ಸುರಪುರ: ತಾಲೂಕಿನಲ್ಲಿ ಶನಿವಾರ ಸುರಿದ ಅಕಾಲಿಕ ಮಳೆಗೆ ಭತ್ತ, ಸಜ್ಜೆ, ಮೆಣಸಿನಕಾಯಿ, ಪಪ್ಪಾಯಿ, ಬಾಳೆ ಸೇರಿ ಅಂದಾಜಿ ಏಳು ನೂರು ಹೆಕ್ಟೇರ್ ಬೆಳೆ ನಷ್ಟವಾಗಿದೆ. ಕೆಲ ಕಡೆ ಗುಡುಗು ಸಿಡಿಲಿಗೆ ಜಾನುವಾರುಗಳು ಬಲಿಯಾಗಿವೆ.
ತಾಲೂಕಿನಲ್ಲಿ ಶೇ. 35ರಿಂದ 40ರಷ್ಟು ಭತ್ತ ಕೊಯ್ಲು ಹಂತದಲ್ಲಿತ್ತು. ಸಜ್ಜೆ ಕೊಯ್ಲು ಹಂತಕ್ಕೆ ತಲುಪಿತ್ತು. ಸುರಪುರ, ಕೆಂಭಾವಿ, ಕಕ್ಕೇರಾ ಮತ್ತು ಹುಣಸಗಿ, ಕೊಡೇಕಲ್ ವಲಯಗಳಲ್ಲಿ ಕೊಯ್ಲು ಹಂತಕ್ಕೆ ತಲುಪಿದ್ದ ವಾಣಿಜ್ಯ ಬೆಳೆಗಳಾದ ಭತ್ತ, ಸಜ್ಜೆ, ಮೆಣಸಿನಕಾಯಿ ಮತ್ತು ಪಪ್ಪಾಯಿ, ಚಿಕ್ಕು, ದಾಳಿಂಬೆ, ಬಾಳೆ ಬೆಳೆಗಳು ಸಂಪೂರ್ಣ ನೆಲಕ್ಕೆ ಉದುರಿವೆ.
ತಾಲೂಕಿನ ಕಾಗರಾಳ, ಹಾವಿನಾಳ, ಶೆಳ್ಳಗಿ, ಮುಷ್ಠಳ್ಳಿ, ಬೇವಿನಾಳ, ಹೆಮ್ಮಡಗಿ ಸೂಗೂರ ಚೌಡೇಶ್ವರಿಹಾಳ, ಕರ್ನಾಳ, ಹೆಮನೂರ ಸೇರಿದಂತೆ ಇತರೆ ಗ್ರಾಮಗಳಲಿ ಭತ್ತ, ಸಜ್ಜೆ ಬೆಳೆಗಳು ನಷ್ಟವಾಗಿದ್ದರೆ ಹಂದ್ರಾಳ, ಆಲ್ದಾಳ, ದೇವಾಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆ ಹಾಳಾಗಿದೆ. ತಾಲೂಕಿನ ಬಿಜಾಸ್ಪೂರ, ನಗನೂರ, ಸೂಗೂರ ಕವಡಿಮಟ್ಟಿ ಗ್ರಾಮಗಳಲ್ಲಿ ಬೆಳೆದಿದ್ದ ಪಪ್ಪಾಯಿ, ಚಿಕ್ಕು, ಬಾಳೆ ಬೆಳೆಗಳು ನೆಲಕ್ಕೆ ಉದುರಿ ಬಿದ್ದಿವೆ.
ಹಸನಾಪುರ ಗ್ರಾಮದಲಿ ಸಿಡಿಲು ಬಡಿದು ಹೋರಿ ಅಸುನಿಗಿದ್ದರೆ ಚಂದ್ಲಾಪುರ ಗ್ರಾಮದಲ್ಲಿ ಸೊಪ್ಪಿ ಬಣವೆ ಭಸ್ಮವಾಗಿದೆ. ಬೆಳೆ ನಷ್ಟ ಕುರಿತು ಈಗಾಗಲೆ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಬೆಳೆ ನಷ್ಟ ಕುರಿತು ಜಂಟಿ ಸರ್ವೆ ಕಾರ್ಯ ಭರದಿಂದ ನಡೆದಿದ್ದು, ಅಂತಿಮ ವರದಿ ಸರಕಾರಕ್ಕೆ ಸಲ್ಲಿಸಬೇಕಿದೆ ಎಂದು ಕೃಷಿ ಅಧಿಕಾರಿಗಳು ತಿಳಿದ್ದಾರೆ.
ಅಕಾಲಿಕ ಮಳೆಗೆ ತಾಲೂಕಿನಲ್ಲಿ ಭತ್ತ, ಸಜ್ಜೆ ಸೇರಿ ಇತರೆ ಬೆಳೆಗಳು ಒಟ್ಟು 7 ನೂರು ಹೆಕ್ಟೇರ್ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿವೆ. ಈ ಕುರಿತು ಈಗಾಗಲೇ ಕಂದಾಯ ಮತ್ತು ಕೃಷಿ ಇಲಾಖೆ ಸೇರಿ ಜಂಟಿಯಾಗಿ ಸರ್ವೆ ಮಾಡಿದ್ದು, ಶೀಘ್ರವೇ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು.
ಧಾನಪ್ಪ ಕತ್ನಳ್ಳಿ,
ಸಹಾಯಕ ಕೃಷಿ ನಿರ್ದೇಶಕ ಸುರಪುರ
ಬಹುತೇಕ ಭತ್ತ ಕೊಯ್ಲು ಮಾಡಲಾಗಿದೆ ಶೇ. 40ರಷ್ಟು ಕೊಯ್ಲು ಮಾಡಬೇಕಿತ್ತು.ಆದರೆ ಅಕಾಲಿಕ ಮಳಗೆ ಕೊಯ್ಲು ಹಂತ್ತದಲ್ಲಿದ್ದ ಭತ್ತ ಮತ್ತು ಸಜ್ಜೆ ನೆಲಕ್ಕಚಿದೆ. ಈ ಕುರಿತು ಸರ್ವೇ ಮಾಡಿದ್ದು, ಮೇಲಾಧಿ ಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
ಭೀಮರಾಯ ನಾಯಕ,
ಕೃಷಿ ಅಧಿಕಾರಿ