Advertisement

ಸುರತ್ಕಲ್‌: ನಂದಿನಿ ನದಿಯಲ್ಲಿ ಮೀನು ಹಿಡಿಯುವ ಜಾತ್ರೆ

02:59 PM May 15, 2024 | Team Udayavani |

ಸುರತ್ಕಲ್‌: ಚೇಳ್ಯಾರು ಗ್ರಾಮದ ಖಂಡಿಗೆ ಧರ್ಮರಸು ಉಳ್ಳಾಯನ ಕಂಡೇವು ಜಾತ್ರೆ ಪ್ರಯುಕ್ತ ಮಂಗಳವಾರ ನಂದಿನಿ ನದಿಯಲ್ಲಿ ಮೀನು ಹಿಡಿಯುವ ಜಾತ್ರೆ ನಡೆಯಿತು. ದೈವಸ್ಥಾನದಲ್ಲಿ ಪ್ರತೀ ವರ್ಷದ ಸಂಕ್ರಮಣದಂದು ಜಾತ್ರೆ ನಡೆಯುವ ವೇಳೆ ಈ ಹಬ್ಬ ನಡೆಯುತ್ತದೆ. ಕ್ಷೇತ್ರದ ಪ್ರಮುಖರು ಪ್ರಾರ್ಥಿಸಿ, ಪ್ರಸಾದ ಹಾರಿಸಿದ ಬಳಿಕ ಮೀನು ಹಿಡಿಯಲಾಗುತ್ತದೆ.

Advertisement

ಸಂಪ್ರದಾಯದಂತೆ ಮೀನು ಹಿಡಿದು ನೇಮದ ಸಮಯ ಪ್ರಸಾದ ರೂಪದಲ್ಲಿ ಉಪಯೋಗಿಸುವುದು ಹಿಂದಿನಿಂದ ಬಂದ
ಆಚರಣೆಯಾಗಿದೆ. ಇತಿಹಾಸ ಪ್ರಸಿದ್ಧ ಎರ್ಮಾಳು ಜಪ್ಪು, ಖಂಡೇವು ಅಡೆಪು ಎಂಬ ನಾಣ್ಣುಡಿಯಂತೆ ಖಂಡಿಗೆ ಜಾತ್ರೆ ಇತಿಹಾಸ ಪ್ರಸಿದ್ಧವಾಗಿದೆ. ಉಳ್ಳಾಯ ಜಾತ್ರೆಯ ಸಂಭ್ರಮದೊಂದಿಗೆ ಮೀನು ಹಿಡಿಯುವ ಸಂಪ್ರದಾಯಕ್ಕೂ ಇತಿಹಾಸವಿದೆ.

ನದಿ ನೀರು ಮಲಿನ: ಮೀನು ಹಿಡಿಯಲು ಹಿಂದೇಟು
ಸಾವಿರಕ್ಕೂ ಮಿಕ್ಕಿ ಜನರು ಆಗಮಿಸಿ ಮೀನು ಹಿಡಯುತ್ತಿದ್ದ ದಿನವಿತ್ತು. ಇತ್ತೀಚಿನ ದಿನಗಳಲ್ಲಿ ನಂದಿನಿ ನದಿಗೆ ಭಾರೀ ಪ್ರಮಾಣದಲ್ಲಿ ಒಳಚರಂಡಿ ನೀರು ಸಂಸ್ಕರಿಸದೆ ಅನಧಿಕೃತವಾಗಿ ಬಿಡಲಾಗುತ್ತಿದ್ದು, ಮೀನು ಹಿಡಿಯಲು ಹಿಂದೇಟು ಹಾಕುವ ಸ್ಥಿತಿ ಉಂಟಾಗುತ್ತಿದೆ. ನಗರೀಕರಣದ ಭರಾಟೆ, ಒಳಚರಂಡಿಯ ಅಸಮರ್ಪಕತೆಯಿಂದ ಇಂದು ಸ್ಥಳೀಯ ಕಟ್ಟಡಗಳಿಂದ ಹರಿದು ಬರುವ ತ್ಯಾಜ್ಯ ನದಿಯನ್ನು ಮಾಲಿನ್ಯಗೊಳಿಸಿದೆ. ಕಾರಣಿಕ ಕ್ಷೇತ್ರ ಉಳ್ಳಾಯ ದೈವಸ್ಥಾನದ ಬಳಿ ನಂದಿನಿ ನದಿಯಲ್ಲಿ ತ್ಯಾಜ್ಯ, ಕಸ, ಹೂಳು ತುಂಬಿ ಮೀನು ಹಿಡಿಯುವುದು ಕಷ್ಟ ಸಾಧ್ಯವಾಗಿದೆ. ಹಾಗಾಗಿ ಈಗ ಮೀನು ಹಿಡಿಯುವವರ ಸಂಖ್ಯೆ ತೀರಾ ಕಡಿಮೆಯಾಗಿದೆ ಎನ್ನುತ್ತಾರೆ, ಉಳ್ಳಾಯ ದೈವಸ್ಥಾನದ ಅಡಳಿತ ಸಮಿತಿ ಕೋಶಾಧಿಕಾರಿ ಸುಧಾಕರ ಶೆಟ್ಟಿ ಖಂಡಿಗೆ.
ನಂದಿನಿ ನದಿ ಕಲುಷಿತಗೊಂಡಿರುವ ಕಾರಣ ನೂರಾರು ಕೃಷಿ ಕುಟುಂಬಗಳು ಬೀದಿ ಪಾಲಾಗಿದೆ ಮತ್ತು ಕುಡಿಯುವ ನೀರಿನ ಬಾವಿಯು ಕಲುಷಿತಗೊಂಡಿದೆ.

ಚೇಳ್ಯಾರು ಗ್ರಾ.ಪಂ. ವತಿಯಿಂದ ಹಲವು ಬಾರಿ ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳ ಯಾವುದೇ ಸ್ಪಂದನೆ ಇಲ್ಲ ಎಂದು ಗ್ರಾ.ಪಂ. ಅಧ್ಯಕ್ಷಜಯಾನಂದ ಅಸಮಾಧಾನ ವ್ಯಕ್ತಪಡಿಸಿದರು. ನಂದಿನಿ ನದಿ ಉಳಿಸಿ ಸಹಿ ಸಂಗ್ರಹ ಅಭಿಯಾನ ನಂದಿನಿ ನದಿಯ ಮಾಲಿನ್ಯದಿಂದ ಸುತ್ತಲಿನ ಪರಿಸರ ಮಾಲಿನ್ಯವಾಗುತ್ತಿದೆ ಇದನ್ನು ತಡೆಯಲು, ನದಿ ಯಲ್ಲಿ ಹೂಳೆತ್ತಲು ಆಗ್ರಹಿಸಿ ನಂದಿನಿ ನದಿ ಉಳಿಸಿ ಸಹಿ ಸಂಗ್ರಹಅಭಿಯಾನಕ್ಕೆ ಜಾತ್ರೆ ಸಂದರ್ಭ ಚಾಲನೆ ನೀಡಲಾಗುವುದು ಮಾಲಿನ್ಯ ತಡೆಯದಿದ್ದಲ್ಲಿ ಹಾಗೂ ಹೂಳೆತ್ತದಿದ್ದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವು ದು ಎಂದು ಆಡಳಿತ ಸಮಿತಿ
ಗೌರವಾಧ್ಯಕ್ಷ ತೋಕೂರುಗುತ್ತು ಉದಯಕುಮಾರ್‌ ಶೆಟ್ಟಿ, ದಿವಾಕರ ಸಾಮಾನಿ ಚೇಳಾçರುಗುತ್ತು ತಿಳಿಸಿದರು.

ಸರಕಾರ ಬದಲಾವಣೆ; ಅನುದಾನಕ್ಕೆ ಹಿನ್ನಡೆ ಖಂಡಿಗೆ ನಂದಿನಿ ನದಿಯ ಹೂಳು ತುಂಬಿದ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಕಳೆದ ವರ್ಷ ನಾನು ಮತ್ತು ಜಿಲ್ಲಾಧಿಕಾರಿಯವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ನದಿಯ ಹೂಳೆತ್ತಲು ಸುಮಾರು 5 ಕೋಟಿ ರೂ.
ಗಳ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಸರಕಾರ ಬದಲಾವಣೆಯಾದ ಕಾರಣ ಅನುದಾನದ ಕೊರತೆಯಾಯಿತು.

Advertisement

*ಉಮಾನಾಥ ಕೋಟ್ಯಾನ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next