ಬಂಟ್ವಾಳ: ಇಲ್ಲಿನ ಭಂಡಾರಿಬೆಟ್ಟು ಬಳಿಯ ವಸತಿ ಸಂಕೀರ್ಣದಲ್ಲಿ ನಡೆದ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ, ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬೆಳ್ತಂಗಡಿ ನಿವಾಸಿ ಪ್ರತೀಕ್ ಹಾಗೂ ಜಯೇಶ್ ಯಾನೆ ಸಚ್ಚು ಬಂಧಿತರು. ಹತ್ಯೆಯ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ 9 ಮಂದಿಯನ್ನು ಬಂಧಿಸಲಾಗಿದ್ದು, ಪ್ರಕರಣದ ಆರೋಪಿಗಳ ಸಂಖ್ಯೆ 11ಕ್ಕೇರಿದೆ.
ಪ್ರಕರಣದಲ್ಲಿ ಮೊದಲು ಕೃತ್ಯ ಎಸಗಿರುವ ಮುಖ್ಯ ಆರೋಪಿಗಳಾದ ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ಸತೀಶ್ ಕುಲಾಲ್ (39), ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್ (28) (ಈತ ಕಿಶನ್ ಹೆಗ್ಡೆಯ ಆಪ್ತ) ಬಂಧಿಸಲಾಗಿತ್ತು.
ಇದನ್ನೂ ಓದಿ:ಆ್ಯಂಬುಲೆನ್ಸ್ ಸೈರನ್ ಕೈಕೊಟ್ಟರೂ ಕರ್ತವ್ಯ ಪ್ರಜ್ಞೆ ಮೆರೆದರು! ವ್ಯಾಟ್ಸಪ್ ಗ್ರೂಪ್ ಸಹಾಯ
ಇವರ ವಿಚಾರಣೆಯ ವೇಳೆ ಪ್ರದೀಪ್ ಕುಮಾರ್ ಯಾನೆ ಪಪ್ಪು, ಶರೀಫ್ ಯಾನೆ ಸಯ್ಯದ್ ಶರೀಫ್, ವೆಂಕಪ್ಪ ಪೂಜಾರಿ ಯಾನೆ ವೆಂಕಟೇಶ, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಆಕಾಶಭವನ ಶರಣ್ ಎನ್ನುವವರು ಹತ್ಯೆಗೆ ಒಳಸಂಚು ರೂಪಿಸಿದ್ದರು. ವಾಹನದ ವ್ಯವಸ್ಥೆ ಮಾಡಿದ್ದ ದಿವ್ಯರಾಜ್, ಅನಿಲ್ ಪಂಪ್‌ವೆಲ್, ಆರೋಪಿಗಳಿಗೆ ತಂಗಲು ವ್ಯವಸ್ಥೆ ಮಾಡಿದ್ದ ಉಜಿರೆ ನಿವಾಸಿ ರಾಜೇಶ್ ಬಗ್ಗೆ ಮಾಹಿತಿ ಪಡೆದು ಅವರನ್ನು ಬಂಧಿಸಲಾಗಿತ್ತು.
ಸುರೇಂದ್ರ ಬಂಟ್ವಾಳ್ ರನ್ನು ಅ.20ರಂದು ಬಂಟ್ವಾಳದ ಭಂಡಾರಿ ಬೆಟ್ಟುವಿನ ವಸ್ತಿ ಅಪಾರ್ಟ್ ಮೆಂಟ್ ನ ಸುರೇಂದ್ರ ಭಂಡಾರಿ ಗೆ ಸಂಬಂದಿಸಿದ ಪ್ಲಾಟ್ ನಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು.