Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಜೆಡಿಎಸ್ನಲ್ಲೇ ಇದ್ದು ಬಿಜೆಪಿ ಬೆಂಬಲಿಸುವೆ. ಆದರೆ ಸಿಎಎ, ಹಿಜಾಬ್, ಆಝಾನ್ಗೆ ವಿರೋಧಿಸುವ ಬಿಜೆಪಿಯ ಸಿದ್ಧಾಂತಗಳನ್ನು ಒಪ್ಪಲಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಲ್ಲಡ್ಕ ಶಾಲೆಗೆ ಭೇಟಿ ನೀಡಿದಾಗ ನಾನು ವಿರೋಧಿಸಿದ್ದೆ. ನಮ್ಮ ನಾಯಕರು ತಪ್ಪು ಮಾಡಿದರೆ ಅದನ್ನೂ ಪ್ರಶ್ನಿಸುವೆ ಹಾಗೂ ಖಂಡಿ ಸುವೆ ಎಂದು ಹೇಳಿದರು.
ಈ ಲೋಕಸಭಾ ಚುನಾವಣೆಯಲ್ಲಿ ನಾನು ಸ್ವತಂತ್ರವಾಗಿ ಸ್ಪರ್ಧಿಸುವಂತೆ ನನ್ನ ಬೆಂಬಲಿಗರು ಒತ್ತಾ ಯಿಸುತ್ತಿದ್ದಾರೆ. ನಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಾ. 28ರಂದು ಕಂಕನಾಡಿಯಲ್ಲಿ ಆಯೋ ಜಿಸಲಾಗಿರುವ ಸಭೆ ಯಲ್ಲಿ ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿ ಸುವುದಾಗಿ ತಿಳಿಸಿದರು. ಕಾಂಗ್ರೆಸ್ ಯಾರಪ್ಪನ ಆಸ್ತಿಯಲ್ಲ!
ಮರಳಿ ಕಾಂಗ್ರೆಸ್ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಕ್ಷೇತ್ರದ ನಾಯಕರು ಕಾಂಗ್ರೆಸ್ ಸೇರ್ಪಡೆಗೆ ವಿರೋಧಿಸಿದ್ದಾರೆ ಎಂದು ಕೇಳಿದ್ದೇನೆ. ಕಾಂಗ್ರೆಸ್ ನಾಯಕರು ಗೌರವಯುತವಾಗಿ ಕರೆದಲ್ಲಿ ವಾಪಸಾಗುವೆ.
ಕಾಂಗ್ರೆಸ್ ಯಾರಪ್ಪನ ಆಸ್ತಿಯೂ ಅಲ್ಲ. ನಾನು ಸೇರ್ಪಡೆಯಾಗುವುದಿ ದ್ದರೆ ಯಾರಿಂದಲೂ ತಡೆಯಲೂ ಆಗದು. ಈ ಬಾರಿ ಬೆಂಬಲಿಗರ ಸಲಹೆಯಂತೆ ಮುಂದುವರಿ ಯಲಿದ್ದೇನೆ ಎಂದು ತಿಳಿಸಿದರು.