ಭಾಲ್ಕಿ: ನಾವು ಪಡುವ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುವುದು ಎಂದು ಡೈಮಂಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ್ ಮುಖ್ಯಸ್ಥ ವೈ.ಮಾಧವರಾವ್ ಅಭಿಪ್ರಾಯಪಟ್ಟರು.
ಪಟ್ಟಣದ ಡೈಮಂಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೆಲವೇ ವರ್ಷಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವುದ ರೊಂದಿಗೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆ çರ್ಯ ತುಂಬುವ ಕಾರ್ಯ ಇಲ್ಲಿಯ ಶಿಕ್ಷಕರು ಮಾಡುತ್ತಿದ್ದಾರೆ. ಹೀಗಾಗಿಯೇ ಈ ಶಾಲೆಯಲ್ಲಿ 2022ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿ ಪರೀಕ್ಷೆ ಬರೆದ ಒಟ್ಟು 258 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ ಎಂದರು.
72 ವಿದ್ಯಾರ್ಥಿಗಳು ಪ್ರತಿಶತ 95ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. 127 ವಿದ್ಯಾರ್ಥಿಗಳು ಪ್ರತಿಶತ 90ಕ್ಕಿಂತ ಅಧಿಕ ಅಂಕಗಳಿಸಿ ಉತ್ತೀರ್ಣರಾಗಿದ್ದಾರೆ.188 ವಿದ್ಯಾರ್ಥಿಗಳು ಆಯ್ದ ಆಯಾ ವಿಷಯಗಳಲ್ಲಿ ಪ್ರತಿಶತ ಅಂಕ ಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡೈಮಂಡ್ ಕಾಲೇಜಿನ ಪ್ರಾಂಶುಪಾಲ ಮಸ್ತಾನವಲಿ, ಶಿಕ್ಷಕರ, ಪಾಲಕರ ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಇಷ್ಟೊಂದು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು. ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿ, ತಾಲೂಕು ಮತ್ತು ಜಿಲ್ಲೆಯ ಕೀರ್ತಿ ಹೆಚ್ಚಿಸುವಲ್ಲಿ ಭಾಲ್ಕಿಯ ವಿದ್ಯಾಭಾರತಿ ಪ್ರೌಢಶಾಲೆ, ಡೈಮಂಡ್ ಕಾಲೇಜು, ಗುರುಕುಲ ವಿದ್ಯಾಲಯ, ಸತ್ಯಸಾಯಿ ಪಬ್ಲಿಕ್ ಶಾಲೆ ಸೇರಿದಂತೆ ಹಲವು ಶಾಲೆಗಳ ಶ್ರಮ ಮೆಚ್ಚುವಂತಹದ್ದಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಧನರಾಜ ನೀಲಂಗೆ ಮಾತನಾಡಿದರು. ಸಿಆರ್‌ಪಿ ಅರ್ಚನಾ ಪವಾರ, ಗೌಶಿಯಾ ಮಸ್ತಾನವಲಿ ಉಪಸ್ಥಿತರಿದ್ದರು. ವೀರಾರೆಡ್ಡಿ ಸ್ವಾಗತಿಸಿದರು. ಸುಜಾತಾ ಪಾಟೀಲ ನಿರೂಪಿಸಿದರು. ಅಶ್ವಿನ ಭೋಸ್ಲೆ ವಂದಿಸಿದರು.