ಸಮರಾಭ್ಯಾಸದಲ್ಲಿ ನಿರತವಾಗಿವೆ. ಸಮರಾಭ್ಯಾಸ ಏಳು ದಿನಗಳ ಕಾಲ ನಡೆಯಲಿದೆ ಎಂದು ನೌಕಾನೆಲೆಯ
ಮೂಲಗಳು ತಿಳಿಸಿವೆ. ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಯುದ್ಧನೌಕೆಗಳು ಇಲ್ಲಿಗೆ 200 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಸಮರಾಭ್ಯಾಸ ಪ್ರಾರಂಭಿಸಿವೆ. ಐಎನ್‌ಎಸ್ ವಿಕ್ರಮಾದಿತ್ಯ ಸಮರಾಭ್ಯಾಸಕ್ಕೆ ಸಾಥ್
ನೀಡಿದೆ. ಈ ಮುನ್ನ ವಿಕ್ರಮಾಧಿದಿತ್ಯ ಸಮರಾಭ್ಯಾಸದಲ್ಲಿ ಭಾಗವಹಿಸುವುದಿಲ್ಲ ಎನ್ನಲಾಗಿತ್ತು. ಆದರೆ ನೌಕಾಪಡೆ
ತನ್ನೆಲ್ಲ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಿಕೊಳ್ಳಲು ನಿರ್ಧರಿಸಿದೆ.
Advertisement
ನೌಕಾ ಸೈನಿಕರ ಸಾಮರ್ಥ್ಯ ಮತ್ತು ಸಮುದ್ರದ ಮಾರ್ಗದಲ್ಲಿ ಬಳಸುವ ಅಸ್ತ್ರಗಳೂ ಈ ಸಮಾರಾಭ್ಯಾಸದಲ್ಲಿಪ್ರಯೋಗವಾಗಲಿವೆ. ಐಎನ್‌ಎಸ್ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅತ್ಯಂತ ದೊಡ್ಡ ಸಮರಾಭ್ಯಾಸವೂ ಇದಾಗಿದೆ.
ಪೂರ್ಣ ಪ್ರಮಾಣದಲ್ಲಿ ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತಿದೆ. ಐದು ಸಾವಿರಕ್ಕೂ ಹೆಚ್ಚು ನೌಕಾ ಸೈಲರ್
ಸಮರಾಭ್ಯಾಸದಲ್ಲಿ ಭಾಗವಹಿಸಿದ್ದಾರೆ. ಟ್ರೋಫೆಕ್ಸ್ ಸಮಾರಭ್ಯಾಸದ ಕುರಿತು “ಉದಯವಾಣಿ’ ಮೊದಲೇ ವರದಿ
ಮಾಡಿತ್ತು.