Advertisement

ವಿಂಶತಿ ಸಂಭ್ರಮದಲ್ಲಿ ಸುರಕ್ಷಾದಂತ ಚಿಕಿತ್ಸಾಲಯ

03:45 AM Jul 06, 2017 | Team Udayavani |

ಮಂಜೇಶ್ವರ: ಸುರಕ್ಷಾ ದಂತ ಚಿಕಿತ್ಸಾಲಯದ ವಿಂಶತಿಯ ಸಂಭ್ರಮವನ್ನು ಬಹಳ ವಿಶಿಷ್ಟ ರೀತಿಯಿಂದ ಆಚರಿಸಲಾಯಿತು.

Advertisement

1997ರ ಜುಲೈ 3ರಂದು ಅಂದಿನ ಬಂಟ್ವಾಳ ಕ್ಷೇತ್ರದ ಶಾಸಕರಾಗಿದ್ದ  ಬಿ. ರಮಾನಾಥ ರೈ ಅವರಿಂದ ಉದ್ಘಾಟನೆಗೊಂಡು 20 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ನೆನಪಿನಲ್ಲಿ 2017ರ ಜುಲೈ 3ರಂದು ಸುರಕ್ಷಾ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲ ರೋಗಿಗಳಿಗೆ ಉಚಿತವಾಗಿ ಸಾಗುವಾನಿ ಮತ್ತು ನೇರಳೆ ಗಿಡಗಳನ್ನು ನೀಡಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಲಾಯಿತು. 

20 ವರ್ಷಗಳ ಹಿಂದೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಂದಿನ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರಾಗಿದ್ದ ಅಹ್ಮದ್‌ ಕುಂಞಿ ಅವರೇ ಇಂದೂ ಕೂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗಿಸಿ ಶುಭ ಹಾರೈಸಿದರು. ಅವರು ಸಾಂಕೇತಿಕವಾಗಿ ಗಿಡ ವಿತರಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಗಿಗಳಿಗೆ ಉನ್ನತ ಮಟ್ಟದ ದಂತ ಚಿಕಿತ್ಸೆ ನೀಡುವುದರ ಜತೆಗೆ, ವೈದ್ಯಕೀಯ ಲೇಖನಗಳನ್ನು ಬರೆದು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿರುವ ಡಾ| ಡಾ| ಮುರಲೀ ಮೋಹನ್‌ ಚೂಂತಾರು ಮತ್ತು ಡಾ| ರಾಜಶ್ರೀ ದಂಪತಿಯನ್ನು ಅಭಿನಂದಿಸಿದರು. ಜನರಲ್ಲಿ ಹಸಿರು ಪ್ರಜ್ಞೆ ಮೂಡಿಸುವ ದಿಶೆಯಲ್ಲಿ ಉಚಿತವಾಗಿ ಗಿಡ ನೀಡಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದರು. ಗಿಡ ಮರಗಳನ್ನು ನೆಟ್ಟು ಪರಿಸರವನ್ನು ಶುಚಿಯಾಗಿಸಿಟ್ಟುಕೊಂಡಲ್ಲಿ ಸ್ವತ್ಛ ಗಾಳಿ ಬೆಳಕು ನೀರು ದೊರಕಿ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.

ಚೂಂತಾರು ಸರೋನಿ ಭಟ್‌ ಪ್ರತಿಷ್ಠಾನ ಮತ್ತು ಸುರಕ್ಷಾ ದಂತ ಚಿಕಿತ್ಸಾಲಯ ಇದರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಜರಗಿತು. ಸುಮಾರು ನೂರಕ್ಕೂ ಹೆಚ್ಚು ಮಂದಿಗೆ ಗಿಡಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next