಾಯುಸೇನೆಯ ಸೂರ್ಯಕಿರಣ್‌ ಒಂಬತ್ತು ಜೆಟ್‌ ಟ್ರೈನರ್‌ನೊಂದಿಗೆ ಪ್ರದರ್ಶನ ನೀಡುವ ಏಕೈಕ ತಂಡವಾಗಿದೆ.
ಪ್ರದರ್ಶನದ ಸಂದರ್ಭದಲ್ಲಿ ಈ ವಿಮಾನಗಳು 4ರಿಂದ 5 ಮೀ. ಅಂತರದಲ್ಲಿ ಹಾರಾಟ ನಡೆಸುತ್ತವೆ. ಆಗಸದಲ್ಲಿ “ಮಿರರ್‌ ಇಮೇಜ್‌’ ಚಿತ್ತಾರ ಮೂಡಿಸುವಾಗ ಈ ಅವಘಡ ಸಂಭವಿಸಿದೆಯೇ? ಪೈಲಟ್‌
ಗಳು ಈ ಫಾರ್ಮೇಷನ್‌ ಮಾಡುವುದರಲ್ಲಿ ವಿಫ‌ಲರಾದರೇ? ಹಕ್ಕಿ ಅಡ್ಡಿಯಾಯಿತೇ? ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತಾ? ಇದೆಲ್ಲವೂ ತನಿಖೆಯಿಂದ ಹೊರಬರಬೇಕಿದೆ ಎಂದು ಅವರು ಹೇಳಿದರು.
ಅವಘಡದ ಹಿನ್ನೆಲೆಯಲ್ಲಿ ಸೂರ್ಯಕಿರಣ್‌ ಮೊದಲ ದಿನ ಪ್ರದರ್ಶನದಿಂದ ದೂರ ಉಳಿಯಲಿದ್ದು, ಉಳಿದ ನಾಲ್ಕು ದಿನಗಳು ಪ್ರದರ್ಶನ ನೀಡುವುದು ಅನುಮಾನ. ಈ ಬಗ್ಗೆ ತಂಡದ ಜತೆ ಮಾತನಾಡಿದ ಬಳಿಕ ಇದು ಸ್ಪಷ್ಟವಾಗಲಿದೆ ಎಂದರು.

ತನಿಖೆ ನಂತರ ಪ್ರತಿಕ್ರಿಯೆ; ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮಾತನಾಡಿ, ಸೂರ್ಯಕಿರಣ್‌ ಮತ್ತು ಮಿರಾಜ್‌-2000 ಘಟನೆ ಕುರಿತು “ಕೋರ್ಟ್‌ ಆಫ್ ಎನ್‌ಕ್ವೆçರಿ’ ಮಾಡಲಾಗುತ್ತಿದೆ. ವರದಿ ಬಂದ
ಬಳಿಕ ಪ್ರತಿಕ್ರಿಯಿಸಲಾಗುವುದು. ಇದಕ್ಕೂ ಮುನ್ನ ಯಾವುದೇ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು.

30 ದುರಂತ; 41 ಸಾವು

ದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 30 ಯುದ್ಧ ವಿಮಾನ ದುರಂತಗಳು ಸಂಭವಿಸಿದ್ದು, ಇದರಲ್ಲಿ 41 ಜನ ಸಾವನ್ನಪ್ಪಿ ದ್ದಾರೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. 

Advertisement

ಬೀದರ್‌ನಲ್ಲೂ ಎರಡು ಬಾರಿ ಅಪಘಾತ: ಮೂವರ ಬಲಿ

ಬೀದರ್‌: ಸೂರ್ಯಕಿರಣ್‌ ಅವಘಡ ಇದೇ ಮೊದಲಲ್ಲ; ಈ ಹಿಂದೆ ಕೂಡ ಬೀದರ್‌ನಲ್ಲಿ ಎರಡು
ಬಾರಿ ದುರ್ಘ‌ಟನೆಗಳು ಸಂಭವಿಸಿದ್ದವು. ಅದರಲ್ಲಿ ಮೂವರು ವಿಂಗ್‌ ಕಮಾಂಡರ್‌ಗಳು
ಬಲಿಯಾಗಿದ್ದರು. ಮಾರ್ಚ್‌ 2006ರಲ್ಲಿ ನಗರದ ಹೊರವಲಯದ ನೌಬಾದ್‌ ಬಳಿ ಸೂರ್ಯಕಿರಣ್‌
ವಿಮಾನ ಅವಘಡಕ್ಕೆ ಈಡಾಗಿತ್ತು. ಹಿರಿಯ ಸ್ಕ್ವಾಡ್ರನ್‌ ಮುಖ್ಯಸ್ಥ ಶೈಲೇಂದ್ರ ಸಿಂಗ್‌ ಮತ್ತು ವಿಂಗ್‌
ಕಮಾಂಡರ್‌ ಭಾಟಿಯಾ ಸ್ಥಳದಲ್ಲೇ ಮೃತಪಟ್ಟಿದ್ದರು.

ಜನವರಿ 2009ರಲ್ಲಿ ನಗರದ ಹೊರವಲಯದ ಜಮಿಸ್ತಾನ್‌ಪುರ್‌ ಸಮೀಪದಲ್ಲಿ ಅದೇ ಸೂರ್ಯಕಿರಣ್‌ ಯುದಟಛಿ ವಿಮಾನ ಅವಘಡಕ್ಕೆ ಈಡಾದ ಸಂದರ್ಭದಲ್ಲಿ ವಿಂಗ್‌ ಕಮಾಂಡರ್‌ ಆರ್‌.ಎಸ್‌. ಧಾಲಿವಾಲ್‌ ಅಸುನೀಗಿದ್ದರು.

ವಾಯುಸೇನೆಯ ನಿರೀಕ್ಷೆಯ ಯುದ್ಧ  ವಿಮಾನವಾದ ಸೂರ್ಯ ಕಿರಣ ಮೂರನೇ ಬಾರಿಗೆ
ಅಪಘಾತಕ್ಕೀಡಾಗಿರುವುದರಿಂದ ಜಿಲ್ಲೆಯ ಜನರು ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next