Advertisement

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

04:25 PM Oct 22, 2021 | Team Udayavani |

ಸಾಮಾನ್ಯವಾಗಿ ಸಿನಿಮಾದ ಸಬ್ಜೆಕ್ಟ್, ಕ್ಲೈಮ್ಯಾಕ್ಸ್‌ ನಲ್ಲಿ ಸರ್‌ಪ್ರೈಸ್‌ ಇರೋದನ್ನ ನೀವು ಕೇಳಿರುತ್ತೀರಿ. ಆದರೆ ಇಲ್ಲೊಂದು ಚಿತ್ರತಂಡ ತನ್ನ ಸಿನಿಮಾಕ್ಕೆ “ಸರ್‌ಪ್ರೈಸ್‌’ ಅಂಥ ಟೈಟಲ್‌ ಇಟ್ಟಿದೆ. ದಸರಾ ಹಬ್ಬದ ಸಂದರ್ಭದಲ್ಲಿ “ಸರ್‌ಪ್ರೈಸ್‌’ ಟೈಟಲ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ನವೆಂಬರ್‌ನಿಂದ “ಸರ್‌ಪ್ರೈಸ್‌’ ಶೂಟಿಂಗ್‌ ಶುರುವಾಗಲಿದೆ.

Advertisement

ಈ ಹಿಂದೆ ಪುನೀತ್‌ ರಾಜಕುಮಾರ್‌, ಶ್ರೀಮುರಳಿ ಮೊದಲಾದ ಸ್ಟಾರ್ ಸಿನಿಮಾಕ್ಕೆ ಮೋಷನ್‌ ಪೋಸ್ಟರ್‌, ಲಿರಿಕಲ್‌ ವಿಡಿಯೋ ಹಾಗು ಸಂಕಲನ ಕೆಲಸ ಮಾಡಿದ ಅನುಭವವಿರುವ ಪ್ರತಿಭೆ ಕುಮಾರ್‌ ಎಸ್‌. ವಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರದಲ್ಲಿ ತಾರಕ್‌ ನಾಯಕ ನಟನಾಗಿ ನಟಿಸುತಿದ್ದು, ಚಿತ್ರಕ್ಕೆ ಮನೋಜಿ ರೂಢಿಯ ಛಾಯಾಗ್ರಹಣ, ಆಕಾಶ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಪ್ರದ್ಯೋತ್ತಮ್‌ ಸಂಗೀತ ನಿರ್ದೇಶನವಿದೆ. ಚಿತ್ರಕ್ಕೆ ಲಿಂಗರಾಜು ವಾಡಕಿ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next