Advertisement
ನಕಲಿ ದಾಖಲೆ ಪತ್ರ ಸೃಷ್ಟಿಸಿ ಬಡವರಿಗಾಗಿರುವ ಕಲ್ಯಾಣ ಪಿಂಚಣಿಯನ್ನು ಲಪಟಾಯಿಸುತ್ತಿದ್ದವರಲ್ಲಿ ತಿಂಗಳಿಗೆ ಒಂದು ಲಕ್ಷ ರೂ.ಗಿಂತಲೂ ಅಧಿಕ ವೇತನ ಪಡೆಯುತ್ತಿರುವ ಗಜೆಟೆಡ್ ಶ್ರೇಣಿಯಲ್ಲಿರುವ ಉನ್ನತ ಸರಕಾರಿ ಅಧಿಕಾರಿಗಳು ಹಾಗೂ ಪ್ರೊಫೆಸರ್ಗಳೂ ಒಳಗೊಂಡಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ 373, ಶಿಕ್ಷಣ ಇಲಾಖೆಯ 224, ಮೆಡಿಕಲ್ ಶಿಕ್ಷಣ ಇಲಾಖೆಯ 124, ಆಯುಷ್ ಯೋಜನೆಯ 114, ಪಶುಸಂಗೋಪನ ಇಲಾಖೆಯ 47, ತಾಂತ್ರಿಕ ಶಿಕ್ಷಣ ಇಲಾಖೆಯ 46, ಹೋಮಿಯೋಪತಿ 41, ಕೃಷಿ 25, ಕಂದಾಯ 35, ಸಾಮಾಜಿಕ ನ್ಯಾಯ 34, ಇನ್ಶೂರೆನ್ಸ್ ಮೆಡಿಕಲ್ ಸೈನ್ಸ್ 31, ಕಾಲೇಜು ಎಜುಕೇಶನ್ 27, ಮಾರಾಟ ತೆರಿಗೆ 14, ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಯ 13, ಗ್ರಾಮಾಭಿವೃದ್ಧಿ, ಪೊಲೀಸ್ ಇಲಾಖೆಯ, ಪಿಎಸ್ಸಿ, ಆಯುರ್ವೇದ ವೈದ್ಯಕೀಯ ಶಿಕ್ಷಣ ಇಲಾಖೆಯ ತಲಾ 10 ಮಂದಿ ಸಿಬಂದಿ ನಕಲಿ ದಾಖಲೆ ಸೃಷ್ಟಿಸಿ ಪಿಂಚಣಿ ಪಡೆಯುತ್ತಿದ್ದಾರೆ. ತಿಂಗಳಿಗೆ ತಲಾ 1,600 ರೂ. ಹಣ ಎಗರಿಸಿದ್ದಾಗಿ ತಿಳಿದು ಬಂದಿದೆ. ಕಲ್ಯಾಣ ಪಿಂಚಣಿಯನ್ನು ಅಕ್ರಮವಾಗಿ ಪಡೆಯುತ್ತಿರುವವರನ್ನು ಪತ್ತೆ ಹಚ್ಚಲು ರಾಜ್ಯ ಹಣಕಾಸು ಇಲಾಖೆ ನೀಡಿದ ನಿರ್ದೇಶನದ ಪ್ರಕಾರ ಇಂಫಾರ್ಮೇಶನ್ ಕೇರಳ ಮಿಷನ್ ನಡೆಸಿದ ತನಿಖೆಯಲ್ಲಿ ಪಿಂಚಣಿ ವಂಚನೆ ಬಯಲಾಗಿದೆ. ಕಠಿನ ಕ್ರಮ
ಬಡವರಿಗಾಗಿ ಇರುವ ಸಾಮಾಜಿಕ ಸುರಕ್ಷಾ ಕಲ್ಯಾಣ ಪಿಂಚಣಿಯನ್ನು ನಕಲಿಯಾಗಿ ಪಡೆದು ವಂಚಿಸಿದ ಸರಕಾರಿ ಸಿಬಂದಿಗಳ ವಿರುದ್ಧ ಕಠಿನ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹಣಕಾಸು ಖಾತೆ ಸಚಿವ ಕೆ.ಎನ್. ಬಾಲಗೋಪಾಲನ್ ತಿಳಿಸಿದ್ದಾರೆ.