Advertisement

ಗಡಿನಾಡಿನ ಪ್ರೀತಿಗೆ ಶರಣು: ಶಿಶುನಾಳ ಪ್ರಶಸ್ತಿ ವಿಜೇತ ಮುದ್ದುಕೃಷ್ಣ

07:15 AM Aug 03, 2017 | Team Udayavani |

ಕಾಸರಗೋಡು: ಕರ್ನಾಟಕ ರಾಜ್ಯದ ಪ್ರತಿಷ್ಠಿತ ಸಂತ ಶಿಶುನಾಳ ಪ್ರಶಸ್ತಿ ಪಡೆದು ತಿಂಗಳು ನಾಲ್ಕು ಕಳೆದರೂ ಈ ಬಗ್ಗೆ ಪ್ರೀತಿಯಿರಿಸಿ ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ ನನ್ನನ್ನು ಗೌರವಿಸಿದ ನಿಮ್ಮೆಲ್ಲರ ಪ್ರೀತಿಗೆ ಮೂಕನಾಗಿದ್ದೇನೆ, ಶರಣಾಗಿದ್ದೇನೆ. 

Advertisement

ಹದಿನೆಂಟು ವರ್ಷಗಳ ಹಿಂದೆ ಕಾಸರಗೋಡು ಚಿನ್ನಾ ಅವರ ಸಂಚಾಲಕತ್ವದಲ್ಲಿ ಗೀತಾ ವಿಹಾರದ ನೇತೃತ್ವದಲ್ಲಿ ಜರಗಿದ “ಗೀತ ಸಂಗೀತ ರಥ’ದ ಯಾತ್ರೆ ನನ್ನನ್ನು ನಿಮ್ಮವನಾಗಿಸಿತು. ತದನಂತರದ  ದಿನಗಳಲ್ಲಿ   ಕಾಸರಗೋಡಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿ ಮಾಡಿಸಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆಯಿದೆ. ನನ್ನಲ್ಲಿ ಈಗ ಅಧಿಕಾರವಿಲ್ಲದಿದ್ದರೂ ವೈಯಕ್ತಿಕವಾಗಿ ನನ್ನ ಪ್ರಭಾವ ಬಳಸಿ ಇಲ್ಲಿನ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳ ಜತೆ ಸದಾ ಇರುತ್ತೇನೆ. ಮಾತ್ರವಲ್ಲ 2018 ಜನವರಿ ತಿಂಗಳಲ್ಲಿ ಮತ್ತೂಮ್ಮೆ ಸುಗಮ ಸಂಗೀತ ಕಲಾವಿದರ ತಂಡದ ಜತೆ ಬಂದು “ಸಂಗೀತ ಯಾತ್ರೆ’ಯನ್ನು ಮಾಡುವುದಾಗಿ ಶಿಶುನಾಳ ಪ್ರಶಸ್ತಿ ವಿಜೇತ ವೈ.ಕೆ. ಮುದ್ದುಕೃಷ್ಣ ಹೇಳಿದರು.

ಅವರು ಕಾಸರಗೋಡಿನ ಸಾಂಸ್ಕೃತಿಕ, ಸಾಹಿತ್ಯಿಕ ಸಂಸ್ಥೆಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯದೊಂದಿಗೆ “ಪದ್ಮಗಿರಿ ಕಲಾಕುಟೀರ’ದಲ್ಲಿ ಏರ್ಪಡಿ ಸಿದ “ಸಂಸ್ಕೃತಿ ಕುಶಲೋಪರಿ’ ಕಾರ್ಯಕ್ರಮ ದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ಉತ್ತರ ಕನ್ನಡದ ಸಾಹಿತಿಗಳು, ಕಲಾವಿದರು, ಪತ್ರಕರ್ತರು “ಕಾಳೀ ನದೀ ತೀರದಿಂದ ಕಾಸರಗೋಡಿನ ಚಂದ್ರಗಿರಿ ನದಿಯ ತನಕ’ ಎಂಬ ಪರಿಕಲ್ಪನೆಯಲ್ಲಿ ಕುಶಲೋಪರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕೇರಳ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಖ್ಯಾತ ಚಿತ್ರಕಲಾವಿದ ಪಿ.ಎಸ್‌. ಪುಣಿಂಚತ್ತಾಯ ಅವರನ್ನು, ಜತೆಗೆ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಅವರನ್ನು ಸಮ್ಮಾನಿಸಲಾಯಿತು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ, ಪ್ರಖ್ಯಾತ ರಂಗಕರ್ಮಿಡಾ| ನಾ. ದಾಮೋದರ ಶೆಟ್ಟಿ, ಕರ್ನಾಟಕ ಸಮಿತಿಯ ಅಧ್ಯಕ್ಷರಾದ ಮುರಳೀಧರ ಬಳ್ಳಕ್ಕುರಾಯ, ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್‌.ವಿ. ಭಟ್‌, ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ, ಸತ್ಯನಾರಾಯಣ ಕೆ., ಮನೋಹರ ಶೆಟ್ಟಿ ಉಪಸ್ಥಿತರಿದ್ದರು.
ಕಾಸರಗೋಡಿನ ಖ್ಯಾತ ಕಲಾವಿದರು ಹಾಗು ಸಾಹಿತಿಗಳಾದ ಕೆ.ವಿ. ರಮೇಶ್‌, ಡಾ| ಕಮಲಾಕ್ಷ, ರಾಧಾ ಮುರಳೀಧರ, ವಿಜಯಲಕ್ಷಿ$¾à ಶ್ಯಾನುಭೋಗ್‌, ಟಿ.ಎ.ಎನ್‌. ಖಂಡಿಗೆ, ಡಾ|ಯು.ಶಂಕರನಾರಾಯಣ ಭಟ್‌, ಕವಿತಾ ಕೂಡ್ಲು, ಗುರುಪ್ರಸಾದ್‌ ಕೋಟೆಕಣಿ, ರಘು ಮೀಪುಗುರಿ, ಎಂ.ಐ.ಎಂ. ಚಂದ್ರಶೇಖರ, ಯೋಗೀಶ್‌ ರಾವ್‌ ಚಿಗುರುಪಾದೆ, ಟಿ. ಶಂಕರನಾರಾಯಣ ಭಟ್‌, ವಾಮನ್‌ ರಾವ್‌ ಬೇಕಲ್‌, ಗಣೇಶ್‌ ಪೈ ಬದಿಯಡ್ಕ, ಜ್ಞಾನದೇವ ಶೆಣೈ, ಗಾಯಕ ವಿಟuಲ ಶೆಟ್ಟಿ, ಹರೀಶ್‌ ಒಡ್ಡಂಬೆಟ್ಟು, ಉಷಾ ಈಶ್ವರ ಭಟ್‌, ಘಟಂ ಕಲಾವಿದ ಈಶ್ವರ ಭಟ್‌, ಬಿ. ರಾಮಮೂರ್ತಿ, ಸತ್ಯನಾರಾಯಣ ಐಲ, ಜಗದೀಶ್‌ ಉಪ್ಪಳ, ಶಶಿಭೂಷಣ್‌ ಕಿಣಿ, ನರಸಿಂಹ ಕಿಣಿ, ಪುರುಷೋತ್ತಮ ಪೆರ್ಲ, ಮೃತ್ತಿಕಾ ಕಲಾವಿದ ಬಾಲಚಂದ್ರ ಗಾಂಸ್‌, ಮಾಧವ ಶೇಟ್‌, ವೆಂಕಟೇಶ್‌ ಶೇಟ್‌, ಸುಧಾಕರ ಸಾಲ್ಯಾನ್‌ ಸೇರಿದಂತೆ ಹಲವಾರು ಜನರು ಕೇರಳ ಬಂದ್‌ ಇದ್ದರೂ ಭಾಗವಹಿಸಿ ಕನ್ನಡಾಭಿಮಾನವನ್ನು ತೋರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next